ಆ್ಯಪ್ನಗರ

ಕೊರೊನಾ ನಡುವೆ ಬೇಡಿಕೆ ಹೆಚ್ಚಿಸಿಕೊಂಡ ಜೀವವಿಮೆ: ಎಲ್‌ಐಸಿ ಪಾಲಿಸಿ ಮಾರಾಟ ಶೇ.17 ಹೆಚ್ಚಳ!

ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಜೀವ ವಿಮಾ ನಿಗಮದ ವಹಿವಾಟು ಗಣನೀಯವಾಗಿ ಸುಧಾರಿಸಿದ್ದು, ಜೂನ್‌ ನಲ್ಲಿ ವಿಮೆ ಮಾರಾಟ 17 ಪರ್ಸೆಂಟ್‌ ಹೆಚ್ಚಳವಾಗಿದೆ. ಎಲ್‌ಐಸಿಯು ಏಪ್ರಿಲ್‌ ಮತ್ತು ಜೂನ್‌ ಅವಧಿಯಲ್ಲಿ ಒಟ್ಟು ಪ್ರೀಮಿಯಂ ಪೈಕಿ ಶೇ. 74ರಷ್ಟನ್ನು ತನ್ನದಾಗಿಸಿದೆ.

Vijaya Karnataka Web 31 Jul 2020, 4:08 pm
ಬೆಂಗಳೂರು: ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಜೀವ ವಿಮಾ ನಿಗಮದ ವಹಿವಾಟು ಗಣನೀಯವಾಗಿ ಸುಧಾರಿಸಿದ್ದು, ಜೂನ್‌ ನಲ್ಲಿ ವಿಮೆ ಮಾರಾಟ 17 ಪರ್ಸೆಂಟ್‌ ಹೆಚ್ಚಳವಾಗಿದೆ. ಎಲ್‌ಐಸಿಯು ಏಪ್ರಿಲ್‌ ಮತ್ತು ಜೂನ್‌ ಅವಧಿಯಲ್ಲಿ ಒಟ್ಟು ಪ್ರೀಮಿಯಂ ಪೈಕಿ ಶೇ. 74ರಷ್ಟನ್ನು ತನ್ನದಾಗಿಸಿದೆ.
Vijaya Karnataka Web lic


ಸುಮಾರು 20 ಲಕ್ಷ ಹೊಸ ಪಾಲಿಸಿಗಳ ಮಾರಾಟ ನಡೆದಿದೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಎಲ್‌ಐಸಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಸಿ ಸುಶೀಲ್‌ ಕುಮಾರ್‌ ತಿಳಿಸಿದ್ದಾರೆ.

ಎಲ್‌ಐಸಿಯು ಶೀಘ್ರದಲ್ಲೇ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಬಿಡುಗಡೆಗೊಳಿಸಲಿದೆ. ಇದರಿಂದ ಮೊಬೈಲ್‌ ಮೂಲಕವೇ ಅಗತ್ಯ ದಾಖಲಾತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಆಗಸ್ಟ್‌ 1ರಿಂದ ಶೇ.12 ಇಪಿಎಫ್‌ ದೇಣಿಗೆ ಕಡಿತ: ಮತ್ತೆ ಹಳೇ ನಿಯಮಗಳ ಜಾರಿ!

ಎಲ್‌ಐಸಿಯಲ್ಲಿ ಎಲ್ಲ ಆನ್‌ಲೈನ್‌ ಪಾವತಿಯ ವ್ಯವಸ್ಥೆಗಳನ್ನು ತೆರೆದಿರುವುದರಿಂದ ಕೋವಿಡ್‌ ಬಿಕ್ಕಟ್ಟಿನ ನಂತರವೂ ಪ್ರೀಮಿಯಂ ಆದಾಯ ಸಂಗ್ರಹದಲ್ಲಿ ಕೊರತೆ ಉಂಟಾಗಿಲ್ಲ. ಒಟ್ಟು 33,000ಕ್ಕೂ ಹೆಚ್ಚು ಪ್ರೀಮಿಯಂ ಸಂಗ್ರಹದ ಕಚೇರಿಗಳನ್ನು ಹೊಂದಿದ್ದೇವೆ. ಸಿಎಸ್‌ಸಿ ಇ-ಆಡಳಿತ ಕೇಂದ್ರಗಳಲ್ಲಿ ಮತ್ತು ಐಡಿಬಿಐ ಸೇರಿದಂತೆ ಹಲವು ಬ್ಯಾಂಕ್‌ಗಳ ಕೌಂಟರ್‌ಗಳಲ್ಲಿ ಕೂಡ ಪ್ರೀಮಿಯಂ ಮೊತ್ತವನ್ನು ಪಾವತಿಸಲು ಅವಕಾಶ ಇದೆ.

ದೀಪಾವಳಿ ಹೊತ್ತಿಗೆ ₹65000ಕ್ಕೆ ಏರಲಿದೆ‌ ಚಿನ್ನದ ಬೆಲೆ? ದೇಸಿ ಚಿನ್ನ ಸದ್ಬಳಕೆ ತಂತ್ರ!

ಕೊರೊನಾ ಕಾರಣದಿಂದ ಮೃತಪಟ್ಟ 467 ಪಾಲಿಸಿದಾರರ ಕುಟುಂಬಗಳನ್ನು ಸಂಪರ್ಕಿಸಿ ವಿಮೆ ಕ್ಲೇಮ್‌ ಇತ್ಯರ್ಥ ಮಾಡಲಾಗಿದೆ. ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಪ್ರತಿಯೊಬ್ಬರೂ ವಿಮೆ ಹೊಂದುವುದು ಅವಶ್ಯಕ ಎಂದು ವ್ಯವಸ್ಥಾಪಕ ನಿರ್ದೇಶಕ ಟಿ.ಸಿ ಸುಶೀಲ್‌ ಕುಮಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ