ಆ್ಯಪ್ನಗರ

ಚಕ್ರ ಬಡ್ಡಿ ಮನ್ನಾ, ಕ್ಯಾಶ್‌ಬ್ಯಾಕ್‌ಗೆ ಬ್ಯಾಂಕ್‌ಗಳಿಗೆ ಡೆಡ್‌ಲೈನ್‌ ನೀಡಿದ ಆರ್‌ಬಿಐ

2020ರ ಮಾರ್ಚ್‌ 1 ರಿಂದ 2020 ಆಗಸ್ಟ್‌ 31ರ ಅವಧಿಯಲ್ಲಿನ ಚಕ್ರ ಬಡ್ಡಿ ಮನ್ನಾ ಆಗಲಿದ್ದು, ​ಗೃಹ ಸಾಲ, ಶಿಕ್ಷಣ ಸಾಲ, ಕ್ರೆಡಿಟ್‌ ಕಾರ್ಡ್‌ ಬಾಕಿ, ಕನ್‌ಸ್ಯೂಮರ್‌ ಡ್ಯೂರಬಲ್‌ ಲೋನ್‌ ಇದರಲ್ಲಿ ಬರಲಿದೆ.

Agencies 27 Oct 2020, 6:59 pm
ಮುಂಬಯಿ: ಮೊರಟೋರಿಯಂ ಅವಧಿಯ ಚಕ್ರ ಬಡ್ಡಿಯನ್ನು ನವೆಂಬರ್‌ 5ರೊಳಗೆ ಮನ್ನಾ ಮಾಡುವಂತೆ ಬ್ಯಾಂಕ್‌ಗಳಿಗೆ ರಿಸರ್ವ್‌ ಬ್ಯಾಂಕ್‌ ಸೂಚಿಸಿದೆ.
Vijaya Karnataka Web money


2 ಕೋಟಿ ರೂ. ತನಕದ ಸಾಲಗಳಿಗೆ 6 ತಿಂಗಳಿನ ಮೊರಟೋರಿಯಂ ಅವಧಿಯಲ್ಲಿನ ಬಡ್ಡಿಯ ಮೇಲಿನ ಬಡ್ಡಿ ಮನ್ನಾ ಆಗಲಿದೆ. ಸರಕಾರ ಕಳೆದ ಶುಕ್ರವಾರ, ಚಕ್ರ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಘೋಷಿಸಿತ್ತು.

ಗೃಹ ಸಾಲ, ಶಿಕ್ಷಣ ಸಾಲ, ಕ್ರೆಡಿಟ್‌ ಕಾರ್ಡ್‌ ಬಾಕಿ, ಕನ್‌ಸ್ಯೂಮರ್‌ ಡ್ಯೂರಬಲ್‌ ಲೋನ್‌ ಇದರಲ್ಲಿ ಬರುತ್ತವೆ. 2020ರ ಮಾರ್ಚ್‌ 1 ರಿಂದ 2020 ಆಗಸ್ಟ್‌ 31ರ ಅವಧಿಯಲ್ಲಿನ ಚಕ್ರ ಬಡ್ಡಿ ಮನ್ನಾ ಆಗಲಿದೆ.

ಲೋನ್‌ ಮೊರಟೊರಿಯಂ: ಚಕ್ರ ಬಡ್ಡಿ ಮನ್ನಾ ಮಾಡಿದ ಕೇಂದ್ರ ಸರಕಾರ, ಗ್ರಾಹಕರಿಗೆ ದಸರಾ, ದೀಪಾವಳಿ ಬೋನಸ್‌!
"ನಿಗದಿತ ಕಾಲಮಿತಿಯೊಳಗೆಯೇ ಎಲ್ಲ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳು ಚಕ್ರ ಬಡ್ಡಿ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು" ಎಂದು ಆರ್‌ಬಿಐ ತನ್ನ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಲಾಕ್‌ಡೌನ್‌ನಲ್ಲಿ ಇಎಂಐ ಕಟ್ಟಿದವರಿಗೆ ಸಿಗಲಿದೆ 'ದೀಪಾವಳಿ ಬೋನಸ್' ಕ್ಯಾಶ್‌ಬ್ಯಾಕ್
ಮೊರಟೋರಿಯಂ ಆಯ್ಕೆ ಮಾಡದವರಿಗೂ ಯೋಜನೆ ಅನ್ವಯಿಸುತ್ತಿದ್ದು, ಅವರಿಗೆ ಉತ್ತೇಜನ ರೂಪದಲ್ಲಿ (ಕ್ಯಾಶ್‌ಬ್ಯಾಕ್‌) ಚಕ್ರ ಬಡ್ಡಿಯ ಮೊತ್ತ ಮರು ಪಾವತಿಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ