ಆ್ಯಪ್ನಗರ

ನೋಟು ನಿಷೇಧದ ನಂತರ ಏನಾಗುತ್ತದೆ ಎಂಬ ಅರಿವೇ ಮೋದಿ ಸರಕಾರಕ್ಕೆ ಇರಲಿಲ್ಲ!

ನೋಟು ನಿಷೇಧದ ನಂತರ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಮೇಲೆ ಯಾವ ಪರಿಣಾಮ ಬೀರುತ್ತದೆ ಮತ್ತು ಉದ್ಭವಿಸುವ ಸಮಸ್ಯೆಗಳೇನು ಎಂಬ ಬಗ್ಗೆ ಕೇಂದ್ರ ಸರಕಾರ ಮೌಲ್ಯಮಾಪನವನ್ನೇ ಮಾಡಿರಲಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

Indiatimes 16 Dec 2018, 2:33 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ 500/1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ 2 ವರ್ಷಗಳೇ ಕಳೆದಿದ್ದು, ಇಂದಿಗೂ ಜನಸಾಮಾನ್ಯರು ಕರೆನ್ಸಿ ವಿಚಾರವಾಗಿ ಕಷ್ಟ ಪಡುತ್ತಿದ್ದಾರೆ. ಆದರೆ ನೋಟು ನಿಷೇಧವನ್ನು ಆಗಿಂದಾಗ್ಗೆ ಸಮರ್ಥಿಸಿಕೊಳ್ಳುತ್ತಿದ್ದ ಮೋದಿ ಸರಕಾರ ಇದೀಗ ನೋಟು ನಿಷೇಧದ ನಂತರ ಏನಾಗುತ್ತದೆ ಎಂಬುದರ ಅರಿವಿರಲಿಲ್ಲ ಎಂದು ಒಪ್ಪಿಕೊಂಡಿದೆ.
Vijaya Karnataka Web India Rupee note


ಲೋಕಸಭೆಯಲ್ಲಿ ಕಾಸರಗೋಡು ಕ್ಷೇತ್ರದ ಸಿಪಿಐ ಸಂಸದ ಪಿ ಕರುಣಾಕರನ್‌ ಮತ್ತು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ತೇಜ್‌ ಪ್ರತಾಪ್‌ ಯಾದವ್‌ ಕೇಳಿದ ಪ್ರಶ್ನೆಗೆ ವಿತ್ತ ಸಚಿವಾಲಯದ ಸಹಾಯಕ ಸಚಿವ ಪೊನ್‌ ರಾಧಾಕೃಷ್ಣನ್‌ ಉತ್ತರಿಸುವ ವೇಳೆ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಚುನಾವಣೆ ಪ್ರಣಾಳಿಕೆಯಿಂದ ಸಾಲಮನ್ನಾ ವಿಚಾರ ತೆಗೆದು ಹಾಕಬೇಕು: ರಘುರಾಮ್‌ ರಾಜನ್‌

ನೋಟು ನಿಷೇಧದ ನಂತರ ಭಾರತದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರಕಾರ ಮೌಲ್ಯಮಾಪನ ಮಾಡಿರಲಿಲ್ಲ ಎಂದು ರಾಧಾಕೃಷ್ಣನ್‌ ತಿಳಿಸಿದ್ದಾರೆ.

ಕೇಂದ್ರ ಸರಕಾರ ನೋಟು ನಿಷೇಧದಿಂದ ಭಾರತದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಲಾಗಿತ್ತೆ? ಅದರಿಂದ ಏನೇನು ತೊಂದರೆಗಳು ಎದುರಾಗುತ್ತವೆ ಎಂಬುದನ್ನು ಪರಿಶೀಲನೆ ಮಾಡಿತ್ತೆ? ಎಂಬ ಪ್ರಶ್ನೆ 'ಇಲ್ಲ' ಎಂದು ಉತ್ತರಿಸಿದ್ದಾರೆ.

ಕೇವಲ ಕಪ್ಪುಹಣ ಮತ್ತು ಕಳ್ಳ ನೋಟುಗಳಿಗೆ ಕಡಿವಾಣ ಹಾಕಲು ನೋಟು ನಿಷೇಧಕ್ಕೆ ಮುಂದಾದ ಕ್ರಮಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸಮ್ಮತಿ ಬಗ್ಗೆ ವಿತ್ತ ಸಚಿವ ಅರುಣ್‌ ಜೇಟ್ಲಿ ಉತ್ತರಿಸಲು ನಿರಾಕರಿಸಿದ್ದಾರೆ.

ಮೋದಿ ಸರಕಾರದ ಸಡನ್‌ ನಿರ್ಧಾರದಿಂದ ಚಲಾವಣೆಯಲ್ಲಿದ್ದ ಶೇ.85ರಷ್ಟು ಕರೆನ್ಸಿ ತನ್ನ ಮೌಲ್ಯ ಕಳೆದುಕೊಂಡಿತ್ತು. ಆದರೆ ಶೇ.99.3 ರಷ್ಟು ಅಪಮೌಲ್ಯಗೊಂಡ ಕರೆನ್ಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ವಾಪಾಸಾಗಿತ್ತು.
ದೊಡ್ಡ ಮೊತ್ತದ ನೋಟು ನಿಷೇಧದ ಬಳಿಕ 2,000 ರೂ. ನೋಟಿನ ಅವಶ್ಯಕತೆಯಿತ್ತೆ?: ಉದಯ್‌ ಕೋಟಕ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ