ಆ್ಯಪ್ನಗರ

ಷೇರು ಮಾರುಕಟ್ಟೆಯಲ್ಲಿ ಮೋಡ ಕವಿದ ವಾತಾವರಣ, ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ಕಳೆದ ವಾರದಲ್ಲಿ ಭಾರಿ ಏರಿಳಿತ ಕಂಡಿದ್ದ ಷೇರು ಮಾರುಕಟ್ಟೆ ಈ ವಾರದ ಆರಂಭದಲ್ಲಿ ಚೇತರಿಕೆಯ ವಾತಾವರಣ ಕಂಡುಬಂದಿತ್ತು. ಆದರೆ ಮಂಗಳವಾರವೇ ಹೂಡಿಕೆದಾರರ ನಿರೀಕ್ಷೆ ಹುಸಿಯಾಗಿದೆ.

Vijaya Karnataka Web 20 Oct 2020, 10:05 am
ಮುಂಬಯಿ: ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಮಂಗಳಕರವಾಗಿರಲಿಲ್ಲ. ಆರಂಭದಲ್ಲೇ ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಇಳಿಮುಖವಾಗಿದೆ. ಇದು ಹೂಡಿಕೆದಾರರಿಗೆ ನಿರಾಸೆ ತಂದಿದೆ.
Vijaya Karnataka Web ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ


ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಮುಂಬಯಿ ಷೇರು ವಿನಿಮಯ ಪೇಟೆ ಹಾಗೂ ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ ವಹಿವಾಟು ಮಂದಗತಿಯಲ್ಲಿ ಸಾಗಿದೆ.

ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಷೇರು ವಿನಿಮಯ ಪೇಟೆಯಲ್ಲಿ 56 ಅಂಕಗಳ ಇಳಿಕೆ ಕಂಡುಬಂದಿದೆ. ವಾರದ ಆರಂಭ ದಿನ ಸೆನ್ಸೆಕ್ಸ್‌ 40,374 ಅಂಕ ತಲುಪಿದ್ದು, ದಲಾಲ್‌ ಸ್ಟ್ರೀಟ್‌ನಲ್ಲಿ ಡಲ್‌ ಹೊಡೆದಿದೆ.

ರಾಷ್ಟ್ರೀಯ ಷೇರು ವಿನಿಮಯ ಪೇಟೆಯಲ್ಲೂ ಮಂಗಳವಾರ ಪ್ರಗತಿ ಕಂಡು ಬರಲಿಲ್ಲ. ನಿಫ್ಟಿ 18 ಅಂಕಗಳ ಇಳಿಕೆ ಕಂಡು 11,850 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.

ಕಳೆದ ವಾರದಲ್ಲಿ ಭಾರಿ ಏರಿಳಿತ ಕಂಡಿದ್ದ ಷೇರು ಮಾರುಕಟ್ಟೆ ಈ ವಾರದ ಆರಂಭದಲ್ಲಿ ಚೇತರಿಕೆಯ ವಾತಾವರಣ ಕಂಡುಬಂದಿತ್ತು. ಆದರೆ ಮಂಗಳವಾರವೇ ಹೂಡಿಕೆದಾರರ ನಿರೀಕ್ಷೆ ಹುಸಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ