ಆ್ಯಪ್ನಗರ

ಮೊಬೈಲ್‌ ಆ್ಯಪ್‌ಗಳಿಂದ ನಿಮ್ಮ ಮಾಹಿತಿಗೆ ಕನ್ನ!

ಮೊಬೈಲ್‌ನಲ್ಲಿರುವ ಕೆಲವು ಆ್ಯಪ್‌ಗಳು ನಿಮ್ಮ ಯೂಸರ್‌ ನೇಮ್‌, ಪಾಸ್‌ವರ್ಡ್‌, ಕ್ರೆಡಿಟ್‌ ಕಾರ್ಡ್‌ ಸೇರಿದಂತೆ ನಾನಾ ಖಾಸಗಿ ಸಂಗತಿಗಳನ್ನು ಮೂರನೇ ವ್ಯಕ್ತಿಗೆ ನೀಡುತ್ತಿವೆ!

Vijaya Karnataka 14 Jul 2018, 8:03 am
ವಾಷಿಂಗ್ಟನ್‌: ಮೊಬೈಲ್‌ನಲ್ಲಿರುವ ಕೆಲವು ಆ್ಯಪ್‌ಗಳು ನಿಮ್ಮ ಯೂಸರ್‌ ನೇಮ್‌, ಪಾಸ್‌ವರ್ಡ್‌, ಕ್ರೆಡಿಟ್‌ ಕಾರ್ಡ್‌ ಸೇರಿದಂತೆ ನಾನಾ ಖಾಸಗಿ ಸಂಗತಿಗಳನ್ನು ಮೂರನೇ ವ್ಯಕ್ತಿಗೆ ನೀಡುತ್ತಿವೆ! ಕೆಲವು ಆ್ಯಪ್‌ಗಳು, ನಿಮ್ಮ ಮೊಬೈಲ್‌ ಚಟುವಟಿಕೆಗಳನ್ನು ರಹಸ್ಯವಾಗಿ ಸ್ಕ್ರೀನ್‌ಶಾಟ್‌ ಮೂಲಕ ಕ್ಲಿಕ್ಕಿಸಿ ಮೂರನೇ ವ್ಯಕ್ತಿಗೆ ರವಾನಿಸುತ್ತಿವೆ ಎನ್ನುವಂಥ ಆಘಾತಕಾರಿ ಮಾಹಿತಿಗಳು ಅಧ್ಯಯನವೊಂದರಿಂದ ಹೊರಬಿದ್ದಿವೆ.
Vijaya Karnataka Web Mobile


''ಆ್ಯಂಡ್ರಾಯ್ಡ್‌ ಫೋನ್‌ಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. 17ಸಾವಿರ ಆ್ಯಪ್‌ಗಳಲ್ಲಿ 9 ಸಾವಿರ ಆ್ಯಪ್‌ಗಳು ಸ್ಕ್ರೀನ್‌ಶಾಟ್‌ಗಳನ್ನು ಮತ್ತು ವಿಡಿಯೊಗಳನ್ನು ಮೂರನೇ ವ್ಯಕ್ತಿ/ಕಂಪನಿ ಜತೆ ಹಂಚಿಕೊಂಡಿವೆ. ಅನೇಕ ಜನಪ್ರಿಯ ಆ್ಯಪ್‌ಗಳೇ ಈ ಕಳ್ಳ ಕೆಲಸವನ್ನು ಮಾಡಿವೆ,'' ಎಂದು ಅಮೆರಿಕದ ನಾರ್ತ್‌ಈಸ್ಟರ್ನ್‌ವಿವಿ ಪ್ರೊಫೆಸರ್‌ ಕ್ರಿಸ್ಟೊ ವಿಲ್ಸನ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ