ಆ್ಯಪ್ನಗರ

ಎಲೆಕ್ಟ್ರಿಕ್ ಸ್ಕೂಟರ್‌ ಬೆಲೆ ಏರಿಕೆ ಮಾಡಿದ ಓಲಾ, ಎಸ್‌1 ಪ್ರೊ ಸ್ಕೂಟರ್‌ ಬೆಲೆಯಲ್ಲಿ ಭಾರೀ ಹೆಚ್ಚಳ

ಓಲಾ ಎಲೆಕ್ಟ್ರಿಕ್ ಎಸ್‌1 ಪ್ರೊ ಸ್ಕೂಟರ್‌ನ ಬೆಲೆಯನ್ನು ಏರಿಕೆ ಮಾಡಿದ್ದು ಎಸ್‌1 ಪ್ರೊ ಬೆಲೆ ಈಗ 1,20,149 ರೂ.ಗೆ ತಲುಪಿದೆ. ಇದು ಫೇಮ್‌-II ಮತ್ತು ರಾಜ್ಯ ಸರಕಾರದ ಸಬ್ಸಿಡಿಗಳ ನಂತರದ ದಿಲ್ಲಿ ಶೋ ರೂಂ ಬೆಲೆಯಾಗಿದ್ದು, ಹಳೆ ದರಕ್ಕೆ ಹೋಲಿಸಿದರೆ ಹೊಸ ಇ-ಸ್ಕೂಟರ್‌ ಬೆಲೆ 10,000 ರೂ. ದುಬಾರಿಯಾಗಿದೆ.

ET Online 21 May 2022, 3:39 pm
ಓಲಾ ಎಲೆಕ್ಟ್ರಿಕ್ ತನ್ನ ಪ್ರಮುಖ ಇ-ಸ್ಕೂಟರ್ ಎಸ್‌1 ಪ್ರೊ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದೆ. ಎಸ್‌1 ಪ್ರೊ ಬೆಲೆ ಈಗ 1,20,149 ರೂ.ಗೆ ತಲುಪಿದೆ. ಇದು ಫೇಮ್‌-II (FAME) ಮತ್ತು ರಾಜ್ಯ ಸರಕಾರದ ಸಬ್ಸಿಡಿಗಳ ನಂತರದ ದಿಲ್ಲಿ ಶೋ ರೂಂ ಬೆಲೆಯಾಗಿದೆ. ಸಬ್ಸಿಡಿಗಳ ಹೊರತಾಗಿ ಈ ಸ್ಕೂಟರ್‌ ಬೆಲೆ 1,40,000 ರೂ.ಗಳಾಗಿವೆ. ಹಳೆ ದರಕ್ಕೆ ಹೋಲಿಸಿದರೆ ಹೊಸ ಇ-ಸ್ಕೂಟರ್‌ ಬೆಲೆ 10,000 ರೂ. ದುಬಾರಿಯಾಗಿದೆ.
Vijaya Karnataka Web ola electric


ಓಲಾ ಎಸ್‌1 ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಬ್ಸಿಡಿ ಸೇರಿ ಓಲಾ ಎಸ್‌1 ದಿಲ್ಲಿ ಶೋ ರೂಂ ದರ 85,099 ರೂ.ಗಳಾಗಿವೆ. ಸಬ್ಸಿಡಿ ಇಲ್ಲದೆ ಶೋ ರೂಂ ದರ 99,999 ರೂ.ಗಳಾಗಿವೆ.

ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಎಸ್‌1, ಎಸ್1 ಪ್ರೊ ಖರೀದಿಗೆ ಮತ್ತೆ ಅವಕಾಶ ಕಲ್ಪಿಸಿದ್ದು, ಮೇ 21ರವರೆಗೆ ಬುಕ್ಕಿಂಗ್‌ ಮಾಡಲು ಅವಕಾಶವಿದೆ.

ಬ್ಯಾಟರಿ ಸ್ಫೋಟ ಪ್ರಕರಣ: 1,400 ಎಲೆಕ್ಟ್ರಿಕ್ ವಾಹನಗಳನ್ನು ವಾಪಸ್ ತರಿಸಿಕೊಂಡ ಓಲಾ
ಮಾರ್ಚ್‌ನಲ್ಲೇ ದರ ಏರಿಸುವುದಾಗಿ ಹೇಳಿದ್ದ ಓಲಾ

ಓಲಾ ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಈ ಹಿಂದೆ ಮಾರ್ಚ್‌ನಲ್ಲೇ ಸ್ಕೂಟರ್‌ಗಳ ದರ ಏರಿಕೆ ಮಾಡುವುದಾಗಿ ಕಂಪನಿ ಘೋಷಿಸಿತ್ತು.

ಕಳೆದ ತಿಂಗಳು, ಓಲಾದ ಎಲೆಕ್ಟ್ರಿಕ್‌ ವಾಹನಗಳಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಕಂಪನಿ ತನ್ನ 1,441 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹಿಂಪಡೆದಿತ್ತು.

ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಮುಂದೆಯೂ ಬೆಂಕಿ ಕಾಣಿಸಿಕೊಳ್ಳಬಹುದು - ಓಲಾ ಸಿಇಒ ಅಚ್ಚರಿಯ ಹೇಳಿಕೆ!
ಇದಾದ ನಂತರ ಪ್ರತಿಕ್ರಿಯೆ ನೀಡಿದ್ದ ಓಲಾ ಎಲೆಕ್ಟ್ರಿಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಿಶ್ ಅಗರ್ವಾಲ್, ಭವಿಷ್ಯದಲ್ಲಿಯೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು. ಆದರೆ ಅಂತಹ ಘಟನೆಗಳು ಬಹಳ ಅಪರೂಪ ಎಂದು ಕಂಪನಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಮಾರ್ಚ್‌ನಲ್ಲಿ ಓಲಾದ ಸ್ಕೂಟರ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸುರಕ್ಷತೆಗೆ ಕಂಪನಿ ಹೆಚ್ಚಿನ ಒತ್ತು ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ