ಆ್ಯಪ್ನಗರ

ಭಾರತದ ಪೌರತ್ವಕ್ಕೆ ಗುಡ್‌ಬೈ: ಪಾಸ್‌ಪೋರ್ಟ್‌ ಒಪ್ಪಿಸಿದ ಮೆಹುಲ್‌ ಚೋಕ್ಸಿ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ(ಪಿಎನ್‌ಬಿ) ಬಹುಕೋಟಿ ವಂಚನೆ ಪ್ರಕರಣದಲ್ಲಿ ದೇಶ ತೊರೆದಿರುವ ವಜ್ರ ವ್ಯಾಪಾರಿ ಮೆಹುಲ್‌ ಚೋಕ್ಸಿ , ತಮ್ಮ ಭಾರತೀಯ ...

TNN 22 Jan 2019, 5:00 am
ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ(ಪಿಎನ್‌ಬಿ) ಬಹುಕೋಟಿ ವಂಚನೆ ಪ್ರಕರಣದಲ್ಲಿ ದೇಶ ತೊರೆದಿರುವ ವಜ್ರ ವ್ಯಾಪಾರಿ ಮೆಹುಲ್‌ ಚೋಕ್ಸಿ , ತಮ್ಮ ಭಾರತೀಯ ಪಾಸ್‌ಪೋರ್ಟ್‌ ಅನ್ನು ಗುಯಾನಾದಲ್ಲಿನ ಹೈ ಕಮಿಷನ್‌ಗೆ ಒಪ್ಪಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Vijaya Karnataka Web mehul choksi surrenders his indian passport
ಭಾರತದ ಪೌರತ್ವಕ್ಕೆ ಗುಡ್‌ಬೈ: ಪಾಸ್‌ಪೋರ್ಟ್‌ ಒಪ್ಪಿಸಿದ ಮೆಹುಲ್‌ ಚೋಕ್ಸಿ


ಭಾರತದ ಪೌರತ್ವ ಬೇಡ ಎಂದಿರುವ ಅವರು ತಮ್ಮ ಪಾಸ್‌ಪೋರ್ಟ್‌ ಅನ್ನು ವಾಪಸ್‌ ಕೊಟ್ಟಿದ್ದಾರೆ. ವಿದೇಶಿ ಪೌರತ್ವ ಪಡೆಯಲು ಇಚ್ಛಿಸುವ ಭಾರತೀಯರು ತಮ್ಮ ಭಾರತದ ಪಾಸ್‌ಪೋರ್ಟ್‌ ಅನ್ನು ವಾಪಸ್‌ ಮಾಡುತ್ತಾರೆ. ಇದೇ ಹಾದಿಯನ್ನು ಜೋಕ್ಸಿ ಅನುಸರಿಸಿದ್ದಾರೆ ಎನ್ನಲಾಗಿದೆ.

ಪಿಎನ್‌ಬಿಯಲ್ಲಿ 13,000 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಚೋಕ್ಸಿ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರಕಾರ ಪ್ರಯತ್ನ ನಡೆಸಿದೆ. ಚೋಕ್ಸಿ ಹಸ್ತಾಂತರಕ್ಕಾಗಿ ಭಾರತ ಸರಕಾರವು ಕಳೆದ ಆಗಸ್ಟ್‌ನಲ್ಲಿ ಆಂಟಿಗುವಾ ಸರಕಾರವನ್ನು ಕೋರಿತ್ತು.

ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಾದ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್‌ ಮೋದಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಒಂದು ವರ್ಷದಿಂದ ಆಂಟಿಗುವಾದಲ್ಲಿ ನೆಲೆಸಿರುವ ಚೋಕ್ಸಿ, ಅನಾರೋಗ್ಯದ ಕಾರಣವನ್ನು ಮುಂದಿಟ್ಟುಕೊಂಡು ಭಾರತಕ್ಕೆ ಬರಲು ನಿರಾಕರಿಸುತ್ತಿದ್ದಾರೆ. ''ಭಾರತಕ್ಕೆ ವಿಚಾರಣೆ ಸಲುವಾಗಿ ಬರಲು 41 ಗಂಟೆಗಳ ಸುದೀರ್ಘ ಪ್ರಯಾಣ ಮಾಡಬೇಕು. ಅನಾರೋಗ್ಯದಿಂದ ಸಾಧ್ಯವಾಗುತ್ತಿಲ್ಲ,'' ಎಂದು ಡಿಸೆಂಬರ್‌ನಲ್ಲಷ್ಟೇ ಚೋಕ್ಸಿ ಕೋರ್ಟ್‌ಗೆ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ