ಆ್ಯಪ್ನಗರ

ಬಿಒಬಿ, ವಿಜಯ, ದೇನಾ ವಿಲೀನಕ್ಕೆ ಮೂಡೀಸ್‌ ಸ್ವಾಗತ

ಸಾರ್ವಜನಿಕ ವಲಯದ ಬ್ಯಾಂಕ್‌ ಆಫ್‌ ಬರೋಡಾ, ವಿಜಯ ಬ್ಯಾಂಕ್‌ ಹಾಗೂ ದೇನಾ ಬ್ಯಾಂಕ್‌ನ ವಿಲೀನವು ಸಕಾರಾತ್ಮಕ ಬೆಳವಣಿಗೆಯಾಗಲಿದೆ ಎಂದು ಮೂಡೀಸ್‌ ಇನ್ವೆಸ್ಟರ್ರ್ಸ್‌ ಸರ್ವಿಸ್‌ ಸ್ವಾಗತಿಸಿದೆ.

Vijaya Karnataka Web 19 Sep 2018, 5:30 am
ಹೊಸದಿಲ್ಲಿ: ಸಾರ್ವಜನಿಕ ವಲಯದ ಬ್ಯಾಂಕ್‌ ಆಫ್‌ ಬರೋಡಾ, ವಿಜಯ ಬ್ಯಾಂಕ್‌ ಹಾಗೂ ದೇನಾ ಬ್ಯಾಂಕ್‌ನ ವಿಲೀನವು ಸಕಾರಾತ್ಮಕ ಬೆಳವಣಿಗೆಯಾಗಲಿದೆ ಎಂದು ಮೂಡೀಸ್‌ ಇನ್ವೆಸ್ಟರ್ರ್ಸ್‌ ಸರ್ವಿಸ್‌ ಸ್ವಾಗತಿಸಿದೆ.
Vijaya Karnataka Web moodys


ಇದರಿಂದ ಬ್ಯಾಂಕ್‌ನ ಸಾಲ ವಿತರಣೆ ಬಲಿಷ್ಠವಾಗಲಿದೆ. ಹಾಗೂ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಮೂಡೀಸ್‌ ಹೇಳಿದೆ.

ಈ ವಿಲೀನದಿಂದ ಮೂರನೇ ಅತಿ ದೊಡ್ಡ ಬ್ಯಾಂಕ್‌ ಉದಯಿಸಲಿದೆ. ಹೊಸ ಬ್ಯಾಂಕಿಗೆ ಸರಕಾರದಿಂದ ಬಂಡವಾಳದ ಅಗತ್ಯ ಉಂಟಾಗಬಹುದು. ಇಲ್ಲದಿದ್ದರೆ ಸುಗಮ ನಿರ್ವಹಣೆಗೆ ತೊಡಕಾಗಬಹುದು ಎಂದು ಮೂಡೀಸ್‌ ಅಭಿಪ್ರಾಯಪಟ್ಟಿದೆ.

ಷೇರುಗಳ ಏರಿಳಿತ:

ವಿಲೀನ ಪ್ರಸ್ತಾವದ ಹಿನ್ನೆಲೆಯಲ್ಲಿ ಬ್ಯಾಂಕ್‌ ಆಫ್‌ ಬರೋಡಾದ ಷೇರು ದರ (113.45 ರೂ.) ಮಂಗಳವಾರ ಶೇ. 16 ಹಾಗೂ ವಿಜಯ ಬ್ಯಾಂಕ್‌ ಷೇರು ದರ (56.40 ರೂ.) ಶೇ. 3.40ರಷ್ಟು ಇಳಿಕೆಯಾಯಿತು. ಆದರೆ ದೇನಾ ಬ್ಯಾಂಕ್‌ ಷೇರು ದರ (19.90 ರೂ.) ಶೇ. 20ರಷ್ಟು ಜಿಗಿಯಿತು. ದೇನಾ ಬ್ಯಾಂಕ್‌ ನಷ್ಟದಲ್ಲಿದ್ದು, ದೊಡ್ಡ ಬ್ಯಾಂಕ್‌ ಜತೆ ವಿಲೀನವಾಗುವುದರಿಂದ ಷೇರು ದರ ಏರಿತು. ಆದರೆ ಬ್ಯಾಂಕ್‌ ಆಫ್‌ ಬರೋಡಾದ ಷೇರು ದರ ಭಾರಿ ಕುಸಿದಿದ್ದು, ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ.

ಹೆಸರೇನಾಗಬಹುದು?
ವಿಲೀನವಾಗುತ್ತಿರುವ ಮೂರು ಬ್ಯಾಂಕ್‌ಗಳ ಪೈಕಿ ಬ್ಯಾಂಕ್‌ ಆಫ್‌ ಬರೋಡಾ ದೊಡ್ಡದು. ಆದ್ದರಿಂದ ಅದೇ ಹೆಸರು ಉಳಿದುಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ವಿಶ್ಲೇಷಕರು. ಎಸ್‌ಬಿಐ ಮತ್ತು ಅದರ ಅಧೀನ ಬ್ಯಾಂಕ್‌ ಹಾಗೂ ಭಾರತೀಯ ಮಹಿಳಾ ಬ್ಯಾಂಕ್‌ಗಳ ವಿಲೀನದ ನಂತರ ಎಸ್‌ಬಿಐ ಹೆಸರು ಉಳಿದಿತ್ತು.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಜಯ ಬ್ಯಾಂಕ್‌ ಮೂಲತಃ ಮಂಗಳೂರಿನಲ್ಲಿ 1931ರಲ್ಲಿ ಸ್ಥಾಪನೆಯಾಗಿದ್ದ ಬ್ಯಾಂಕ್‌. ಬ್ಯಾಂಕ್‌ 2031 ಶಾಖೆಗಳನ್ನು ಒಳಗೊಂಡಿದೆ. ವಿಜಯ ದಶಮಿಯ ದಿನ ಸ್ಥಾಪನೆಯಾದ್ದರಿಂದ ವಿಜಯ ಬ್ಯಾಂಕ್‌ ಎಂಬ ಹೆಸರು ಗಳಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ