ಆ್ಯಪ್ನಗರ

ತುಮಕೂರು: ಜಿಎಸ್‌ಟಿ ರಿಯಾಯಿತಿಗೆ ಸಣ್ಣ ಡೀಲರ್‌ಗಳಿಂದ ಮನವಿ!

ಜಿಎಸ್‌ಟಿ ವ್ಯವಸ್ಥೆ ಕೇವಲ ದೊಡ್ಡ ಡೀಲರ್‌ಗಳಿಗೆ ಅನುಕೂಲವಾಗಿದೆ. ಸಣ್ಣ ಡೀಲರ್‌ಗಳಿಗೆ ಇದರಿಂದ ಅನನುಕೂಲವಾಗಿರುವ ಕಾರಣ ಇವರಿಗೆ ರಿಯಾಯಿತಿ ಕಲ್ಪಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಟಿ.ಜೆ. ಗಿರೀಶ್‌ ಮನವಿ ಮಾಡಿದರು.

Vijaya Karnataka Web 30 Jan 2021, 6:25 pm
ತುಮಕೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೇಂದ್ರ ಮತ್ತು ರಾಜ್ಯ ಜಿಎಸ್‌ಟಿ ವ್ಯವಸ್ಥೆ ಕೇವಲ ದೊಡ್ಡ ಡೀಲರ್‌ಗಳಿಗೆ ಅನುಕೂಲವಾಗಿದೆ. ಸಣ್ಣ ಡೀಲರ್‌ಗಳಿಗೆ ಇದರಿಂದ ಅನನುಕೂಲವಾಗಿರುವ ಕಾರಣ ಇವರಿಗೆ ರಿಯಾಯಿತಿ ಕಲ್ಪಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಟಿ.ಜೆ. ಗಿರೀಶ್‌ ಮನವಿ ಮಾಡಿದರು.
Vijaya Karnataka Web GST.bccl


ನಗರದ ಸದಾಶಿವನಗರದ ರಿಂಗ್‌ ರಸ್ತೆ ಬಳಿಯ ಕೇಂದ್ರ ತೆರಿಗೆ ಇಲಾಖೆ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ, ಜಿತೇಂದ್ರ ಕುಮಾರ್‌ ಮೀನಾ ಅವರಿಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ರಿಯಾಯಿತಿ ಬಗ್ಗೆ ದೇಶದ ನಮ್ಮ ಅನೇಕ ಸಂಘಟನೆಗಳು ಮನವಿ ಪತ್ರ ಸಲ್ಲಿಸಿ, ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಸರಕಾರ ಇದನ್ನು ಪರಿಗಣಿಸಿಲ್ಲ. ಇಂದು ಇಡೀ ದೇಶದಲ್ಲಿ ಈ ಸಂಬಂಧ ಪ್ರತಿಭಟನೆ ನಡೆಯುತ್ತಿದ್ದು, ಇದಕ್ಕೆ ನಮ್ಮ ಜಿಲ್ಲಾ ಸಂಘ ಬೆಂಬಲ ವ್ಯಕ್ತಪಡಿಸಿದೆ ಎಂದರು.

830 ಕೋಟಿ ರೂಪಾಯಿ ಜಿಎಸ್‌ಟಿ ವಂಚನೆ ಮಾಡಿತ್ತು ಅಕ್ರಮ ಗುಟ್ಕಾ ಕಾರ್ಖಾನೆ..!

ಕೇಂದ್ರ ತೆರಿಗೆ ಇಲಾಖೆ ಉಪವಿಭಾಗಾಧಿಕಾರಿ ಜಿತೇಂದ್ರ ಕುಮಾರ್‌ ಮೀನಾ ಅವರ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಎಸ್‌ಟಿ ನಷ್ಟ ಪರಿಹಾರವಾಗಿ ಕೇಂದ್ರದಿಂದ ₹6,000 ಕೋಟಿ ಬಿಡುಗಡೆ!

ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್‌.ಲೋಕೇಶ್‌, ಮಾಜಿ ಅಧ್ಯಕ್ಷ ಟಿ.ಆರ್‌. ಲೋಕೇಶ್‌, ಕಾರ್ಯದರ್ಶಿ ಟಿ.ಟಿ. ಸತ್ಯನಾರಾಯಣ, ಕರ ಅಭ್ಯಾಸಗಾರರ ಸಂಘದ ಅಧ್ಯಕ್ಷ ಸುರೇಶ್‌ರಾವ್‌, ಮಾಜಿ ಅಧ್ಯಕ್ಷ ಎಸ್‌. ಪ್ರಕಾಶ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ