ಆ್ಯಪ್ನಗರ

7ನೇ ಬಾರಿಗೆ ನೀರವ್‌ ಮೋದಿ ಜಾಮೀನು ತಿರಸ್ಕರಿಸಿದ ಲಂಡನ್‌ ನ್ಯಾಯಾಲಯ

ಕಳೆದ ವರ್ಷ ಜಿಲ್ಲಾ ನ್ಯಾಯಾಧೀಶರು ನಾಲ್ಕು ಬಾರಿ ನೀರವ್‌ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ್ದರೆ, ಬಳಿಕ ಲಂಡನ್‌ ಹೈಕೋರ್ಟ್‌ ಕೂಡ ಎರಡು ಬಾರಿ ಜಾಮೀನು ಸಾಧ್ಯವಿಲ್ಲ ಎಂದಿತ್ತು.

Agencies 26 Oct 2020, 11:23 pm
Vijaya Karnataka Web Nirav Modi
ಲಂಡನ್‌: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ಬಹು ಕೋಟಿ ಸಾಲ ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ವಜ್ರ ಉದ್ಯಮಿ ನೀರವ್‌ ಮೋದಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.

ಈ ಮೂಲಕ ಬ್ರಿಟನ್‌ನಲ್ಲಿನ ಕೋರ್ಟ್‌ಗಳು ಒಟ್ಟು ಏಳು ಬಾರಿ ನೀರವ್‌ಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದಂತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿ, 'ಸಿಬಿಐ , ವಿದೇಶಾಂಗ ಸಚಿವಾಲಯ ಮತ್ತು ಭಾರತದ ಪರ ವಾದಿಸುತ್ತಿರುವ ಕ್ರೌನ್‌ ಪ್ರಾಸಿಕ್ಯೂಷನ್‌ ಸರ್ವಿಸಸ್‌ ನಡುವಿನ ಉತ್ತಮ ಸಾಮರಸ್ಯವನ್ನು ಇದು ಸಾಬೀತುಪಡಿಸಿದೆ' ಎಂದಿದ್ದಾರೆ.

ನೀರವ್‌ ಮೋದಿ ‘ಬಲಿಪಶು’, ಆತನಿಗೆ ಭಾರತದಲ್ಲಿ ನ್ಯಾಯ ಸಿಗದು ಎಂದ ನಿವೃತ್ತ ನ್ಯಾ. ಕಾಟ್ಜು
ಕಳೆದ ವರ್ಷ ಜಿಲ್ಲಾ ನ್ಯಾಯಾಧೀಶರು ಒಟ್ಟು ನಾಲ್ಕು ಬಾರಿ ನೀರವ್‌ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ್ದರು. ಬಳಿಕ ಲಂಡನ್‌ ಹೈಕೋರ್ಟ್‌ನಲ್ಲಿ ಕೂಡ ಎರಡು ಬಾರಿ ಜಾಮೀನು ಸಾಧ್ಯವಿಲ್ಲ ಎನ್ನಲಾಗಿತ್ತು. ಇನ್ನು ಭಾರತಕ್ಕೆ ನೀರವ್‌ನನ್ನು ಗಡಿಪಾರು ಮಾಡುವ ಕುರಿತು ಸಿಬಿಐ ಸಲ್ಲಿಸಿರುವ ಮನವಿಯ ವಿಚಾರಣೆ ನವೆಂಬರ್‌ 3ಕ್ಕೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ