ಆ್ಯಪ್ನಗರ

ವಿದೇಶಿ ದೇಣಿಗೆ ಪಡೆಯಲು ಎನ್‌ಜಿಒಗಳಿಗೆ ಎಸ್‌ಬಿಐ ಖಾತೆ ಕಡ್ಡಾಯ

ಎನ್‌ಜಿಒಗಳ ವಿದೇಶಿ ದೇಣಿಗೆ ಸ್ವೀಕೃತಿಯನ್ನು ಪಾರದರ್ಶಕಗೊಳಿಸಲು, ಯಾವುದೇ ಅವ್ಯವಹಾರ ನಡೆಯದಂತೆ ತಡೆಯಲು ಈ ನಿಯಂತ್ರಕ ಕ್ರಮವನ್ನು ಅಳವಡಿಸಲಾಗುತ್ತಿದೆ ಎಂದು ಗೃಹ ಸಚಿವಾಲಯ ಹೇಳಿದೆ.

Agencies 13 Oct 2020, 8:44 pm
ಹೊಸದಿಲ್ಲಿ: ಗೃಹ ಸಚಿವಾಲಯವು ದೇಶದಲ್ಲಿನ ಎಲ್ಲ ಸರಕಾರೇತರ ಸಂಸ್ಥೆಗಳು (ಎನ್‌ಜಿಒ) ವಿದೇಶಿ ದೇಣಿಗೆಯನ್ನು ಸ್ವೀಕರಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ದಿಲ್ಲಿಯ ಶಾಖೆಯಲ್ಲಿ 2021ರ ಮಾರ್ಚ್‌ 31ರೊಳಗೆ ಖಾತೆ ತೆರೆಯಬೇಕೆಂದು ಸೂಚಿಸಿದೆ.
Vijaya Karnataka Web money


ಎಫ್‌ಸಿಆರ್‌ಎ (ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ) ಅಡಿಯಲ್ಲಿ ಯಾವುದೇ ಎನ್‌ಜಿಒಗಳು ಇತರ ಬ್ಯಾಂಕ್‌ ಖಾತೆಯ ಮೂಲಕ ವಿದೇಶಿ ದೇಣಿಗೆಯನ್ನು ಸ್ವೀಕರಿಸುವಂತಿಲ್ಲ. ಎಫ್‌ಸಿಆರ್‌ಎ ಬ್ಯಾಂಕ್‌ ಖಾತೆ ತೆರೆಯುವ ಪ್ರಕ್ರಿಯೆ ಬಗ್ಗೆ ಗೃಹ ಸಚಿವಾಲಯವು ಮಂಗಳವಾರ ಮಾರ್ಗದರ್ಶಿಯನ್ನು ಪ್ರಕಟಿಸಿದೆ.

ಎಸ್‌ಬಿಐನ ‘ಹೊಸದಿಲ್ಲಿ ಪ್ರಧಾನ ಶಾಖೆ, ( ಎನ್‌ಡಿಎಂಬಿ), 11 ಸಂಸದ್‌ ಮಾರ್ಗ್‌ ಹೊಸದಿಲ್ಲಿ-110001’ ವಿಳಾಸದ ಶಾಖೆಯಲ್ಲಿಯೇ ಎಫ್‌ಸಿಆರ್‌ಎ ಬ್ಯಾಂಕ್‌ ಖಾತೆಯನ್ನು ತೆರೆಯಬೇಕು. ಎನ್‌ಜಿಒಗಳ ವಿದೇಶಿ ದೇಣಿಗೆ ಸ್ವೀಕೃತಿಯನ್ನು ಪಾರದರ್ಶಕಗೊಳಿಸಲು, ಅವ್ಯವಹಾರ ನಡೆಯದಂತೆ ತಡೆಯಲು ಈ ನಿಯಂತ್ರಕ ಕ್ರಮವನ್ನು ಅಳವಡಿಸಲಾಗುತ್ತಿದೆ ಎಂದು ಸರಕಾರ ತಿಳಿಸಿದೆ. ಈ ಸಂಬಂಧ ಕಾಯಿದೆಗೂ ತಿದ್ದುಪಡಿ ತರಲಾಗಿತ್ತು.

ಅಮ್ನೆಸ್ಟಿ ಮೂಲ ಸಂಸ್ಥೆ ವಿರುದ್ಧ ತನಿಖೆ ಇಲ್ಲ: ಸರಕಾರದ ಸ್ಪಷ್ಟನೆ
ಆದರೆ ಇದರಿಂದ ಸಣ್ಣ ಸಣ್ಣ ಸರಕಾರೇತರ ಸಂಸ್ಥೆಗಳಿಗೆ ಹೆಚ್ಚಿನ ತೊಂದರೆಯಾಗಲಿದೆ ಎಂಬ ಆಕ್ಷೇಪ ಕೂಡ ಕೇಳಿ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ