ಆ್ಯಪ್ನಗರ

ಪ್ರಾಥಮಿಕ ಬ್ಯಾಂಕ್‌ ಖಾತೆ: ವಿತ್‌ ಡ್ರಾವಲ್ಸ್‌ ಬಗ್ಗೆ ಇರಲಿ ಎಚ್ಚರ

ಜನ ಸಾಮಾನ್ಯರಿಗೂ ಬ್ಯಾಂಕಿಂಗ್‌ ಸೇವೆಯನ್ನು ಕಲ್ಪಿಸಲು ಪ್ರಾಥಮಿಕ ಉಳಿತಾಯ ಬ್ಯಾಂಕ್‌ ಖಾತೆಗಳ(ಬಿಎಸ್‌ಬಿಡಿಎ) ಸೌಲಭ್ಯ ಜಾರಿಯಲ್ಲಿದೆ. ಇಂಥ ಖಾತೆಗಳಲ್ಲಿ ತಿಂಗಳಿಗೆ 4 ಸಲ ಹಣ ಹಿಂತೆಗೆದುಕೊಳ್ಳಬಹುದು. 4ಕ್ಕಿಂತ ಹೆಚ್ಚು ವಿತ್‌ಡ್ರಾವಲ್ಸ್‌ ಮೇಲೆ ಭಾರಿ ದಂಡವನ್ನು ಬ್ಯಾಂಕ್‌ಗಳು ವಿಧಿಸುತ್ತಿವೆ ಎಂದು ವರದಿಯಾಗಿದೆ.

TNN & Agencies 29 May 2018, 5:00 am
ಹೊಸದಿಲ್ಲಿ : ಜನ ಸಾಮಾನ್ಯರಿಗೂ ಬ್ಯಾಂಕಿಂಗ್‌ ಸೇವೆಯನ್ನು ಕಲ್ಪಿಸಲು ಪ್ರಾಥಮಿಕ ಉಳಿತಾಯ ಬ್ಯಾಂಕ್‌ ಖಾತೆಗಳ(ಬಿಎಸ್‌ಬಿಡಿಎ) ಸೌಲಭ್ಯ ಜಾರಿಯಲ್ಲಿದೆ. ಇಂಥ ಖಾತೆಗಳಲ್ಲಿ ತಿಂಗಳಿಗೆ 4 ಸಲ ಹಣ ಹಿಂತೆಗೆದುಕೊಳ್ಳಬಹುದು. 4ಕ್ಕಿಂತ ಹೆಚ್ಚು ವಿತ್‌ಡ್ರಾವಲ್ಸ್‌ ಮೇಲೆ ಭಾರಿ ದಂಡವನ್ನು ಬ್ಯಾಂಕ್‌ಗಳು ವಿಧಿಸುತ್ತಿವೆ ಎಂದು ವರದಿಯಾಗಿದೆ.
Vijaya Karnataka Web no frills account holders pay heavy penalty for exceeding withdrawal limit report
ಪ್ರಾಥಮಿಕ ಬ್ಯಾಂಕ್‌ ಖಾತೆ: ವಿತ್‌ ಡ್ರಾವಲ್ಸ್‌ ಬಗ್ಗೆ ಇರಲಿ ಎಚ್ಚರ


ಬಿಎಸ್‌ಬಿಡಿಎ ಖಾತೆಗಳಲ್ಲಿ ಬಳಕೆದಾರರು ಯಾವುದೇ ಕನಿಷ್ಠ ಬ್ಯಾಲೆನ್ಸ್‌ ಇಡಬೇಕಾಗಿರುವುದಿಲ್ಲ. ಇತರ ಸಾಮಾನ್ಯ ಖಾತೆಗಳಿಗೆ ಇರುತ್ತದೆ. ಹೀಗಿದ್ದರೂ ಬಿಎಸ್‌ಬಿಡಿಎ ಖಾತೆಗಳ ಮಹತ್ವದ ಅಂಶವೇನೆಂದರೆ ತಿಂಗಳಿಗೆ 4ಕ್ಕಿಂತ ಹೆಚ್ಚು ವಿತ್‌ ಡ್ರಾವಲ್ಸ್‌ ಮಾಡಬಾರದು. ಆದರೆ ಖಾತೆಗೆ ಠೇವಣಿ ಇಡಲು ಅಂತ ನಿಬಂಧನೆ ಇಲ್ಲ. ಎಷ್ಟು ಬೇಕಾದರೂ ಠೇವಣಿ ಇಡಬಹುದು. ಹೀಗಿದ್ದರೂ ಬ್ಯಾಂಕ್‌ಗಳು 4ಕ್ಕಿಂತ ಹೆಚ್ಚು ಸಲ ವಿತ್‌ ಡ್ರಾವಲ್ಸ್‌ ಮೇಲೆ ಭಾರಿ ದಂಡ ವಿಧಿಸುವುದು ಸಮಂಜಸವಲ್ಲ ಎಂದು ಐಐಟಿ ಬಾಂಬೆಯ ಪ್ರೊಫೆಸರ್‌ ಆಶಿಷ್‌ ದಾಸ್‌ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ