ಆ್ಯಪ್ನಗರ

ಸ್ವಿಸ್‌ ಬ್ಯಾಂಕ್‌ನಲ್ಲಿನ 300 ಕೋಟಿ ರೂ. ಕ್ಲೇಮ್‌ ಮಾಡೋರೇ ಇಲ್ಲ!

ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸಂಬಂಧಿಸಿದಂತೆ 300 ಕೋಟಿ ರೂ. ಮೌಲ್ಯದ ಹಣ ಕೊಳೆಯುತ್ತಿದೆ. ಈ ಹಣ ತಮ್ಮದೆಂದು ಯಾರೂ ಹಕ್ಕನ್ನು ಮಂಡಿಸಿಲ್ಲ!

Vijaya Karnataka Web 16 Jul 2018, 5:30 am
ಹೊಸದಿಲ್ಲಿ: ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸಂಬಂಧಿಸಿದಂತೆ 300 ಕೋಟಿ ರೂ. ಮೌಲ್ಯದ ಹಣ ಕೊಳೆಯುತ್ತಿದೆ. ಈ ಹಣ ತಮ್ಮದೆಂದು ಯಾರೂ ಹಕ್ಕನ್ನು ಮಂಡಿಸಿಲ್ಲ!
Vijaya Karnataka Web swiss bank


ಹಣದ ಒಡೆಯರು ಪತ್ತೆಯಾಗದ ಮತ್ತು ಹಣದ ಮೇಲೆ ಹಕ್ಕು ಸಾಧಿಸದ ಖಾತೆಗಳ ಪಟ್ಟಿಯನ್ನು ಸ್ವಿಸ್‌ ಬ್ಯಾಂಕ್‌ಗಳು ಬಹಿರಂಗ ಮಾಡುತ್ತಿವೆ. ಈ ಪ್ರಕ್ರಿಯೆಯ ಮೂರನೇ ವರ್ಷವೂ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 2015ರಲ್ಲಿ ಮೊದಲ ಪಟ್ಟಿಯನ್ನು ಸ್ವಿಜರ್ಲೆಂಡ್‌ನ ಒಂಬುಡ್ಸ್‌ಮನ್‌ ಬಿಡುಗಡೆ ಮಾಡಿತ್ತು. ಖಾತೆಗೆ ಹಕ್ಕುದಾರರಿಲ್ಲ ಎಂಬುದು ಸ್ಪಷ್ಟವಾದಾಗ ಪಟ್ಟಿಯನ್ನು ಅಪ್‌ಡೇಟ್‌ ಮಾಡಲಾಗುತ್ತದೆ. ಖಾತೆದಾರರು ಅಥವಾ ಅವರ ಕುಟುಂಬದವರು ಅಗತ್ಯ ಪುರಾವೆಗಳನ್ನು ನೀಡಿ, ಹಣವನ್ನು ಹಿಂಪಡೆಯಲು ಅವಕಾಶವೂ ಇದೆ.

ಕಾಳಧನಿಕರ ಪಾಲಿಗೆ ಸ್ವಿಸ್‌ ಬ್ಯಾಂಕ್‌ಗಳು ಸ್ವರ್ಗವಿದ್ದಂತೆ. ಇಲ್ಲಿ ಹೂಡಿಕೆ ಮಾಡಿದ ಭಾರತೀಯರ ಕಾಳ ಧನವನ್ನು ತರಲು ಕೇಂದ್ರ ಸರಕಾರ ನಾನಾ ಪ್ರಯತ್ನಗಳನ್ನು ನಡೆಸುತ್ತಿದೆ. 2019ರಿಂದ ಉಭಯ ದೇಶಗಳ ನಡುವೆ ಮಾಹಿತಿಯ ವಿನಿಮಯವೂ ಆರಂಭವಾಗಲಿದ್ದು, ಕಾಳಧನಿಕರಿಗೆ ತೊಡಕಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ