ಹೊಸದಿಲ್ಲಿ : ಔಷಧ ಉತ್ಪಾದನೆ ವಲಯದ ದಿಗ್ಗಜ, ಮುಂಬಯಿ ಮೂಲದ ಲುಪಿನ್ ಮಾರ್ಚ್ ತ್ರೈಮಾಸಿಕದಲ್ಲಿ 783 ಕೋಟಿ ರೂ.ಗಳ ನಷ್ಟ ದಾಖಲಿಸಿದೆ. ಕಂಪನಿಯು 2016-17ನೇ ಸಾಲಿನ ಇದೇ ಅವಧಿಯಲ್ಲಿ 380 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಲುಪಿನ್ನ ಒಟ್ಟು ಆದಾಯವು 4,033 ಕೋಟಿ ರೂ.ನಷ್ಟಿತ್ತು. ವರ್ಷದ ಹಿಂದೆ ಇದೇ ಅವಧಿಯಲ್ಲಿ 4,253 ಕೋಟಿ ರೂ.ಗಳಷ್ಟು ಇತ್ತು. 2017-18ರ ಇಡೀ ಅವಧಿಗೆ ಲುಪಿನ್ 251 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ.
ಲುಪಿನ್ಗೆ 783 ಕೋಟಿ ರೂ ನಷ್ಟ
ಔಷಧ ಉತ್ಪಾದನೆ ವಲಯದ ದಿಗ್ಗಜ, ಮುಂಬಯಿ ಮೂಲದ ಲುಪಿನ್ ಮಾರ್ಚ್ ತ್ರೈಮಾಸಿಕದಲ್ಲಿ 783 ಕೋಟಿ ರೂ.ಗಳ ನಷ್ಟ ದಾಖಲಿಸಿದೆ. ಕಂಪನಿಯು 2016-17ನೇ ಸಾಲಿನ ಇದೇ ಅವಧಿಯಲ್ಲಿ 380 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.
TNN & Agencies 17 May 2018, 5:00 am