ಆ್ಯಪ್ನಗರ

ಮುಂದಿನ ತಿಂಗಳು ಮತ್ತೆ ಜಿಎಸ್‌ಟಿ ದರ ಪರಿಷ್ಕರಣೆ ಸಾಧ್ಯತೆ, ಮತ್ತಷ್ಟು ವಸ್ತುಗಳ ಮೇಲೆ ತೆರಿಗೆ?

ಸೆಪ್ಟೆಂಬರ್‌ನಲ್ಲಿ ನಡೆಯುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ, ಸರಕು ಮತ್ತು ಸೇವೆಗಳ ದರ ಪರಿಷ್ಕರಣೆಗೆ ಸಂಬಂಧಿಸಿದ ಮಹತ್ವದ ತೀರ್ಮಾನಗಳು ಹೊರಬೀಳುವ ನಿರೀಕ್ಷೆ ಇದ್ದು, ಕೆಲವು ಸರಕು-ಸೇವೆಗಳಿಗಿದ್ದ ತೆರಿಗೆ ವಿನಾಯಿತಿ ಹಿಂತೆಗೆತ, ಕೆಲವು ವಸ್ತುಗಳ ಮೇಲಿನ ತೆರಿಗೆಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.

ET Bureau 17 Aug 2022, 10:55 am

ಹೈಲೈಟ್ಸ್‌:

  • ಸೆಪ್ಟೆಂಬರ್‌ನಲ್ಲಿ ನಡೆಯುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸರಕು ಮತ್ತು ಸೇವೆಗಳ ದರ ಪರಿಷ್ಕರಣೆಗೆ ಸಂಬಂಧಿಸಿದ ಮಹತ್ವದ ತೀರ್ಮಾನಗಳು ಹೊರಬೀಳುವ ನಿರೀಕ್ಷೆ
  • ಕೆಲವು ಸರಕು-ಸೇವೆಗಳಿಗಿದ್ದ ತೆರಿಗೆ ವಿನಾಯಿತಿ ಹಿಂತೆಗೆತ ಸಾಧ್ಯತೆ
  • ಕೆಲವು ವಸ್ತುಗಳ ಮೇಲಿನ ತೆರಿಗೆಗಳನ್ನು ಮತ್ತಷ್ಟು ಹೆಚ್ಚಿಸುವ ಸಂಭವ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web GST
ಹೊಸದಿಲ್ಲಿ: ಕಳೆದ ತಿಂಗಳಷ್ಟೇ ಮೊಸರು, ಮಜ್ಜಿಗೆ, ಪನ್ನಿರ್‌, ಅಕ್ಕಿ-ಜೋಳದ ಹಿಟ್ಟು ಸೇರಿದಂತೆ ಆಹಾರ ಪದಾರ್ಥಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ಜಿಎಸ್‌ಟಿ ಮಂಡಳಿ ವಾಪಸ್‌ ಪಡೆದಿತ್ತು. ಈಗ, ಜಿಎಸ್‌ಟಿ ಮಂಡಳಿ ಮತ್ತೊಂದು ಸುತ್ತಿನ ದರ ಪರಿಷ್ಕರಣೆ ಮಾಡುವ ಸಾಧ್ಯತೆಗಳಿವೆ.
ಸೆಪ್ಟೆಂಬರ್‌ನಲ್ಲಿ ನಡೆಯುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆಯಲ್ಲಿ, ಸರಕು ಮತ್ತು ಸೇವೆಗಳ ದರ ಪರಿಷ್ಕರಣೆಗೆ ಸಂಬಂಧಿಸಿದ ಮಹತ್ವದ ತೀರ್ಮಾನಗಳು ಹೊರಬೀಳುವ ನಿರೀಕ್ಷೆ ಇದೆ.

ಕೆಲವು ಸರಕು ಸೇವೆಗಳಿಗಿದ್ದ ತೆರಿಗೆ ವಿನಾಯಿತಿ ಹಿಂತೆಗೆತ ಮತ್ತು ಕೆಲವು ವಸ್ತುಗಳ ಮೇಲಿನ ತೆರಿಗೆಗಳನ್ನು ಮತ್ತಷ್ಟು ಹೆಚ್ಚಿಸುವ ಅವಕಾಶಗಳಿವೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ಸಮಿತಿಯು ಎರಡನೇ ಸುತ್ತಿನ ಜಿಎಸ್‌ಟಿ ಪರಿಷ್ಕರಣೆ ಕಾರ್ಯವನ್ನು ಮಾಡುತ್ತಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಇನ್‌ವರ್ಟೆಡ್‌ ಸುಂಕ ಹೊಂದಾಣಿಕೆಯ ಕಸರತ್ತನ್ನು ಈ ಸಮಿತಿ ಮಾಡಲಿದೆ. ಈ ಸಮಿತಿಯ ಶಿಫಾರಸುಗಳ ಬಗ್ಗೆ ಮುಂದಿನ ಜಿಎಸ್‌ಟಿ ಮಂಡಳಿಯು ಚರ್ಚೆ ಮಾಡಿ, ತೀರ್ಮಾನ ಕೈಗೊಳ್ಳಲಿದೆ.

ಜಿಎಸ್‌ಟಿ ಹೊರೆ: ಸೋಮವಾರದಿಂದ ನಂದಿನಿ, ಹ್ಯಾಂಗ್ಯೋದ ಮೊಸರು, ಮಜ್ಜಿಗೆಗೆ ದರ ಹೆಚ್ಚಳದ ಹುಳಿ
''ಜಿಎಸ್‌ಟಿ ಮಂಡಳಿಯ ಕಳೆದ 2 - 3 ಸಭೆಗಳಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಆದರೆ, 'ಇನ್‌ವರ್ಟೆಡ್‌ ಸುಂಕ ಹೊಂದಾಣಿಕೆ' ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಜವಳಿ ಸೇರಿದಂತೆ ಕೆಲವು ಸರಕುಗಳ ಮೇಲಿನ ಜಿಎಸ್‌ಟಿ ಪರಿಷ್ಕರಿಸುವ ತೀರ್ಮಾನಗಳು ಬಾಕಿ ಉಳಿದಿವೆ,'' ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆಟೋಮೊಬೈಲ್‌, ಎಲೆಕ್ಟ್ರಿಕ್‌ ವಾಹನಗಳು, ಕೆಲವು ಎಲೆಕ್ಟ್ರಿಕ್‌ ವಸ್ತುಗಳು, ಯೂರಿಯಾ ಮತ್ತು ಇತರ ರಸಗೊಬ್ಬರಗಳ ಉತ್ಪಾದನೆ ಮಾಡಿದಾಗ, ಸಿದ್ಧ ಉತ್ಪನ್ನಗಳ ಮೇಲಿನ ತೆರಿಗೆಗಿಂತಲೂ, ಅವುಗಳಿಗೆ ಬಳಕೆಯಾದ ಕಚ್ಚಾ ವಸ್ತುಗಳ ಮೇಲಿನ ತೆರಿಗೆಯೇ ಅಧಿಕ ಪ್ರಮಾಣದಲ್ಲಿರುತ್ತದೆ. ಇದನ್ನು ಹೊಂದಾಣಿಕೆ ಮಾಡುವುದು ಮತ್ತು ಈ ವಿಷಯದಲ್ಲಿ ನಡೆಯುವ ಅಕ್ರಮಗಳನ್ನು ತಪ್ಪಿಸುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ