ಆ್ಯಪ್ನಗರ

ಈರುಳ್ಳಿ ಸೆಂಚುರಿ, ಗ್ರಾಹಕರಿಗೆ ಕಣ್ಣುರಿ : ಹೆಚ್ಚುತ್ತಿವೆ ಕಳ್ಳತನ ಪ್ರಕರಣ

ಈರುಳ್ಳಿ ದರ ದೇಶದ ಬಹುತೇಕ ನಗರಗಳಲ್ಲಿಶುಕ್ರವಾರ ಕೆ.ಜಿಗೆ 100 ರೂ.ಗಳ ಗಡಿ ದಾಟಿದೆ. ಬೆಲೆ ಏರುತ್ತಿರುವ ಬೆನ್ನಲ್ಲಿಯೇ ದೇಶದ ನಾನಾ ಕಡೆ 25 ಲಕ್ಷ ರೂ. ಮೌಲ್ಯದ ಈರುಳ್ಳಿ ಕಳ್ಳತನಗಳು ವರದಿಯಾಗಿವೆ.

Vijaya Karnataka Web 30 Nov 2019, 9:11 am
ಹೊಸದಿಲ್ಲಿ: ಈರುಳ್ಳಿ ದರ ದೇಶದ ಬಹುತೇಕ ನಗರಗಳಲ್ಲಿಶುಕ್ರವಾರ ಕೆ.ಜಿಗೆ 100 ರೂ.ಗಳ ಗಡಿ ದಾಟಿದೆ. ದಾಳಿಂಬೆ, ಸೇಬು, ದ್ರಾಕ್ಷಿಯಂಥ ಹಣ್ಣುಗಳ ದರದ ಮಟ್ಟಕ್ಕೆ ಈರುಳ್ಳಿಯೂ ಜಿಗಿಯುತ್ತಿದೆ. ಈ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿಕೆ.ಜಿಗೆ 70-80 ರೂ. ದರವಿದೆ. ಬೆಲೆ ಏರುತ್ತಿರುವ ಬೆನ್ನಲ್ಲಿಯೇ ದೇಶದ ನಾನಾ ಕಡೆ 25 ಲಕ್ಷ ರೂ. ಮೌಲ್ಯದ ಈರುಳ್ಳಿ ಕಳ್ಳತನಗಳು ವರದಿಯಾಗಿವೆ.
Vijaya Karnataka Web onion
ಸಾಂದರ್ಭಿಕ ಚಿತ್ರ


ದಿಲ್ಲಿ, ಗುಜರಾತ್‌, ಪಶ್ಚಿಮ ಬಂಗಾಳ ಮತ್ತು ಬಿಹಾರ ಸೇರಿದಂತೆ ಕೆಲವು ರಾಜ್ಯಗಳಲ್ಲಿಅಂಗಡಿಗಳು ಮತ್ತು ಟ್ರಕ್‌ಗಳಲ್ಲಿನ ಈರುಳ್ಳಿ ಕಳವಾಗಿದೆ. ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರದ ಅಂಗಡಿಯೊಂದರಿಂದ 50,000 ರೂ. ಮೌಲ್ಯದ ಈರುಳ್ಳಿಯನ್ನು ದೋಚ­ಲಾಗಿದೆ. ಮತ್ತೊಂದು ತರಕಾರಿ ಅಂಗಡಿಯಲ್ಲಿ10 ಚೀಲ ಈರುಳ್ಳಿ ಕಳವಾಗಿದೆ.

ಗುಜರಾತ್‌ನ ಸೂರತ್‌ನ ತರಕಾರಿ ಮಾರುಕಟ್ಟೆಯಲ್ಲಿ19,000 ರೂ. ಮೌಲ್ಯದ ಈರುಳ್ಳಿ ಕಳವಾಗಿದೆ. ಈ ರಾಜ್ಯದ ಸೂರತ್‌, ವಡೋದರಾ ಮತ್ತು ಇತರೆ ನಗರಗಳಲ್ಲಿಈರುಳ್ಳಿ ದರ ಕೆ.ಜಿಗೆ 80-120 ರೂ. ಮುಟ್ಟಿದೆ. ದೇಶದಲ್ಲಿಹೆಚ್ಚಿನ ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶ ಮತ್ತು ಗುಜರಾತ್‌ಗಳಲ್ಲಿಹೆಚ್ಚಿನ ಮಳೆಯಿಂದಾಗಿ ಈರುಳ್ಳಿ ಹಾಳಾಗಿದೆ. ಬೇಡಿಕೆಯಷ್ಟು ಸರಬರಾಜು ಇಲ್ಲದ ಕಾರಣ, ಈರುಳ್ಳಿ ಗಗನಮುಖಿಯಾಗಿದೆ. ಈರುಳ್ಳಿ ರಫ್ತನ್ನು ನಿರ್ಬಂಧಿಸಿರುವ ಸರಕಾರವು, ಬೆಲೆ ಏರಿಕೆ ತಡೆಗೆ ಯತ್ನಿಸಿದೆ.

ಪಾತಾಳಕ್ಕೆ ಕುಸಿದ ಜಿಡಿಪಿ : ಜನಸಾಮಾನ್ಯನ ಮೇಲಾಗುವ ಪರಿಣಾಮಗಳೇನು?

ಚೀನಾಕ್ಕೆ ಮೊದಲ ಸ್ಥಾನ: ಈರುಳ್ಳಿ ಕೃಷಿಯಲ್ಲಿಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತವು ಎರಡನೇ ಸ್ಥಾನದಲ್ಲಿದೆ. ವಿಶ್ವದ ಒಟ್ಟು ಈರುಳ್ಳಿ ಉತ್ಪಾದನೆಯಲ್ಲಿಭಾರತದ ಪಾಲು ಶೇ.19.90ರಷ್ಟಿದೆ.

ಕಿಚನ್‌ನಲ್ಲಿಈರುಳ್ಳಿ ಬಳಕೆ ಇಳಿಕೆ: ''ನೂರು ರೂಪಾಯಿ ಕೊಟ್ಟು ಈರುಳ್ಳಿ ಕೊಳ್ಳುವುದು ನಿಜಕ್ಕೂ ಕಷ್ಟ. ಹೀಗಾಗಿಕ ಬಳಕೆಯನ್ನು ಕಡಿಮೆ ಮಾಡಿದ್ದೇವೆ,'' ಎಂದು ಅನೇಕ ಗೃಹಿಣಿಯರು ಹೇಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ