ಆ್ಯಪ್ನಗರ

ನೈಸರ್ಗಿಕ ಅನಿಲ ದರ ಈ ವಾರ ದಾಖಲೆ ಮಟ್ಟಕ್ಕೆ ಹೆಚ್ಚುವ ಸಾಧ್ಯತೆ, ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ

ನೈಸರ್ಗಿಕ ಅನಿಲ ದರವು ಈ ವಾರ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ. ವಿದ್ಯುತ್‌ ಉತ್ಪಾದನೆ, ರಸಗೊಬ್ಬರ ತಯಾರಿಕೆ ಹಾಗೂ ವಾಹನಗಳ ಸಂಚಾರಕ್ಕೆ ಸಿಎನ್‌ಜಿಯಾಗಿ ಪರಿವರ್ತಿಸಲಾಗುವ ಈ ಅನಿಲದ ದರ ಏರಿಕೆಯಿಂದ ಜನ ಸಾಮಾನ್ಯರಿಗೆ ಹೊಡೆತ ಬೀಳಲಿದೆ.

Vijaya Karnataka Web 26 Sep 2022, 10:50 am
ಹೊಸದಿಲ್ಲಿ: ವಿದ್ಯುತ್‌ ಉತ್ಪಾದನೆ, ರಸಗೊಬ್ಬರ ತಯಾರಿಕೆ ಹಾಗೂ ವಾಹನಗಳ ಸಂಚಾರಕ್ಕೆ ಸಿಎನ್‌ಜಿಯಾಗಿ ಪರಿವರ್ತಿಸಲಾಗುವ ನೈಸರ್ಗಿಕ ಅನಿಲ ದರವು ಈ ವಾರ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರಕಾರ ದೇಶದಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲ ದರದ ಪರಿಷ್ಕರಣೆ ಕುರಿತಂತೆ ಅ. 1ರಂದು ನಿರ್ಧಾರ ಪ್ರಕಟಿಸಲಿದೆ.
Vijaya Karnataka Web natural gas


ಇತ್ತೀಚಿನ ದಿನಗಳಲ್ಲಿ ಇತರ ಎಲ್ಲ ಬಗೆಯ ಇಂಧನಗಳ ದರ ಹೆಚ್ಚಳಗಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಓಎನ್‌ಜಿಸಿ ಕೂಡ ಪ್ರತಿ ಬ್ರಿಟಿಷ್‌ ಥರ್ಮಲ್‌ ಯೂನಿಟ್‌ಗೆ (ಬಿಟಿಯು) 6 ಡಾಲರ್‌ನಿಂದ 9 ಡಾಲರ್‌ಗೆ ದರ ಹೆಚ್ಚಳ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಖಾಸಗಿ ಒಡೆತನದ ರಿಲಾಯನ್ಸ್‌ ಇಂಡಸ್ಟ್ರೀಸ್‌ ಕೂಡ ಅನಿಲ ದರವನ್ನು ಹಾಲಿ 9.92 ಡಾಲರ್‌ನಿಂದ 12 ಡಾಲರ್‌ಗಳಿಗೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ.

2019ರ ನಂತರ ನೈಸರ್ಗಿಕ ಅನಿಲ ದರ ಹೆಚ್ಚಳವಾಗುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಅಮೆರಿಕ, ಕೆನಡಾ ಹಾಗೂ ರಷ್ಯಾದ ಅನಿಲ ದರದ ಹೆಚ್ಚಳ ಆಧರಿಸಿ ಕೇಂದ್ರ ಸರಕಾರ ಪ್ರತಿವರ್ಷ ಏಪ್ರಿಲ್‌ 1 ಮತ್ತು ಅ. 1ರಂದು ಆರು ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡುತ್ತಿದೆ. ಹೀಗಾಗಿ ಅ.1ರಂದು ಪ್ರಕಟಗೊಳ್ಳುವ ದರ 2023ರ ಮಾ. 31ರವರೆಗೆ ಜಾರಿಯಲ್ಲಿರಲಿದೆ.

CNG Pipeline | ಕೊಳವೆ ಮೂಲಕ ಗ್ಯಾಸ್: ಶೀಘ್ರ ಕಲಬುರಗಿಯಲ್ಲಿ ಸಿಎನ್‌ಜಿ ಪೈಪ್‌ಲೈನ್‌
ರಕ್ಷಣಾ ಕ್ಷೇತ್ರದ ರಫ್ತು ಶೇ.334ರಷ್ಟು ಹೆಚ್ಚಳ

ಹೊಸದಿಲ್ಲಿ: ದೇಶದ ರಕ್ಷಣಾ ವಲಯದ ರಫ್ತು ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಶೇ. 334ರಷ್ಟು ಹೆಚ್ಚಳವಾಗಿದ್ದು, ವಿಶ್ವದ 75 ರಾಷ್ಟ್ರಗಳೊಂದಿಗೆ ರಫ್ತು ವಹಿವಾಟು ಹೊಂದಿದೆ ಎಂದು ಕೇಂದ್ರ ಸರಕಾರ ಭಾನುವಾರ ತಿಳಿಸಿದೆ.

"ಎರಡನೇ ಅತಿದೊಡ್ಡ ರಕ್ಷಣಾ ಬಲ ಹೊಂದಿರುವ ಭಾರತೀಯ ರಕ್ಷಣಾ ವಲಯ ಈಗ ಕ್ರಾಂತಿಯ ತುತ್ತ ತುದಿ ತಲುಪಿದೆ,’’ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಮೊದಲ ದೇಶೀಯ ವಿಮಾನ ವಾಹನ ನೌಕೆ ಐಎನ್‌ಎಸ್‌ ವಿಕ್ರಾಂತ್‌ ಕೊಚ್ಚಿಯಲ್ಲಿ ಇತ್ತೀಚೆಗೆ ಕಾರ್ಯಾಚರಣೆ ಆರಂಭಿಸಿರುವುದನ್ನು ಉಲ್ಲೇಖಿಸಿರುವ ಟ್ವೀಟ್‌ನಲ್ಲಿ ದೇಶೀಯ ಅತ್ಯಾಧುನಿಕ ಲೈಟ್‌ ಹೆಲಿಕಾಪ್ಟರ್‌ ಎಂಕೆ-3 ಕರಾವಳಿ ರಕ್ಷಣಾ ಪಡೆಗೆ ಸೇರ್ಪಡೆಗೊಂಡಿರುವುದನ್ನೂ ವಿವರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ