ಆ್ಯಪ್ನಗರ

ಜೊಮ್ಯಾಟೋ ಬೆನ್ನಲ್ಲೇ ಸ್ವಿಗ್ಗಿಯಿಂದಲೂ 250ಕ್ಕೂ ಹೆಚ್ಚಿನ ಉದ್ಯೋಗಿಗಳ ವಜಾ ಸಾಧ್ಯತೆ

ಡಿಸೆಂಬರ್‌ ತಿಂಗಳಿನಿಂದ 250ಕ್ಕೂ ಹೆಚ್ಚು ಅಥವಾ ಶೇ. 5ರಷ್ಟು ಉದ್ಯೋಗಿಗಳ ವಜಾಕ್ಕೆ ಸ್ವಿಗ್ಗಿ ಮುಂದಾಗಿದೆ. ಆನ್‌ಲೈನ್‌ ಆಹಾರ ವಿತರಣಾ ವೇದಿಕೆಯಾಗಿರುವ ಸ್ವಿಗ್ಗಿಯ ಮಾರುಕಟ್ಟೆ ಪಾಲು ಪ್ರತಿಸ್ಪರ್ಧಿ ಜೋಮ್ಯಾಟೋಗಿಂತ ಕುಸಿತ ಕಂಡಿದೆ ಎಂದು ಬ್ರೋಕರೇಜ್‌ ಸಂಸ್ಥೆ ಜೆಫರೀಸ್‌ ಹೇಳಿದೆ.

Vijaya Karnataka Web 10 Dec 2022, 9:14 am

ಹೈಲೈಟ್ಸ್‌:

  • ಸ್ವಿಗ್ಗಿಯಿಂದ ಶೇ. 5ರಷ್ಟು ಉದ್ಯೋಗಿಗಳ ವಜಾ ಸಾಧ್ಯತೆ
  • ಡಿಸೆಂಬರ್‌ ತಿಂಗಳಿನಿಂದ 250ಕ್ಕೂ ಹೆಚ್ಚು ಅಥವಾ ಶೇ. 5ರಷ್ಟು ಉದ್ಯೋಗಿಗಳ ವಜಾ
  • ಆನ್‌ಲೈನ್‌ ಮೂಲಕ ಆಹಾರ ವಿತರಣಾ ಸೇವೆ ನೀಡುತ್ತಿರುವ ಸ್ವಿಗ್ಗಿ
  • ಸ್ವಿಗ್ಗಿಯ ಮಾರುಕಟ್ಟೆ ಪಾಲು ಪ್ರತಿಸ್ಪರ್ಧಿ ಜೋಮ್ಯಾಟೋಗಿಂತ ಹೆಚ್ಚಿನ ಕುಸಿತ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Swiggy
ಬೆಂಗಳೂರು: ಆನ್‌ಲೈನ್‌ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಡಿಸೆಂಬರ್‌ ತಿಂಗಳಿಂದ 250ಕ್ಕೂ ಹೆಚ್ಚು ಅಥವಾ ಶೇ. 5ರಷ್ಟು ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ.
"ಅಕ್ಟೋಬರ್‌ನಲ್ಲಿ ಕಾರ್ಯಕ್ಷಮತೆ ಪರಿಶೀಲನೆ ಪೂರ್ಣಗೊಳಿಸಿದ್ದು, ಎಲ್ಲ ಹಂತಗಳಲ್ಲಿ ರೇಟಿಂಗ್‌ಗಳು ಮತ್ತು ಬಡ್ತಿಯನ್ನು ನೀಡಿದ್ದೇವೆ. ಪ್ರತಿ ಬಾರಿಯಂತೆ ಈ ಬಾರಿಯೂ ಕಾರ್ಯಕ್ಷಮತೆ ಮಾನದಂಡ ಆಧರಿಸಿ ಕೆಲ ಉದ್ಯೋಗಿಗಳನ್ನು ಕೈಬಿಡುವ ಉದ್ದೇಶವಿದೆ," ಎಂದು ಸ್ವಿಗ್ಗಿ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಜಾಗೊಳಿಸುವ ಉದ್ಯೋಗಿಗಳ ಅಂಕಿ - ಅಂಶಗಳ ಬಗ್ಗೆ ಮಾಹಿತಿ ನೀಡದೇ ಸದ್ಯಕ್ಕೆ ಸ್ವಿಗ್ಗಿಯಲ್ಲಿ ಯಾವುದೇ ಉದ್ಯೋಗ ಕಡಿತವಿಲ್ಲ, ವಜಾ ಪ್ರಕ್ರಿಯೆ ಇಲ್ಲವೆಂದೇ ಗುರುವಾರ ಕಂಪನಿ ಪ್ರತಿಕ್ರಿಯಿಸಿದೆ.

ಜೊಮ್ಯಾಟೋದಲ್ಲೂ ಉದ್ಯೋಗ ಕಡಿತ, ಕಾರ್ಯಕ್ಷಮತೆ ಆಧಾರದ ಮೇಲೆ 3% ನೌಕರರ ವಜಾ
ಉದ್ಯೋಗ ಕಡಿತದೊಂದಿಗೆ ವೆಚ್ಚ ಕಡಿತ ಮಾಡಲು ಮುಂದಾಗಿರುವುದರಿಂದ ಸ್ವಿಗ್ಗಿಯ ತ್ವರಿತ ವಾಣಿಜ್ಯ ವಿತರಣಾ ಸೇವೆ ಸ್ವಿಗ್ಗಿ ಇನ್ಸ್ಟಾಮಾರ್ಟ್‌ ಮೇಲೆ ಪರಿಣಾಮ ಬೀರುತ್ತದೆ. ಕಳೆದ ತಿಂಗಳು, ಭಾರೀ ರಿಯಾಯಿತಿ ನೀಡಿದ್ದರೂ ಸ್ವಿಗ್ಗಿಯ ಮಾರುಕಟ್ಟೆ ಪಾಲು ಪ್ರತಿಸ್ಪರ್ಧಿ ಜೋಮ್ಯಾಟೋಗಿಂತ ಕುಸಿದಿವೆ ಎಂದು ಜಾಗತಿಕ ಬ್ರೋಕರೇಜ್‌ ಸಂಸ್ಥೆ ಜೆಫರೀಸ್‌ ಹೇಳಿದೆ.

ಸ್ವಿಗ್ಗಿ ಹೂಡಿಕೆದಾರ ಪ್ರೊಸಸ್‌ನ ಹಣಕಾಸು ವರದಿ ಆಧರಿಸಿ ಜೆಫರೀಸ್‌ ಈ ವರ್ಷದ ಜನವರಿ - ಜೂನ್‌ ಅವಧಿಯಲ್ಲಿ ಸ್ವಿಗ್ಗಿಯ ಆಹಾರ ವಿತರಣಾ ವ್ಯವಹಾರದ ಒಟ್ಟು ಮೌಲ್ಯ 1.3 ಶತಕೋಟಿ ಡಾಲರ್‌ಗಳಷ್ಟಿದೆ (ಸುಮಾರು 10,700 ಕೋಟಿ ರೂ.) ಎಂದು ಜೆಫರೀಸ್‌ ಹೇಳಿದೆ.

2021ರಲ್ಲಿ 1,616.9 ಕೋಟಿ ರೂ. ಅಂದರೆ ಶೇ. 58.7ರಷ್ಟು ಸ್ವಿಗ್ಗಿ ನಷ್ಟಕ್ಕೀಡಾಗಿದ್ದು, 2020ರಲ್ಲಾದ 3,920.4 ಕೋಟಿ ರೂ.ಗೆ ಹೋಲಿಸಿದರೆ ಇದು ಕಡಿಮೆ ಎನ್ನಲಾಗಿದೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಆತಂಕಗಳು ದಿನ ದಿನಕ್ಕೂ ಹೆಚ್ಚಾಗುತ್ತಿವೆ. ಇದೇ ವೇಳೆ ಹಿಂಜರಿತದ ಲಕ್ಷಣವೆಂಬಂತೆ ಕಂಪನಿಗಳು ಬೇಡಿಕೆ ಕುಸಿತ ಎದುರಿಸುತ್ತಿವೆ. ಹೀಗಾಗಿ ಹಣಕಾಸನ್ನು ಮರು ಸಂಯೋಜಿಸಲು ವೆಚ್ಚ ಕಡಿತಕ್ಕೆ ಮುಂದಾಗಿವೆ. ಇದರ ಭಾಗವಾಗಿ ಉದ್ಯೋಗ ಕಡಿತವನ್ನೂ ನಡೆಸುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ