ಆ್ಯಪ್ನಗರ

2000 ರೂ. ನೋಟುಗಳೂ ಅಮಾನ್ಯವಾಗಲಿ: ವಿತ್ತ ಸಚಿವಾಲಯದ ನಿವೃತ್ತ ಅಧಿಕಾರಿ ಹೇಳಿಕೆ

2000 ರೂ. ಮುಖಬೆಲೆಯ ನೋಟುಗಳು ಕೂಡ ಕಪ್ಪು ಹಣವಾಗಿ ಸಂಗ್ರಹಗೊಂಡಿದ್ದು, ಇವುಗಳನ್ನೂ ಅಮಾನ್ಯೀಕರಣಗೊಳಿಸಬೇಕು ಎಂದು ವಿತ್ತ ಸಚಿವಾಲಯದ ನಿವೃತ್ತ ಅಧಿಕಾರಿಯೊಬ್ಬರು ಹೇಳಿದ್ದಾರೆ. ₹500 ಮತ್ತು ₹1000 ಮುಖಬೆಲೆಯ ನೋಟುಗಳ ಅಮಾನ್ಯೀಕರಣಗೊಂಡು ಇಂದಿಗೆ ಮೂರು ವರ್ಷ ಪೂರ್ಣಗೊಂಡಿದೆ.

THE ECONOMIC TIMES 8 Nov 2019, 6:19 pm
ಹೊಸದಿಲ್ಲಿ: 500ರೂ. ಮತ್ತು 1000 ರೂ. ನೋಟುಗಳ ಅಮಾನ್ಯೀಕರನಗೊಂಡು ಇಂದಿಗೆ ಮೂರು ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಮಾಜಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಸ್‌.ಸಿ. ಗಾರ್ಗ್‌ ಅವರು ಆಘಾತಕಾರಿ ಹೇಳಿಕೆ ನೀಡಿದ್ದಾರೆ.
Vijaya Karnataka Web SC Garg
ಎಸ್‌.ಸಿ. ಗಾರ್ಗ್‌


ಮೋದಿ ಸರ್ಕಾರವು 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಪರಿಚಯಿಸಿತ್ತು. ಇದೀಗ 2000 ರೂ. ಮುಖಬೆಲೆಯ ನೋಟುಗಳು ಕೂಡ ಜನರ ಬಳಿ ಕಪ್ಪು ಹಣದಂತೆ ಸಂಗ್ರಹಗೊಂಡಿವೆ. ಇವುಗಳನ್ನೂ ಅಮಾನ್ಯೀಕರಣಗೊಳಿಸಬೇಕು ಎಂದಿದ್ದಾರೆ.

ರಾಷ್ಟ್ರೀಯ ಆರೋಗ್ಯ ತಪಾಸಣಾ ದಿನ

ಇಂದಿಗೆ ಮೂರು ವರ್ಷಗಳ ಹಿಂದೆ. ಪ್ರಧಾನಿ ನರೇಂದ್ರ ಮೋದಿ ಆಶ್ಚರ್ಯಕರ ರೀತಿಯಲ್ಲಿ ನೋಟು ಮಾನ್ಯೀಕರಣ ಕುರಿತು ಘೋಷಣೆ ಹೊರಡಿಸಿದ್ದರು. ಕನಿಷ್ಠ ನಗದು ಆರ್ಥಿಕತೆ, ಡಿಜಿಟಲ್‌ ಆರ್ಥಿಕತೆ ಹಾಗೂ ಕಪ್ಪು ಹಣ ನಿಯಂತ್ರಣದಂತಹ ಪ್ರಮುಖ ಉದ್ದೇಶಗಳೊಂದಿಗೆ ಈ ಕ್ರಮ ಕೈಗೊಳ್ಳಲಾಗಿತ್ತು.

ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಈಗಲೂ ನಗದು ಚಲಾವಣೆ ಚಲಾವಣೆ ಪ್ರಮಾಣ ಉನ್ನತ ಮಟ್ಟದಲ್ಲೇ ಇದೆ. 2000 ರೂಪಾಯಿ ನೋಟುಗಳು ಸಂಗ್ರಹಗೊಂಡಿರುವುದೇ ಇದಕ್ಕೆ ಸಾಕ್ಷಿ. ಕೇವಲ ಮೂರನೇ ಒಂದು ಭಾಗದಷ್ಟು ನೋಟುಗಳು ಮಾತ್ರವೇ ಚಲಾವಣೆಯಲ್ಲಿವೆ ಎಂದಿದ್ದಾರೆ.

ನೋಟು ಅಮಾನ್ಯೀಕರಣ, ಜಿಎಸ್‌ಟಿಯಿಂದ ತೆರಿಗೆ ವಂಚನೆಗೆ ಬ್ರೇಕ್: ನಿರ್ಮಲಾ ಸೀತಾರಾಮನ್

ಡಿಜಿಟಲ್‌ ಆರ್ಥಿಕತೆಯ ವಿಸ್ತರಣೆ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಆಗುತ್ತಿದೆ. ಹೀಗಾಗಿ ಇದು ಭಾರತದಲ್ಲೂ ಸಂಭವಿಸುತ್ತಿದೆ. ಆದರೆ, ಡಿಜಿಟಲ್‌ ಆರ್ಥಿಕತೆಯ ವಿಸ್ತರಣೆ ವೇಗ ನಿಧಾನಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ನೋಟ್‌ ಬ್ಯಾನ್ ಮೆಗಾ ಹಗರಣ: ನಿರುದ್ಯೋಗ ಪ್ರಮಾಣ ಹೆಚ್ಚಳದ ಬಗ್ಗೆ ಕೇಜ್ರಿವಾಲ್ ಟ್ವೀಟ್

ಹಣಕಾಸು ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದ ಗಾರ್ಗ್‌ ಅವರನ್ನು ಹಣಕಾಸು ಇಲಾಖೆಯಿಂದ ವರ್ಗಾವಣೆ ಮಾಡಿದ್ದಕ್ಕಾಗಿ ಸ್ವಯಂ ನಿವೃತ್ತಿ ಪಡೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ