ಆ್ಯಪ್ನಗರ

ದೇಶದ ರಸ್ತೆಗಿಳಿದ ಮೊದಲ ಐಶಾರಾಮಿ ಮಿನಿ ಎಲೆಕ್ಟ್ರಿಕ್‌ ಬಸ್‌

ಎಲೆಕ್ಟ್ರಿಕ್‌ ಬಸ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಒಲೆಕ್ಟ್ರಾ ಗ್ರೀನ್‌ಟೆಕ್‌ ಲಿಮಿಟೆಡ್‌ ಕಂಪನಿಯು ಮೊಟ್ಟ ಮೊದಲ ಬಾರಿಗೆ ಮಾಲಿನ್ಯ ರಹಿತ ಐಶಾರಾಮಿ ಸೌಲಭ್ಯಗಳ ಮಿನಿ ...

Vijaya Karnataka 31 Aug 2018, 8:54 am
ಹೈದರಾಬಾದ್‌: ಎಲೆಕ್ಟ್ರಿಕ್‌ ಬಸ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಒಲೆಕ್ಟ್ರಾ ಗ್ರೀನ್‌ಟೆಕ್‌ ಲಿಮಿಟೆಡ್‌ ಕಂಪನಿಯು ಮೊಟ್ಟ ಮೊದಲ ಬಾರಿಗೆ ಮಾಲಿನ್ಯ ರಹಿತ ಐಶಾರಾಮಿ ಸೌಲಭ್ಯಗಳ ಮಿನಿ ಎಲೆಕ್ಟ್ರಿಕ್‌ ಬಸ್‌ಅನ್ನು (ಇ ಬಜ್‌ ಕೆ6 ಲಕ್ಸೆ) ಭಾರತಕ್ಕೆ ಪರಿಚಯಿಸಿದೆ. ಲಿಯಾನ್‌ ಬ್ಯಾಟರಿ ಚಾಲಿತ 7 ಮೀಟರ್‌ ಉದ್ದದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೌಕರ್ಯಗಳನ್ನು ಒಳಗೊಂಡಿರುವ 11 ಆಸನಗಳ ಬಸ್‌ ಇದಾಗಿದೆ.
Vijaya Karnataka Web electra bus


ಗಂಟೆಗೆ ಗರಿಷ್ಠ 80 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಒಂದು ಬಾರಿ ಬ್ಯಾಟರಿ ಜಾರ್ಚ್‌ ಆದರೆ 200 ಕಿ.ಮೀವರೆಗೂ ಚಲಿಸುವ ಶಕ್ತಿ ಹೊಂದಿದೆ. ಬಿವೈಡಿ ಆಟೋ ಇಂಡಸ್ಟ್ರಿ ಕಂಪನಿ ಲಿಮಿಟೆಡ್‌ನ ಪಾಲುದಾರಿಕೆಯಲ್ಲಿ ಒಲೆಕ್ಟ್ರಾ ಗ್ರೀನ್‌ಟೆಕ್‌ ಕಂಪನಿ ಇದನ್ನು ಮೊದಲ ಬಾರಿಗೆ ಭಾರತದಲ್ಲಿಯೇ ಉತ್ಪಾದಿಸಲಿದೆ. 'ಆಟೋಮೋಟಿವ್‌ ರಿಸರ್ಚ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ' ನಿಗದಿಪಡಿಸಿದ ಮಾನದಂಡಗಳ ಅನುಸಾರವೇ ಉತ್ಪಾದನೆ ಮಾಡಿದೆ. ಡಿಸ್ಕ್‌ ಬ್ರೇಕ್‌, ಎಬಿಎಸ್‌ ತಂತ್ರಜಾನ, ಶಾರ್ಟ್‌ ಸಕ್ರ್ಯೂಟ್‌ ರಕ್ಷಣಾ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ಸೀಟ್‌ಬೆಲ್ಟ್‌, ರಿಯಲ್‌ ಟೈಮ್‌ ಟ್ರ್ಯಾಕಿಂಗ್‌, ಪ್ರಯಾಣಿಕ ಮಾಹಿತಿ ಫಲಕ, ಐಶಾರಾಮಿ ಸೀಟು ಹಾಗೂ ಹವಾ ನಿಯಂತ್ರಿತ ವ್ಯವಸ್ಥೆಯನ್ನು ಒಳಗೊಂಡಿದೆ.

ಈ ಹಿಂದೆ ಕಂಪನಿಯು ಹಿಮಾಚಲ ಪ್ರದೇಶದ 'ಎಚ್‌ಆರ್‌ಟಿಸಿ'ಗೆ 25, ಮುಂಬಯಿಯ 'ಬೆಸ್ಟ್‌'ಗೆ 6 ವಿವಿಧ ಶ್ರೇಣಿಯ ಬಸ್‌ಗಳನ್ನು ಪೂರೈಸಿದೆ. 12 ಮೀ. ಉದ್ದದ ಕೆ-7 ಶ್ರೇಣಿಯ ಬಸ್‌ಗಳು ಬೆಂಗಳೂರು, ದಿಲ್ಲಿ, ಗೋವಾ, ಚಂಡೀಗಢ, ರಾಜ್‌ಕೋಟ್‌, ಹೈದರಾಬಾದ್‌ನಲ್ಲಿ ಪ್ರಾಯೋಗಿಕ ಸಂಚಾರ ನಡೆಸಿವೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ