ಆ್ಯಪ್ನಗರ

ಎಲೆಕ್ಟ್ರಿಕ್‌ ಸ್ಕೂಟರ್‌ ಘಟಕ ಸ್ಥಾಪನೆಗೆ ಓಲಾ ಸಿದ್ಧತೆ, ಕರ್ನಾಟಕ ಸರಕಾರದ ಜೊತೆ ಮಾತುಕತೆ

100 ಎಕರೆ ವಿಸ್ತೀರ್ಣದಲ್ಲಿ ದ್ವಿಚಕ್ರ ವಾಹನ ಉತ್ಪಾದನಾ ಘಟಕ ಸ್ಥಾಪನೆಗೆ ಬೆಂಗಳೂರು ಮೂಲದ ಓಲಾ ಮುಂದಾಗಿದೆ. ಸೌರ ಶಕ್ತಿ ಮತ್ತು ಶೂನ್ಯ ಇಂಗಾಲ ಹೊರಸೂಸುವಿಕೆ ಈ ಘಟಕದ ವಿಶೇಷತೆಗಳಾಗಿರಲಿವೆ.

Agencies 3 Nov 2020, 7:25 pm
ಬೆಂಗಳೂರು: ದೇಶದ ಅತೀ ದೊಡ್ಡ ಎಲೆಕ್ಟ್ರಿಕ್‌ ಸ್ಕೂಟರ್‌ ಉತ್ಪಾದನಾ ಘಟಕ ಸ್ಥಾಪನೆಗೆ ಓಲಾ ನಿರ್ಧರಿಸಿದ್ದು, ಈ ಸಂಬಂಧ ಕರ್ನಾಟಕ ಸೇರಿ ಹಲವು ರಾಜ್ಯ ಸರಕಾರಗಳು ಜೊತೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
Vijaya Karnataka Web Ola electric


ಮೂಲಗಳ ಪ್ರಕಾರ ಆಪ್‌ ಆಧಾರಿತ ಕ್ಯಾಬ್‌ ಸೇವೆ ನೀಡುವ ಕಂಪನಿಯ ವಿದ್ಯುತ್ ‌ಚಾಲಿತ ವಾಹನಗಳ ಘಟಕ ‘ಓಲಾ ಎಲೆಕ್ಟ್ರಿಕ್‌’, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ಸರಕಾರದ ಜೊತೆ ಮಾರುಕತೆ ನಡೆಸುತ್ತಿದೆ. ವರ್ಷಕ್ಕೆ 20 ಲಕ್ಷ ಸ್ಕೂಟರ್‌ಗಳ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪನೆ ಸಂಬಂಧ ಕಂಪನಿಯು ರಾಜ್ಯ ಸರಕಾರಗಳ ಜೊತೆ ಚರ್ಚೆ ನಡೆಸುತ್ತಿದೆ.

100 ಎಕರೆ ವಿಸ್ತೀರ್ಣದಲ್ಲಿ ವಾಹನ ಉತ್ಪಾದನಾ ಘಟಕ ಸ್ಥಾಪನೆಗೆ ಬೆಂಗಳೂರು ಮೂಲದ ಓಲಾ ಮುಂದಾಗಿದೆ. ಸೌರ ಶಕ್ತಿ ಮತ್ತು ಶೂನ್ಯ ಇಂಗಾಲ ಹೊರಸೂಸುವಿಕೆ ಈ ಘಟಕದ ವಿಶೇಷತೆಗಳಾಗಿರಲಿವೆ.

ಮುಂದಿನ ಒಂದೂವರೆಯಿಂದ ಎರಡು ವರ್ಷಗಳ ಅವಧಿಯಲ್ಲಿ ಸ್ಕೂಟರ್‌ ಉತ್ಪಾದನೆಯನ್ನು ಆರಂಭಿಸಲು ಕಂಪನಿ ಚಿಂತನೆ ನಡೆಸಿದೆ. ಈ ಘಟಕ ಸ್ಥಾಪನೆಯಾಗಿದ್ದೇ ಆದಲ್ಲಿ ಬಜಾಜ್‌ ಆಟೋ, ಹಿರೋ ಬೆಂಬಲಿತ ಏಥರ್‌ ಎನರ್ಜಿ, ಹೀರೋ ಎಲೆಕ್ಟ್ರಿಕ್‌ ಜೊತೆ ಓಲಾವೂ ಸ್ಪರ್ಧೆಗೆ ಇಳಿಯಲಿದೆ.

ಈ ವರ್ಷದ ಮೇನಲ್ಲಿ ಓಲಾ ಎಲೆಕ್ಟ್ರಿಕ್‌ ಅಮ್‌ಸ್ಟರ್‌ಡ್ಯಾಮ್‌ ಮೂಲದ 'ಎಟರ್ಗೊ ಬಿವಿ' ಕಂಪನಿಯನ್ನು ಖರೀದಿಸಿತ್ತು. ಆಗಸ್ಟ್‌ನಲ್ಲಿ 1,000 ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದ್ದ ಕಂಪನಿ, ಸದ್ಯದಲ್ಲೇ ಮಾರುಕಟ್ಟೆಗೆ ದ್ವಿಚಕ್ರ ವಾಹನವನ್ನು ಪರಿಚಯಿಸುವುದಾಗಿ ಹೇಳಿತ್ತು.

ಈಗಾಗಲೇ ಓಲಾ ಎಲೆಕ್ಟ್ರಿಕ್‌, ಟೈಗರ್‌ ಗ್ಲೋಬಲ್‌, ಮ್ಯಾಟ್ರಿಕ್‌ ಇಂಡಿಯಾ ಮತ್ತು ಟಾಟಾ ಸನ್ಸ್‌ ಮುಖ್ಯಸ್ಥ ರತನ್‌ ಟಾಟಾ ಸೇರಿ ಹಲವರಿಂದ 400 ಕೋಟಿ ರೂಪಾಯಿ ಹೂಡಿಕೆಯನ್ನೂ ಪಡೆದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ