ಆ್ಯಪ್ನಗರ

ಕೊರೊನಾ ಕಾಟದ ನಡುವೆಯೂ ಆನ್‌ಲೈನ್‌ ವಹಿವಾಟು ಗಣನೀಯ ಹೆಚ್ಚಳ

ಕೋವಿಡ್‌ ಹಿನ್ನೆಲೆಯಲ್ಲಿ ಗ್ರಾಹಕರು ಆಫ್‌ಲೈನ್‌ಗಿಂತ ಆನ್‌ಲೈನ್‌ಗೆ ಆದ್ಯತೆ ನೀಡುತ್ತಿದ್ದಾರೆ. ಅಮೆಜಾನ್‌ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳ ಸಾಗಣೆ 120-140% ಏರಿಕೆಯಾಗಿದೆ. ಜನವರಿ-ಫೆಬ್ರವರಿ ಅವಧಿಯ ಮಟ್ಟವನ್ನು ಹಿಂದಿಕ್ಕಿದೆ.

Vijaya Karnataka Web 10 Jul 2020, 11:04 pm
ಬೆಂಗಳೂರು: ಇ-ಕಾಮರ್ಸ್‌ ಕಂಪನಿಗಳು ಚೇತರಿಸಿರುವುದು ಮಾತ್ರವಲ್ಲದೆ ಕೋವಿಡ್‌ ಪೂರ್ವ ಮಟ್ಟಕ್ಕಿಂತಲೂ ಹೆಚ್ಚಿನ ವಹಿವಾಟು ದಾಖಲಿಸಿವೆ. ಪ್ರತಿ ದಿನ 30 ಲಕ್ಷ ವಸ್ತುಗಳು ಭಾರತದಲ್ಲಿ ಮಾರಾಟವಾಗುತ್ತಿವೆ. ಮುಂದಿನ ಕೆಲ ತಿಂಗಳುಗಳ ಕಾಲ ಬೇಡಿಕೆ ಮತ್ತಷ್ಟು ಹೆಚ್ಚಲಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
Vijaya Karnataka Web ಆನ್‌ಲೈನ್‌ ಸೇಲ್ಸ್‌
ಆನ್‌ಲೈನ್‌ ಸೇಲ್ಸ್‌


ಕೋವಿಡ್‌ ಹಿನ್ನೆಲೆಯಲ್ಲಿ ಗ್ರಾಹಕರು ಆಫ್‌ಲೈನ್‌ಗಿಂತ ಆನ್‌ಲೈನ್‌ಗೆ ಆದ್ಯತೆ ನೀಡುತ್ತಿದ್ದಾರೆ. ಅಮೆಜಾನ್‌ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳ ಸಾಗಣೆ 120-140% ಏರಿಕೆಯಾಗಿದೆ. ಜನವರಿ-ಫೆಬ್ರವರಿ ಅವಧಿಯ ಮಟ್ಟವನ್ನು ಹಿಂದಿಕ್ಕಿದೆ. ಏಪ್ರಿಲ್‌ನ ಕೆಳಮಟ್ಟಕ್ಕಿಂತ ವೃದ್ಧಿಸಿದೆ. ಕೋವಿಡ್‌ ಪೂರ್ವ ಅವಧಿಗೆ ಹೋಲಿಸಿದರೆ ಅಮೆಜಾನ್‌ ಇಂಡಿಯಾದಲ್ಲಿ ಹೊಸ ಮಾರಾಟಗಾರರ ಸಂಖ್ಯೆ ಶೇ.50ರಷ್ಟು ಹೆಚ್ಚಳವಾಗಿದೆ.

ನೇಮಕಾತಿ ಹೆಚ್ಚಳ

ಅಮೆಜಾನ್‌ ತನ್ನ ಡೆಲಿವರಿ ನೆಟ್‌ವರ್ಕ್‌ನಲ್ಲಿ 50,000 ಹುದ್ದೆಗಳ ನೇಮಕಾತಿಯನ್ನು ಪ್ರಕಟಿಸಿದೆ. ಬಿಗ್‌ ಬಾಸ್ಕೆಟ್‌ ಈಗಾಗಲೇ 12,000 ಸಿಬ್ಬಂದಿಯನ್ನು ನೇಮಿಸಿದೆ. ಗ್ರೋಫರ್ಸ್ 2,500 ಸಿಬ್ಬಂದಿಯನ್ನು ನೇಮಕ ಮಾಡಿದೆ. ಇನ್ನೂ 5,000 ನೇಮಕಾತಿಗೆ ಮುಂದಾಗಿದೆ.

ಆನ್‌ಲೈನ್‌ ಶಾಪಿಂಗ್‌, ಹೋಮ್‌ ಡೆಲಿವರಿ ಹೆಚ್ಚಳ

ಬೆಂಗಳೂರು: ಕೋವಿಡ್‌ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದ್ದು, ಬಹತೇಕ ಗ್ರಾಹಕರು ತಮ್ಮ ಖರೀದಿ ಪದ್ಧತಿಯನ್ನು ಬದಲಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುತ್ತಿದ್ದಾರೆ. ಕೆಲವರು ಸ್ಥಳೀಯ ಸ್ಟೋರ್‌ಗಳಿಗೆ ತೆರಳದೇ ಫೋನ್‌ ಮೂಲಕ ಆರ್ಡರ್‌ ಮಾಡಿ ಮನೆಗೆ ತರಿಸಿಕೊಳ್ಳುತ್ತಿದ್ದಾರೆ.

ಲೋಕಲ್‌ ಸರ್ಕಲ್‌ ಎನ್ನುವ ಸಮುದಾಯ ವೇದಿಕೆಯ ಸಮೀಕ್ಷೆಯಲ್ಲಿ ಶೇ.21ರಷ್ಟು ಮಂದಿ ತಮಗೆ ಬೇಕಾದದ್ದನ್ನು ಇ-ಕಾಮರ್ಸ್‌ ಜಾಲತಾಣಗಳಿಂದ ತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇತರೆ ಶೇ.19 ರಷ್ಟು ಮಂದಿ ಸ್ಥಳೀಯ ವರ್ತಕರು ಇಲ್ಲವೇ, ದೊಡ್ಡ ರೀಟೇಲರ್‌ಗಳಿಂದ ನೇರ ಮನೆಗೆ ಸಾಮಾನುಗಳನ್ನು ತರಿಸಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ