ಆ್ಯಪ್ನಗರ

ದೇಶದ ಶೇ. 25 ರಷ್ಟು ಪಿಎಸ್‌ಬಿ ಎಟಿಎಂಗಳಲ್ಲಿ ವಂಚನೆ ಸಾಧ್ಯತೆ

ದೇಶದ ಸಾರ್ವಜನಿಕ ಉದ್ದಿಮೆ ಬ್ಯಾಂಕ್‌ಗಳ ( ಪಿಎಸ್‌ಬಿ ) ಎಟಿಎಂಗಳ ಪೈಕಿ ಶೇ. 25 ರಷ್ಟು ಎಟಿಎಂಗಳು ವಂಚನೆಗೆ ಗುರಿಯಾಗಬಹುದು ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಶೇ. 74ರಷ್ಟು ಎಟಿಎಂಗಳ ಸಾಫ್ಟ್‌ವೇರ್‌ ಹಳೆಯದಾಗಿರುವುದರಿಂದ ವಂಚನೆಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಸರಕಾರ ತಿಳಿಸಿದೆ.

TIMESOFINDIA.COM 21 Jul 2018, 12:03 pm
ಹೊಸದಿಲ್ಲಿ: ದೇಶದ ಸಾರ್ವಜನಿಕ ಉದ್ದಿಮೆ ಬ್ಯಾಂಕ್‌ಗಳ ( ಪಿಎಸ್‌ಬಿ ) ಎಟಿಎಂಗಳ ಪೈಕಿ ಶೇ. 25 ರಷ್ಟು ಎಟಿಎಂಗಳು ವಂಚನೆಗೆ ಗುರಿಯಾಗಬಹುದು ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಶೇ. 74ರಷ್ಟು ಎಟಿಎಂಗಳ ಸಾಫ್ಟ್‌ವೇರ್‌ ಹಳೆಯದಾಗಿರುವುದರಿಂದ ವಂಚನೆಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಸರಕಾರ ತಿಳಿಸಿದೆ.
Vijaya Karnataka Web ATM


ಸಂಸತ್ ಭವನದಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಸರಕಾರ ಈ ಉತ್ತರ ನೀಡಿದೆ. ಎಟಿಎಂಗಳಲ್ಲಿ ಬಳಸಲಾಗುತ್ತಿರುವ ಸಾಫ್ಟ್‌ವೇರ್‌ಗಳು ಹಳೆಯದಾಗಿದೆ, ಅಥವಾ ಸರಿಯಾದ ಸಾಫ್ಟ್‌ವೇರ್‌ ಅಳವಡಿಕೆಯಾಗಿಲ್ಲ ಎಂದು ಉತ್ತರಿಸಿದೆ. ಆದರೆ, ಖಾಸಗಿ ಬ್ಯಾಂಕ್‌ಗಳ ಎಟಿಎಂಗಳ ಬಗ್ಗೆ ಕೇಂದ್ರ ಸರಕಾರ ಮಾಹಿತಿ ನೀಡಿಲ್ಲ. ದೇಶದ ಎಟಿಎಂಗಳ ಪೈಕಿ ಶೇ. 89ರಷ್ಟು ಸಾರ್ವಜನಿಕ ಉದ್ದಿಮೆ ಬ್ಯಾಂಕ್‌ಗಳಿಗೆ ಸೇರಿದೆ ಎಂದೂ ಮಾಹಿತಿ ನೀಡಿ೯ದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಖಾಸಗಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸುತ್ತಿದ್ದರೂ ಸಹ ಶೇ. 70 ರಷ್ಟು ಸಾಲ ಮತ್ತು ಠೇವಣಿ ಸೇರಿ ಬ್ಯಾಂಕ್‌ ವ್ಯವಹಾರಗಳು ಸಾರ್ವಜನಿಕ ಉದ್ದಿಮೆ ಬ್ಯಾಂಕ್‌ಗಳದ್ದೇ ಆಗಿದೆ.

ಇತ್ತೀಚಿನ ಕೆಲ ತಿಂಗಳುಗಳಿಂದ ಎಟಿಎಂಗೆ ಸಂಬಂಧಿತ ವಂಚನೆ ಪ್ರಕರಣಗಳು ಹೆಚ್ಚಾಗಿವೆ ಎಂದು ಗ್ರಾಹಕರು ದೂರುತ್ತಿದ್ದಾರೆ. ಹೀಗಾಗಿ, ಬ್ಯಾಂಕ್‌ಗಳು ಕಾಲ ಕಾಲಕ್ಕೆ ತಂತ್ರಾಂಶವನ್ನು ಅಪ್‌ಗ್ರೇಡ್‌ ಮಾಡಿಕೊಳ್ಳಬೇಕು ಹಾಗೂ ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕೆಂದು ಕಳೆದ ತಿಂಗಳು ಆರ್‌ಬಿಐ ನಿರ್ದೇಶನ ನೀಡಿತ್ತು. ಆದರೆ, ಆರ್‌ಬಿಐನ ಕೆಲ ಗಡುವುಗಳನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಬ್ಯಾಂಕ್‌ಗಳು ತಿಳಿಸಿತ್ತು.

ಇನ್ನು, ಜುಲೈ 2017 ರಿಂದ ಜೂನ್ 2018 ರವರೆಗೆ ಆರ್‌ಬಿಐಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಪಟ್ಟ ಸುಮಾರು 25 ಸಾವಿರ ದೂರುಗಳು ಬಂದಿವೆ ಎಂದು ಸಂಸತ್‌ಗೆ ಕೇಂದ್ರ ಸರಕಾರ ಮಾಹಿತಿ ನೀಡಿದೆ. ಆದರೆ, ಈ ಅವಧಿಯಲ್ಲಿ 861 ಕೋಟಿ ರೂ. ಯಷ್ಟು ವ್ಯವಹಾರ ನಡೆದಿದ್ದು, ಹೀಗಾಗಿ ವಂಚನೆ ಕಡಿಮೆ ಎಂದು ಸಹ ಸಂಸತ್‌ನಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ