ಆ್ಯಪ್ನಗರ

ನಿತ್ಯಾನಂದನಿಂದ 'ರಿಸರ್ವ್‌ ಬ್ಯಾಂಕ್‌ ಆಫ್‌ ಕೈಲಾಸ'ಕ್ಕೆ ಅಧಿಕೃತ ಚಾಲನೆ!

ದೇಶ ಬಿಟ್ಟು ಪರಾರಿಯಾಗಿ, ಹೊಸ ದೇಶವನ್ನೇ ಕಟ್ಟಿಕೊಂಡಿರುವ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ತನ್ನ ದೇಶಕ್ಕೆ ಕೇಂದ್ರ ಬ್ಯಾಂಕ್‌ ಸ್ಥಾಪಿಸಿದ್ದು, ಆಗಸ್ಟ್‌ 22ರಂದು ಗಣೇಶ ಚತುರ್ಥಿ ದಿನ ಅಧಿಕೃತ ಚಾಲನೆ ನೀಡಿದ್ದಾನೆ.

Vijaya Karnataka Web 22 Aug 2020, 2:11 pm
ಬೆಂಗಳೂರು: ದೇಶ ಬಿಟ್ಟು ಪರಾರಿಯಾಗಿ, ಹೊಸ ದೇಶವನ್ನೇ ಕಟ್ಟಿಕೊಂಡಿರುವ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ತನ್ನ ದೇಶಕ್ಕೆ ಕೇಂದ್ರ ಬ್ಯಾಂಕ್‌ ಸ್ಥಾಪಿಸಿದ್ದು, ಆಗಸ್ಟ್‌ 22ರಂದು ಗಣೇಶ ಚತುರ್ಥಿ ದಿನ ಅಧಿಕೃತ ಚಾಲನೆ ನೀಡಿದ್ದಾನೆ.
Vijaya Karnataka Web Nityananda RBK


ಇಡೀ ವಿಶ್ವವೇ ಕೊರೊನಾ ಸೋಂಕಿನಿಂದಾಗಿ ತತ್ತರಿಸುತ್ತಿದೆ. ಸಾರ್ವಜನಿಕ ಸಂಭ್ರಮಾಚರಣೆಗಳಿಗೆ ನಿರ್ಬಂಧ ವಿಧಿಸಿರುವ ಈ ಸಂದರ್ಭದಲ್ಲೇ, ನಿತ್ಯಾನಂದ ತನ್ನ 'ರಿಸರ್ವ್‌ ಬ್ಯಾಂಕ್‌ ಆಫ್‌ ಕೈಲಾಸ' ಅಧಿಕೃತ ಚಾಲನೆ ನೀಡಿದ್ದು, ತಮ್ಮ ಅನುಯಾಯಿಗಳೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾನೆ.

ಭಾರತೀಯ ಸರ್ಕಾರಿ ಸಂಸ್ಥೆಗಳು ನಿತ್ಯಾನಂದನನ್ನು ಹುಡುಕುತ್ತಲೇ ಇವೆ. ಈ ನಡುವೆಯೇ. ಇತ್ತೀಚೆಗಷ್ಟೇ 'ರಿಸರ್ವ್ ಬ್ಯಾಂಕ್ ಆಫ್ ಕೈಲಾಸ'ದ ಸ್ಥಾಪನೆ ಕುರಿತಂತೆ ಬೇರೊಂದು ರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದ. ತನ್ನ ಫೋಟೋ ಹೊಂದಿರುವ ಕರೆನ್ಸಿ ನೂಟುಗಳನ್ನು ಕೂಡ ಗಣೇಶ ಚತುರ್ಥಿಯಂದು ಔಪಚಾರಿಕವಾಗಿ ಬಿಡುಗಡೆ ಮಾಡುವುದಾಗಿ ಹೇಳಿದ್ದ. ಅದರಂತೆಯೇ ಇಂದು 'ರಿಸರ್ವ್‌ ಬ್ಯಾಂಕ್‌ ಆಫ್‌ ಕೈಲಾಸಕ್ಕೆ ಅಧಿಕೃತ ಚಾಲನೆ ದೊರೆತಿದೆ.

ಸ್ಥಾಪನೆಗೆ ಮೊದಲೇ ಒಪ್ಪಂದ ಮಾಡಿಕೊಂಡ ನಿತ್ಯಾನಂದನ 'ರಿಸರ್ವ್‌ ಬ್ಯಾಂಕ್‌ ಆಫ್‌ ಕೈಲಾಸ'

ಈಗಾಗಲೇ ಮತ್ತೊಂದು ದೇಶ ಕೂಡ ಕೈಲಾಸ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆಯಂತೆ. ಆದರೆ, ಅದು ಯಾವ ದೇಶ ಎಂಬುದನ್ನು ನಿತ್ಯಾನಂದ ಬಹಿರಂಗಪಡಿಸಿಲ್ಲ. ಈ ಒಪ್ಪಂದ ಪತ್ರ 300 ಪುಟಗಳಷ್ಟಿದ್ದು, ಹಣದ ಚಲಾವಣೆ, ಹಣದ ವಿನಿಮಯ ಮೊದಲಾದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ನಿತ್ಯಾನಂದನಿಂದ ಹೊಸ ನೋಟು ಚಲಾವಣೆ! ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್ ಸ್ಥಾಪನೆ!

ವ್ಯಾಟಿಕನ್ ಬ್ಯಾಂಕ್ ಮಾದರಿಯಲ್ಲಿ ಬ್ಯಾಂಕ್ ಆಫ್ ಕೈಲಾಶ್ ಕಾರ್ಯನಿರ್ವಹಿಸಲಿದೆ ಎಂದಿದ್ದಾನೆ. ಒಟ್ಟು 2 ಉದ್ದೇಶಗಳಿಗಾಗಿ ಈ ಬ್ಯಾಂಕ್ ಆಫ್ ಕೈಲಾಶ್ ತೆರೆಯಲಾಗುತ್ತಿದ್ದು, ಆರ್ಥಿಕತೆ ಪುನಶ್ಚೇತನದೊಂದಿಗೆ ತಮಗೆ ದೇಣಿಗೆ ನೀಡುರುವವರಿಗಾಗಿ ಈ ಬ್ಯಾಂಕ್ ಸಹಾಯಕವಾಗಿದೆ. ಎಜಿಒ ಮಾದರಿಯಲ್ಲಿ ಇದು ಕರ್ತವ್ಯ ನಿರ್ವಹಿಸಲಿದೆ ಎಂದಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ