ಆ್ಯಪ್ನಗರ

₹2,000 ನೋಟು ಮುದ್ರಣ ಸ್ಥಗಿತವಾಗಲಿದೆಯೇ? ವಿತ್ತ ಇಲಾಖೆ ಸ್ಪಷ್ಟನೆ ಇದು!

ಸರಕಾರ 2,000 ರೂ. ಮುಖಬೆಲೆಯ ನೋಟಿನ ಮುದ್ರಣವನ್ನು ಸ್ಥಗಿತಗೊಳಿಸಲು ನಿರ್ಧರಿಸಿಲ್ಲ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

Vijaya Karnataka Web 19 Sep 2020, 10:30 pm
ಹೊಸದಿಲ್ಲಿ: ಸರಕಾರ 2,000 ರೂ. ಮುಖಬೆಲೆಯ ನೋಟಿನ ಮುದ್ರಣವನ್ನು ಸ್ಥಗಿತಗೊಳಿಸಲು ನಿರ್ಧರಿಸಿಲ್ಲ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.
Vijaya Karnataka Web New-2000-note--reuters


2019-20 ಮತ್ತು 2020-21ರಲ್ಲಿ2,000 ರೂ. ನೋಟಿನ ಮುದ್ರಣಕ್ಕೆ ಪ್ರಸ್ತಾಪ ಇರಲಿಲ್ಲ. ಹೀಗಿದ್ದರೂ, ಇದರ ಮುದ್ರಣವನ್ನೇ ಸ್ಥಗಿತಗೊಳಿಸಲು ಸರಕಾರ ನಿರ್ಧರಿಸಿಲ್ಲ ಎಂದು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2020ರ ಮಾರ್ಚ್ 31ರ ವೇಳೆಗೆ 2 ಸಾವಿರ ರೂ.ಗಳ 27,398 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು. ಲಾಕ್‌ ಡೌನ್‌ ವೇಳೆ ತಾತ್ಕಾಲಿಕವಾಗಿ ನೋಟುಗಳ ಮುದ್ರಣವನ್ನು ಆರ್‌ ಬಿಐ ಸ್ಥಗಿತಗೊಳಿಸಿತ್ತು ಎಂದು ಠಾಕೂರ್‌ ಹೇಳಿದರು.

ಈ ಮೂಲಕ ದೇಶಾದ್ಯಂತ 2000 ರೂಪಾಯಿ ನೋಟು ಸ್ಥಗಿತಗೊಳ್ಳುತ್ತಿದೆ ಎಂಬ ವದಂತಿಗಳಿಗೆ ಸರ್ಕಾರ ತೆರೆ ಎಳೆದಿದೆ. ಈ ನಿಟ್ಟಿನಲ್ಲಿ ಹಣಕಾಸು ಸಚಿವಾಲಯದಿಂದ ಯಾವುದೇ ಸೂಚನೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ನವೆಂಬರ್ 8, 2016 ರಂದು ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಿತು. ಅದರ ನಂತರ ರಿಸರ್ವ್ ಬ್ಯಾಂಕ್ ಹೊಸ 500ರೂ. ನೋಟಿನೊಂದಿಗೆ 2,000 ರೂ. ಮುಖಬೆಲೆಯ ಹೊಸ ನೋಟನ್ನು ಪರಿಚಯಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ