ಆ್ಯಪ್ನಗರ

ಮುಂಬಯಿ-ಪುಣೆ ಪ್ರಯಾಣ 25 ನಿಮಿಷಕ್ಕಿಳಿಸಲು ಯತ್ನ

ಮುಂಬಯಿ ಮತ್ತು ಪುಣೆ ನಡುವಿನ ಪ್ರಯಾಣವನ್ನು ಈಗಿನ 4 ಗಂಟೆಯಿಂದ 25 ನಿಮಿಷಕ್ಕೆ ಇಳಿಸಲು ಮಹಾರಾಷ್ಟ್ರ ಸರಕಾರ ಚಿಂತನೆ ನಡೆಸಿದೆ. ಈ ಸಂಬಂಧ ಆಧುನಿಕ ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ಪರಾಮರ್ಶೆ ನಡೆಯುತ್ತಿದೆ.

Vijaya Karnataka Web 17 Jun 2018, 8:07 am
ಮುಂಬಯಿ: ಮುಂಬಯಿ ಮತ್ತು ಪುಣೆ ನಡುವಿನ ಪ್ರಯಾಣವನ್ನು ಈಗಿನ 4 ಗಂಟೆಯಿಂದ 25 ನಿಮಿಷಕ್ಕೆ ಇಳಿಸಲು ಮಹಾರಾಷ್ಟ್ರ ಸರಕಾರ ಚಿಂತನೆ ನಡೆಸಿದೆ. ಈ ಸಂಬಂಧ ಆಧುನಿಕ ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ಪರಾಮರ್ಶೆ ನಡೆಯುತ್ತಿದೆ.
Vijaya Karnataka Web airline


''ಈ ಎರಡು ನಗರಗಳ ನಡುವೆ 200 ಕಿ.ಮೀ ಅಂತರವಿದ್ದು, ಪ್ರಸ್ತುತ ಪ್ರಯಾಣಕ್ಕೆ 4 ಗಂಟೆ ಅಗತ್ಯವಿದೆ. ಸಮಯವನ್ನು ಗಣನೀಯವಾಗಿ ತಗ್ಗಿಸಲು ಆಧುನಿಕ ಸಾರಿಗೆ ವ್ಯವಸ್ಥೆ ಜಾರಿ ಸಂಬಂಧ ಪರಾಮರ್ಶೆ ನಡೆಸುತ್ತಿದ್ದೇವೆ,'' ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಹೇಳಿದ್ದಾರೆ.

ಅತ್ಯಾಧುನಿಕ ರೈಲು ಯೋಜನೆ ಸಂಬಂಧ ಅಮೆರಿಕ ಮೂಲದ ವರ್ಜಿನ್‌ ಹೈಪರ್‌ಲೂಪ್‌ಒನ್‌ ಕಂಪನಿಯನ್ನು ಮಹಾರಾಷ್ಟ್ರ ಸರಕಾರ ಸಂಪರ್ಕಿಸಿದೆ. ಫಡ್ನವಿಸ್‌ ಅವರು ಪ್ರಸ್ತುತ ಅಮೆರಿಕ ಪ್ರವಾಸದಲ್ಲಿದ್ದು, ವರ್ಜಿನ್‌ ಕಂಪನಿಗೆ ಭೇಟಿ ನೀಡಿ ಅದರ ಸಿಇಒ ರಾಬ್‌ ಲಿಯೊಡ್‌ ಜತೆ ಮಾತುಕತೆ ನಡೆಸಿದ್ದಾರೆ. ಯೋಜನೆ ಹಿನ್ನೆಲೆಯಲ್ಲಿ ಕಂಪನಿಯು ಸದ್ಯದಲ್ಲೇ ಮಹಾರಾಷ್ಟ್ರಕ್ಕೆ ತನ್ನ ಎಂಜಿನಿಯರ್‌ಗಳನ್ನು ಕಳುಹಿಸುವ ನಿರೀಕ್ಷೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ