ಆ್ಯಪ್ನಗರ

ಮೆಹುಲ್‌ ಚೋಕ್ಸಿ ಕರೆ ತರಲು ಸಿಬಿಐ ಸಜ್ಜು

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಆರೋಪಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಕರೆ ತರಲು ಸಿಬಿಐ, ಇ.ಡಿ ಪ್ರಯತ್ನ ಫಲ ಕಾಣುವ ಸಾಧ್ಯತೆ ಇದೆ. ವೆಸ್ಟ್‌ ಇಂಡೀಸ್‌ನಲ್ಲಿ ಚೋಕ್ಸಿ ಹಾಗೂ ಮತ್ತೊಬ್ಬ ವಿತ್ತಾಪರಾಧಿ ಜತಿನ್‌ ಮೆಹ್ತಾ ಇದ್ದಾರೆ ಎನ್ನಲಾಗಿದ್ದು, ಇವರನ್ನು ಕರೆ ತರಲು ಸಿಬಿಐ, ಇಡಿ ಅಧಿಕಾರಿಗಳು ಯತ್ನಿಸುತ್ತಿದ್ದಾರೆ.

Vijaya Karnataka Web 27 Jan 2019, 5:00 am
ಹೊಸದಿಲ್ಲಿ : ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಆರೋಪಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಕರೆ ತರಲು ಸಿಬಿಐ, ಇ.ಡಿ ಪ್ರಯತ್ನ ಫಲ ಕಾಣುವ ಸಾಧ್ಯತೆ ಇದೆ. ವೆಸ್ಟ್‌ ಇಂಡೀಸ್‌ನಲ್ಲಿ ಚೋಕ್ಸಿ ಹಾಗೂ ಮತ್ತೊಬ್ಬ ವಿತ್ತಾಪರಾಧಿ ಜತಿನ್‌ ಮೆಹ್ತಾ ಇದ್ದಾರೆ ಎನ್ನಲಾಗಿದ್ದು, ಇವರನ್ನು ಕರೆ ತರಲು ಸಿಬಿಐ, ಇಡಿ ಅಧಿಕಾರಿಗಳು ಯತ್ನಿಸುತ್ತಿದ್ದಾರೆ.
Vijaya Karnataka Web mehul choksi to be brought back
ಮೆಹುಲ್‌ ಚೋಕ್ಸಿ ಕರೆ ತರಲು ಸಿಬಿಐ ಸಜ್ಜು


ಸಿಬಿಐ ಹಾಗೂ ಇ.ಡಿ ಅಧಿಕಾರಿಗಳ ತಂಡ ಶೀಘ್ರದಲ್ಲಿಯೇ ವೆಸ್ಟ್‌ ಇಂಡೀಸ್‌ಗೆ ತೆರಳಲಿದೆ.ಕೆರಿಬಿಯನ್‌ ದ್ವೀಪ ರಾಷ್ಟ್ರಗಳಲ್ಲಿ ಲಭ್ಯವಿರುವ ವಿವಾದಾಸ್ಪದ ಪೇಯ್ಡ್‌ ಪೌರತ್ವ ಯೋಜನೆಗಳ ದುರ್ಲಾಭ ಪಡೆಯಲು ಚೋಕ್ಸಿ ಮೊದಲಾದವರು ಯತ್ನಿಸುತ್ತಿದ್ದಾರೆ. ಚೋಕ್ಸಿ ಇತ್ತೀಚೆಗೆ ಅಂಟಿಗುವಾ ಹಾಗೂ ಬಾರ್ಬುಡಾದ ಪೌರತ್ವ ಪಡೆದಿದ್ದರು. ಭಾರತದ ವಿತ್ತಾಪರಾಧಿಗಳು ಇಂಥ ರಾಷ್ಟ್ರಗಳಲ್ಲಿ ಹೂಡಿಕೆ ಮಾಡುವುದರ ಜತೆಗೆ ಅಲ್ಲಿನ ನಾಗರಿಕತ್ವವನ್ನೂ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ