ಆ್ಯಪ್ನಗರ

ಬ್ಯಾಂಕ್‌ ಲಾಕರ್‌ನ ರಕ್ಷಣೆಗೂ ವಿಮೆ ಪಾಲಿಸಿ ಲಭ್ಯ

ಭಾರತದಲ್ಲಿ ಈಗ ಮನೆಯಲ್ಲಿಯೇ ಭಾರಿ ಚಿನ್ನಾಭರಣಗಳನ್ನು ಇಟ್ಟುಕೊಳ್ಳುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಬ್ಯಾಂಕ್‌ ಲಾಕರ್‌ಗಳಲ್ಲಿ ಬಂಗಾರದ ಒಡವೆಗಳು, ಅಮೂಲ್ಯ ವಸ್ತುಗಳನ್ನು ಇಡುವುದು ಸಾಮಾನ್ಯ. ಹೀಗಿದ್ದರೂ, ದುರದೃಷ್ಟವಶಾತ್‌ ಬ್ಯಾಂಕ್‌ ಲಾಕರ್‌ ಕೂಡ ಏನಾದರೂ ಅವಘಡದ ಅಥವಾ ಅಹಿತಕರ ಘಟನೆಯ ಪರಿಣಾಮ ಹಾನಿಗೀಡಾಗಿ, ಅದರಲ್ಲಿ ನೀವು ಇಟ್ಟಿದ್ದ ಬೆಲೆ ಬಾಳುವ ವಸ್ತುಗಳು ನಾಶವಾದರೆ? ಈಗ ಅದಕ್ಕೂ ವಿಮೆಯ ರಕ್ಷಣೆ ಪಡೆಯಬಹುದು.

Vijaya Karnataka Web 21 Apr 2019, 5:00 am
ಹೊಸದಿಲ್ಲಿ : ಭಾರತದಲ್ಲಿ ಈಗ ಮನೆಯಲ್ಲಿಯೇ ಭಾರಿ ಚಿನ್ನಾಭರಣಗಳನ್ನು ಇಟ್ಟುಕೊಳ್ಳುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಬ್ಯಾಂಕ್‌ ಲಾಕರ್‌ಗಳಲ್ಲಿ ಬಂಗಾರದ ಒಡವೆಗಳು, ಅಮೂಲ್ಯ ವಸ್ತುಗಳನ್ನು ಇಡುವುದು ಸಾಮಾನ್ಯ. ಹೀಗಿದ್ದರೂ, ದುರದೃಷ್ಟವಶಾತ್‌ ಬ್ಯಾಂಕ್‌ ಲಾಕರ್‌ ಕೂಡ ಏನಾದರೂ ಅವಘಡದ ಅಥವಾ ಅಹಿತಕರ ಘಟನೆಯ ಪರಿಣಾಮ ಹಾನಿಗೀಡಾಗಿ, ಅದರಲ್ಲಿ ನೀವು ಇಟ್ಟಿದ್ದ ಬೆಲೆ ಬಾಳುವ ವಸ್ತುಗಳು ನಾಶವಾದರೆ? ಈಗ ಅದಕ್ಕೂ ವಿಮೆಯ ರಕ್ಷಣೆ ಪಡೆಯಬಹುದು.
Vijaya Karnataka Web now a policy to protect bank locker
ಬ್ಯಾಂಕ್‌ ಲಾಕರ್‌ನ ರಕ್ಷಣೆಗೂ ವಿಮೆ ಪಾಲಿಸಿ ಲಭ್ಯ


ಇತ್ತೀಚೆಗೆ ಬ್ಯಾಂಕ್‌ ಲಾಕರ್‌ ವಿಮೆ ಪಾಲಿಸಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬ್ಯಾಂಕ್‌ ಲಾಕರ್‌ಗಳಲ್ಲಿ ಇಡುವ ವಸ್ತುಗಳಿಗೆ ವಿಮೆ ರಕ್ಷಣೆ ನೀಡುತ್ತವೆ.

ಉದಾಹರಣೆಗೆ ಇಫ್ಕೊ -ಟೋಕಿಯೊ ಜನರಲ್‌ ಇನ್ಷೂರೆನ್ಸ್‌ ಕಂಪನಿಯು ಕಳೆದ ಫೆಬ್ರವರಿಯಲ್ಲಿ ಬ್ಯಾಂಕ್‌ ಲಾಕರ್‌ ರಕ್ಷಣೆ ವಿಮೆ ಪಾಲಿಸಿ ಬಿಡುಗಡೆಗೊಳಿಸಿತ್ತು. ಬ್ಯಾಂಕ್‌ ದರೋಡೆ, ಭಯೋತ್ಪಾದನೆ, ಯಾವುದೇ ಅಪಘಾತ, ಬ್ಯಾಂಕ್‌ ಸಿಬ್ಬಂದಿಯ ವಂಚನೆ ಪರಿಣಾಮ ಲಾಕರ್‌ನಲ್ಲಿ ಇಟ್ಟಿರುವ ಚಿನ್ನಾಭರಣ ಮತ್ತು ಬೆಲೆ ಬಾಳುವ ವಸ್ತುಗಳಿಗೆ ಹಾನಿಯಾದರೆ ವಿಮೆ ಪರಿಹಾರ ನೀಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ