ಆ್ಯಪ್ನಗರ

ಎಸ್‌ಬಿಐ ಗ್ರಾಹಕರೇ, ಹಣ ವಿಥ್‌ ಡ್ರಾ ಮಾಡಲು ಮೊಬೈಲ್‌ ಮರೆಯದೇ ಕೊಂಡೊಯ್ಯಿರಿ: ಏಕೆ ಗೊತ್ತಾ?

ಎಸ್‌ಬಿಐ ಎಟಿಎಂನಿಂದ ಹಣ ಪಡೆಯುವಾಗ ಹೆಚ್ಚಿನ ಭದ್ರತೆ, ಸುರಕ್ಷತೆಯನ್ನು ಖಾತರಿ ಪಡಿಸಲು ಇದು ಅಗತ್ಯವಿದೆ. ಈ ಸೌಲಭ್ಯವನ್ನು ಜಾರಿಗೆ ತರುವುದರಿಂದ ಎಸ್‌ಬಿಐ ಗ್ರಾಹಕರು ವಂಚನೆಗೆ ಒಳಗಾಗುವುದು ತಪ್ಪುತ್ತದೆ

Vijaya Karnataka Web 17 Sep 2020, 9:46 am
ಮುಂಬಯಿ: ದೇಶದ ಪ್ರತಿಷ್ಠಿತ ಮತ್ತು ಅತ್ಯಂತ ಬೃಹತ್ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ಗ್ರಾಹಕರೇ ಇನ್ನು ಮುಂದೆ ಕೆಲವು ಹೊಸ ನಿಯಮಗಳಿಗೆ ಒಗ್ಗಿಕೊಳ್ಳಬೇಕಾಗಿದೆ.
Vijaya Karnataka Web ಎಸ್‌ಬಿಐ
ಎಸ್‌ಬಿಐ


ಏಕೆಂದರೆ ಇದೇ ಸೆಪ್ಟೆಂಬರ್‌ 18ರಿಂದ ಎಸ್‌ಬಿಐ ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

ಎಸ್‌ಬಿಐ ಗ್ರಾಹಕರು ಎಟಿಎಂನಿಂದ ಹಣ ಪಡೆಯಬೇಕಾದರೆ ಕಡ್ಡಾಯವಾಗಿ ಮೊಬೈಲ್‌ ಹೊಂದಿರಲೇಬೇಕು. ಏಕೆಂದರೆ ಓಟಿಪಿ ಆಧಾರಿತ ಸೇವೆ ಜಾರಿಗೆ ಬರುತ್ತಿದೆ. ಅಂದರೆ 10 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ಪಡೆಯಬೇಕಾದರೆ ಓಟಿಪಿಯನ್ನು ಎಂಟರ್‌ ಮಾಡಬೇಕು.

ಒಂದು ವೇಳೆ ನೀವು 10 ಸಾವಿರ ಪಡೆಯಬೇಕು ಎಂದಾರೆ ಡೆಬಿಟ್‌ ಕಾರ್ಡ್‌ ಪಿನ್‌ ಜತೆಗೆ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನೂ ನಮೂದಿಸಬೇಕು.

ಆಗ ಈ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ನಂತರ ಅದನ್ನು ಕೂಡ ನಮೂದಿಸಬೇಕು. ಆ ನಂತರ ನಿಮಗೆ ಹಣ ಲಭ್ಯವಾಗಲಿದೆ.

ಸೈಬರ್‌ ಅಪರಾಧ ಹಾಗೂ ಬ್ಯಾಂಕಿಂಗ್‌ ವಂಚನೆಯನ್ನು ತಪ್ಪಿಸಲು ಈ ರೀತಿಯ ಕ್ರಮ ಅಗತ್ಯ ಎಂದು ಈಗಾಗಲೇ ಬ್ಯಾಂಕ್‌ ಸ್ಪಷ್ಟನೆ ನೀಡಿದೆ.

ಎಸ್‌ಬಿಐ ಎಟಿಎಂನಿಂದ ಹಣ ಪಡೆಯುವಾಗ ಹೆಚ್ಚಿನ ಭದ್ರತೆ, ಸುರಕ್ಷತೆಯನ್ನು ಖಾತರಿ ಪಡಿಸಲು ಇದು ಅಗತ್ಯವಿದೆ. ಈ ಸೌಲಭ್ಯವನ್ನು ಜಾರಿಗೆ ತರುವುದರಿಂದ ಎಸ್‌ಬಿಐ ಗ್ರಾಹಕರು ವಂಚನೆಗೆ ಒಳಗಾಗುವುದು ತಪ್ಪುತ್ತದೆ ಎಂದು ಎಸ್‌ಬಿಐ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಈ ಹೊಸ ಸಾಫ್ಟ್‌ವೇರ್‌ ಮತ್ತು ನಿಯಮ ಎಸ್‌ಬಿಐ ಎಟಿಎಂಗಳಲ್ಲಿ ಮಾತ್ರ ಸದ್ಯಕ್ಕೆ ಲಭ್ಯವಿದೆ. ಉಳಿದ ಎಟಿಎಂಗಳಲ್ಲಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಲ್ಲ ಎಂದು

ರಾಷ್ಟ್ರೀಯ ಹಣಕಾಸು ಸ್ವಿಚ್ (ಎನ್ಎಫ್ಎಸ್) ಎಸ್‌ಬಿಐ ಅಲ್ಲದ ಎಟಿಎಂಗಳಲ್ಲಿ ಈ ಕಾರ್ಯವನ್ನು ಅಭಿವೃದ್ಧಿಪಡಿಸಿಲ್ಲ. ಹಾಗಾಗಿ ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಸೌಲಭ್ಯವು ಎಸ್ಬಿಐ ಎಟಿಎಂಗಳಲ್ಲಿ ಮಾತ್ರ ಲಭ್ಯವಿರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ