ಆ್ಯಪ್ನಗರ

ಜಿಎಸ್‌ಟಿ ಜಾರಿಯಿಂದ 1 ಲಕ್ಷ ಹೊಸ ಉದ್ಯೋಗ

ಜಿಎಸ್‌ಟಿ ಜಾರಿಗೆ ಬರುತ್ತಿರುವ ಸಂದರ್ಭದಲ್ಲಿ ಹೊಸದಾಗಿ ಮತ್ತು ತುರ್ತಾಗಿ ಸುಮಾರು ಒಂದು ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ತೆರಿಗೆ, ಅಕೌಂಟಿಂಗ್‌, ಡೇಟಾ ವಿಶ್ಲೇಷಣೆ ಸೇರಿದಂತೆ ನಾನಾ ವಿಭಾಗಗಳಲ್ಲಿ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗಲಿದೆ.

Vijaya Karnataka Web 26 Jun 2017, 9:06 am

ಹೊಸದಿಲ್ಲಿ: ಜಿಎಸ್‌ಟಿ ಜಾರಿಗೆ ಬರುತ್ತಿರುವ ಸಂದರ್ಭದಲ್ಲಿ ಹೊಸದಾಗಿ ಮತ್ತು ತುರ್ತಾಗಿ ಸುಮಾರು ಒಂದು ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ತೆರಿಗೆ, ಅಕೌಂಟಿಂಗ್‌, ಡೇಟಾ ವಿಶ್ಲೇಷಣೆ ಸೇರಿದಂತೆ ನಾನಾ ವಿಭಾಗಗಳಲ್ಲಿ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗಲಿದೆ.

ಐತಿಹಾಸಿಕ ತೆರಿಗೆ ಸುಧಾರಣೆಯು ಜುಲೈ 1ರಿಂದ ಜಾರಿಗೆ ಬರಲಿದ್ದು, ಔಪಚಾರಿಕ ಉದ್ಯೋಗ ವಲಯವು ಹಿಗ್ಗಲಿದೆ. ಶೇ.10ರಿಂದ 13ರಷ್ಟು ಬೆಳವಣಿಗೆ ದರ ಹೆಚ್ಚಲಿದೆ ಎಂದು ತಜ್ಞರು ಅಂದಾಜು ಮಾಡಲಿದ್ದಾರೆ.

ಇಂಡಿಯನ್‌ ಸ್ಟಾಫಿಂಗ್‌ ಫೆಡರೇಷನ್‌ ಅಧ್ಯಕ್ಷೆ ರಿತುಪರ್ಣ ಚಕ್ರವರ್ತಿ, ಜಿಎಸ್‌ಟಿ ಜಾರಿಯಿಂದ ಉದ್ಯೋಗ ಕ್ಷೇತ್ರಕ್ಕೆ ಲಾಭವಾಗಲಿದೆ ಎಂದಿದ್ದಾರೆ. ಗ್ಲೋಬಲ್‌ಹಂಟ್‌ ಎಂಡಿ ಸುನೀಲ್‌ ಗೋಯೆಲ್‌ ಪ್ರಕಾರ, ಒಂದು ಲಕ್ಷ ಹೊಸ ಉದ್ಯೋಗಗಳು ಜಿಎಸ್‌ಟಿ ಜಾರಿ ಪ್ರಕ್ರಿಯೆಯಲ್ಲಿ ಸೃಷ್ಟಿಯಾಗಲಿವೆ. ಜಿಎಸ್‌ಟಿ ಜಾರಿ ಹಂತದಲ್ಲಿ 50ರಿಂದ 60 ಲಕ್ಷ, ನಂತರದ ಅವಧಿಯಲ್ಲಿ ಮತ್ತಷ್ಟು ಸೇರಿದಂತೆ ಲಕ್ಷಕ್ಕೂ ಅಧಿಕ ಉದ್ಯೋಗಗಳು ರೂಪುಗೊಳ್ಳಲಿವೆ.

ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳು ಜಿಎಸ್‌ಟಿ ಪ್ರಕ್ರಿಯೆಯನ್ನು ಹೊರಗುತ್ತಿಗೆ ನೀಡಲಿವೆ ಎಂದು ಅಂದಾಜು ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ