ಆ್ಯಪ್ನಗರ

ಪುಟ್ಟ ಕಂಪನಿಗಳ ಉದ್ಯೋಗಿಗಳಿಗೆ ಪಿಎಫ್‌ ಭಾಗ್ಯ ಇಲ್ಲ

ಸಣ್ಣಪುಟ್ಟ ಕಂಪನಿಗಳು ಮತ್ತು ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇದು ಕಹಿ ಸುದ್ದಿ! ಪಿಎಫ್‌ ವ್ಯಾಪ್ತಿಗೆ 10 ಉದ್ಯೋಗಿಗಳಿರುವ ಸಣ್ಣ ಕಂಪನಿಗಳನ್ನೂ ತರಲು ಮುಂದಾಗಿದ್ದ ಕಾರ್ಮಿಕ ಸಚಿವಾಲಯದ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟ ತಿರಸ್ಕರಿಸಿದೆ.

ಏಜೆನ್ಸೀಸ್ 5 Oct 2016, 4:00 am

ಹೊಸದಿಲ್ಲಿ: ಸಣ್ಣಪುಟ್ಟ ಕಂಪನಿಗಳು ಮತ್ತು ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇದು ಕಹಿ ಸುದ್ದಿ! ಪಿಎಫ್‌ ವ್ಯಾಪ್ತಿಗೆ 10 ಉದ್ಯೋಗಿಗಳಿರುವ ಸಣ್ಣ ಕಂಪನಿಗಳನ್ನೂ ತರಲು ಮುಂದಾಗಿದ್ದ ಕಾರ್ಮಿಕ ಸಚಿವಾಲಯದ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟ ತಿರಸ್ಕರಿಸಿದೆ.

ಕಾರ್ಮಿಕ ಸಚಿವಾಲಯದ ಪ್ರಸ್ತಾವನೆಯಿಂದ ಔಪಚಾರಿಕ ಉದ್ಯೋಗ ವಲಯಕ್ಕೆ ಧಕ್ಕೆಯಾಗುತ್ತದೆ ಎಂದಿರುವ ಕೇಂದ್ರ ಸಂಪುಟ, ಉದ್ದೇಶಿತ ಪ್ರಸ್ತಾವನೆಯನ್ನು ಬದಿಗೆ ಸರಿಸಿದೆ.

ಪ್ರಸ್ತುತ ಕಾನೂನಿನ ಅನ್ವಯ -20 ಉದ್ಯೋಗಿಗಳಿರುವ ಉದ್ಯಮಗಳು ಪಿಎಫ್‌ ವ್ಯಾಪ್ತಿಯಲ್ಲಿ ಬರುತ್ತವೆ. ಈ ಮಿತಿಯನ್ನು 10 ಉದ್ಯೋಗಿಗಳಿರುವ ಉದ್ಯಮಗಳಿಗೂ ವಿಸ್ತರಿಸಿ, ಆ ನೌಕರರಿಗೂ ಪಿಎಫ್‌ ಆಸರೆ ನೀಡುವ ಪ್ರಸ್ತಾವನೆಯನ್ನು ಕಾರ್ಮಿಕ ಸಚಿವಾಲಯ ಸಿದ್ಧಪಡಿಸಿತ್ತು. ಇದರಿಂದ ಅಸಂಘಟಿತ ವಲಯದಲ್ಲಿನ 50 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಲೆಕ್ಕ ಹಾಕಲಾಗಿತ್ತು. ''ಸಾಮಾಜಿಕ ಭದ್ರತೆಯ ಆಸರೆ ಸಣ್ಣ ಕಂಪನಿಗಳ ಕಾರ್ಮಿಕರಿಗೂ ದಕ್ಕಲಿದೆ,'' ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಕಳೆದ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಹೇಳಿದ್ದರು.

ವಿರೋಧಕ್ಕೆ ಮಣಿದ ಸರಕಾರ:

''ಕಾರ್ಮಿಕರಿಗೆ ಅನುಕೂಲವಾಗುವ ಈ ಪ್ರಸ್ತಾವನೆಗೆ ಸಣ್ಣ ಉದ್ಯಮಗಳಿಂದ ವಿರೋಧ ವ್ಯಕ್ತವಾಗಿತ್ತು. ಸಣ್ಣ ಉದ್ಯಮಿಗಳಿಗೆ ಈ ಪ್ರಸ್ತಾವನೆಯಿಂದ ಹೆಚ್ಚಿನ ಹೊರೆ ಬೀಳುತ್ತದೆ,'' ಎಂದು ಕಾರ್ಮಿಕ ಸಚಿವಾಲಯದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

'ಇಪಿಎಫ್‌ ಮತ್ತು ಎಂಪಿ ಕಾಯ್ದೆ-1952' ಪ್ರಕಾರ, ಉದ್ಯೋಗಿಯು ಸಂಬಳದಲ್ಲಿ ಪ್ರತಿ ತಿಂಗಳು ತನ್ನ ಇಪಿಎಫ್‌ ಖಾತೆಗೆ ಶೇ.12ರಷ್ಟು ಹಣವನ್ನು ತುಂಬಬೇಕು. ಇಷ್ಟೇ ಮೊತ್ತದ ಹಣವನ್ನು ಉದ್ಯೋಗದಾತರೂ ತುಂಬಬೇಕು. ಉದ್ಯೋಗದಾತರು ತುಂಬುವ ಶೇ.12ರಷ್ಟು ಹಣದಲ್ಲಿ ಶೇ.8.33ರಷ್ಟು ಭಾಗವು ಉದ್ಯೋಗಿಯ ಪಿಂಚಣಿ ಯೋಜನೆಗೆ ಜಮೆಯಾಗುತ್ತದೆ. ಉದ್ಯೋಗಿಯ ಶೇ.0.5ರಷ್ಟು ಠೇವಣಿಯು ವಿಮೆ ಯೋಜನೆಗೆ ಹೊಂದಿಕೆಯಾಗಿರುತ್ತದೆ. ಉಳಿದ ಹಣವು ಭವಿಷ್ಯ ನಿಧಿ ಖಾತೆಗೆ ಜಮೆಯಾಗುತ್ತದೆ.

-----

Vijaya Karnataka Web no provident fund to small companies
ಪುಟ್ಟ ಕಂಪನಿಗಳ ಉದ್ಯೋಗಿಗಳಿಗೆ ಪಿಎಫ್‌ ಭಾಗ್ಯ ಇಲ್ಲ

ಪಿಎಫ್‌ ಮಿತಿ ಇಳಿಕೆಗೆ ವಿರೋಧಿಸಿದ ಕೇಂದ್ರ ಸಂಪುಟದ ತೀರ್ಮಾನ ಸ್ವಾಗತಾರ್ಹ. ಇದು ಸಣ್ಣ ಕಂಪನಿಗಳ ಪಾಲಿಗೆ ಕಂಟಕವಾಗಿತ್ತು.

-ರಿತುಪರ್ಣ ಚಕ್ರವರ್ತಿ, ಇಂಡಿಯನ್‌ ಸ್ಟಾಫಿಂಗ್‌ ಫೆಡರೇಷನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ