ಆ್ಯಪ್ನಗರ

ಅನಿಲ್‌ ಅಂಬಾನಿ ದಿವಾಳಿ ಪ್ರಕರಣ: ವಿಚಾರಣೆಗೆ ಅನುಮತಿಸಿದ ರಾಷ್ಟ್ರೀಯ ನ್ಯಾಯಮಂಡಳಿ!

ಅನಿಲ್‌ ಅಂಬಾನಿ ಅವರ ಸಾಲ ವಸೂಲಿ ಪ್ರಕರಣ ಕುರಿತಂತೆ ವಿಚಾರಣೆ ನಡೆಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಕೊನೆಗೂ ಒಪ್ಪಿಗೆ ನೀಡಿದೆ. ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಶನ್ಸ್ ಕಂಪನಿ 2019ರಲ್ಲಿ ದಿವಾಳಿತನ ಘೋಷಿಸಿತ್ತು.

Vijaya Karnataka Web 21 Aug 2020, 4:43 pm
ಮುಂಬಯಿ: ಮಾಜಿ ಬಿಲಿಯನರ್‌ ಅನಿಲ್ ಅಂಬಾನಿ ಅವರ ಸಾಲ ವಸೂಲಿ ಪ್ರಕರಣ ಕುರಿತಂತೆ ವಿಚಾರಣೆ ನಡೆಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಕೊನೆಗೂ ಒಪ್ಪಿಗೆ ನೀಡಿದೆ.
Vijaya Karnataka Web Anil Ambani
Anil Ambani


ಅನಿಲ್ ಅಂಬಾನಿ ನೇತೃತ್ವದ ಕಂಪೆನಿಗಳ ಸಮೂಹಕ್ಕೆ ಅವರ ವೈಯಕ್ತಿಕ ಗ್ಯಾರಂಟಿ ಮೇಲೆ ಸಾಲ ತೆಗೆದುಕೊಂಡು, ಮರುಪಾವತಿ ಮಾಡಲಾಗದೇ ದಿವಾಳಿಯಾಗಿರುವುದಾಗಿ ಘೋಷಿಸಿದ್ದರು.

ಆದರೆ, ಇವರಿಗೆ ಸಾಲ ನೀಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಾಲ ವಸೂಲಿ ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ ಸಿಎಲ್ ಟಿ) ಮೆಟ್ಟಿಲೇರಿತ್ತು. ಸೆಕ್ಷನ್ 95 (1) ರಡಿ ಎಸ್‌ಬಿಐ ಎರಡು ಅರ್ಜಿ ಸಲ್ಲಿಸಿತ್ತು. ಇದೀಗ ಎನ್‌ಸಿಎಲ್‌ಟಿ ಪ್ರಕರಣದ ವಿಚಾರಣೆಗೆ ಸಮ್ಮತಿಸಿದೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ದ್ವಿಸದಸ್ಯ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ.

ಅನಿಲ್‌ ಅಂಬಾನಿಗೆ ಮತ್ತೊಂದು ಸಂಕಷ್ಟ; 1,200 ಕೋಟಿ ರೂ. ವಸೂಲಿಗೆ ಮುಂದಾದ ಎಸ್‌ಬಿಐ

ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಲಿಮಿಟೆಡ್‌ ಮತ್ತು ರಿಲಯನ್ಸ್‌ ಇನ್‌ಫ್ರಾಟೆಲ್‌ ಲಿಮಿಟೆಡ್‌ಗೆ ಬ್ಯಾಂಕಿನಿಂದ ಸಾಲ ಪಡೆಯುವಾಗ ಅನಿಲ್‌ ಅಂಬಾನಿ ಅವರು ವೈಯಕ್ತಿಕ ಖಾತರಿ ನೀಡಿದ್ದರು. ಆದರೆ, ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣ, ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್‍ನ ಪ್ರಮುಖ ಕಂಪನಿ ರಿಲಯನ್ಸ್ ಕಮ್ಯುನಿಕೇಶನ್ಸ್ 2019ರಲ್ಲಿ ದಿವಾಳಿತನ ಘೋಷಿಸಿತ್ತು.

ಆದರೆ ಎಸ್‌ಬಿಐ ತನ್ನ ಸಾಲ ವಸೂಲಿಗಾಗಿ ಕ್ರಮ ಕೈಗೊಂಡಿತ್ತು. ಆದರೆ, ಅನಿಲ್ ಅಂಬಾನಿಯವರ ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ್ದಲ್ಲ, ಬದಲು ರಿಲಯನ್ಸ್ ಕಮ್ಯುನಿಕೇಶನ್ಸ್ ಹಾಗೂ ರಿಲಯನ್ಸ್ ಇನ್‍ಫ್ರಾಟೆಲ್ ಸಂಸ್ಥೆಗಳು ಪಡೆದ ಕಾರ್ಪೊರೇಟ್ ಸಾಲಕ್ಕೆ ಸಂಬಂಧಿಸಿದೆ ಎಂದು ಅನಿಲ್ ಅಂಬಾನಿ ಪರ ವಕ್ತಾರರು ವಾದಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ