ಆ್ಯಪ್ನಗರ

2021ಕ್ಕೆ ಗುಟುರು ಹಾಕಲಿದೆ ಗೂಳಿ! 50 ಸಾವಿರ ಅಂಕ ದಾಟಲಿದೆ ಸೆನ್ಸೆಕ್ಸ್! ಭವಿಷ್ಯ ನುಡಿದ ತಜ್ಞರು

ಷೇರುಪೇಟೆ ಹೂಡಿಕೆದಾರರಿಗೆ ಇಲ್ಲೊಂದು ಶುಭ ಸುದ್ದಿ ಇದೆ. 2021ರಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ-50 ಎರಡೂ ಕೂಡ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.ಸೆನ್ಸೆಕ್ಸ್‌ 50 ಸಾವಿರ ಅಂಕ ದಾಟಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

Vijaya Karnataka Web 29 Dec 2020, 2:10 pm
ಮುಂಬಯಿ: ಕೋವಿಡ್ ಲಾಕ್‌ಡೌನ್‌ ನಂತರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹೆದರುತ್ತಾರೆ. ಆದರೆ, ಹೂಡಿಕೆದಾರರಿಗೆ ಇಲ್ಲೊಂದು ಶುಭ ಸುದ್ದಿ ಇದೆ. 2021ರಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ-50 ಎರಡೂ ಕೂಡ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.
Vijaya Karnataka Web Stock-market


ಮಾರುಕಟ್ಟೆ ತಜ್ಞರ ಪ್ರಕಾರ 2021ರಲ್ಲಿ ನಿಫ್ಟಿ ಸೂಚ್ಯಂಕ 15,000 ದಾಟಲಿದೆ ಎಂದಿದ್ದಾರೆ. ಬಿಎಸ್‌ಇ ಸೆನ್ಸೆಕ್ಸ್‌ ಕೂಡ ಭರ್ಜರಿ 50,000 ಅಂಕ ದಾಟಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2020ರ ಮಾರ್ಚ್‌ನಲ್ಲಿ ಕೊರೊನಾ ಲಾಕ್‌ಡೌನ್‌ ನಂತರ ಷೇರುಮಾರುಕಟ್ಟೆ ವಹಿವಾಟು ನೆಲಕಚ್ಚಿತ್ತು. ಇದಾದ ನಂತರ ಚೇತರಿಕೆ ಕಂಡು, ಎರಡಂಕಿ ಲಾಭದೊಂದಿಗೆ ಕೊನೆಗೊಂಡಿತು. ಆದರೀಗ 2021ರಲ್ಲಿ ಷೇರುಪೇಟೆ ಭಾರೀ ಗಳಿಕೆ ಕಾಣಲಿದೆ ಎಂಬ ತಜ್ಞರ ವಾದಕ್ಕೆ ಸೂಕ್ತ ಕಾರಣಗಳೂ ಇವೆ.

ಗೂಳಿಯ ದಾಖಲೆಯ ಓಟ ಮುಂದುವರಿಕೆ, ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ

ವಿಶ್ವಾದ್ಯಂತ ಬಹುತೇಕ ಎಲ್ಲ ಕೇಂದ್ರೀಯ ಬ್ಯಾಂಕುಗಳು ಹಣಕಾಸು ನೀತಿಯನ್ನು ಸಡಿಲಗೊಳಿಸಿದವು. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಕೋವಿಡ್‌ ಬಿಕ್ಕಟ್ಟಿನಿಂದಾದ ನಷ್ಟ ಭರಿಸಲು ವಿಶೇಷ ಪ್ಯಾಕೇಜ್‌ ಘೋಷಿಸಿದವು. ಬಡ್ಡಿದರಗಳಲ್ಲಿ ದಾಖಲೆಯ ಇಳಿಕೆ ಕಂಡಿತು. ಇದೆಲ್ಲವೂ ಆರ್ಥಿಕ ಚೇತರಿಕೆಗೆ ಸಹಾಯಕವಾಯಿತು. ಹೀಗಾಗಿ ಸಂಪೂರ್ಣ ನೆಲಕಚ್ಚಿದ್ದ ಷೇರುಪೇಟೆ, ಶೇ.70ರ ಗಳಿಕೆ ಕಾಣಲು ಕಾರಣವಾಗಿದೆ. 2021ರಲ್ಲಿ ಷೇರುಪೇಟೆ ವಹಿವಾಟು ಭರ್ಜರಿ ಗಳಿಕೆ ಕಾಣುವ ಸಾಧ್ಯತೆಗಳು ಹೆಚ್ಚಿವೆ.

ದೂರವಾದ ಬ್ರಿಟನ್‌ ಕೋವಿಡ್‌ ಆತಂಕ, ಸೆನ್ಸೆಕ್ಸ್‌ 452 ಅಂಕ ಜಿಗಿತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ