ಆ್ಯಪ್ನಗರ

ದೇಶದಲ್ಲಿ ಶೇ.25ರಷ್ಟು ವಯಸ್ಕರಿಂದಷ್ಟೇ ನೆಟ್ ಬಳಕೆ

ಡಿಜಿಟಲ್‌ ಇಂಡಿಯಾದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದರೂ, ದೇಶದಲ್ಲಿ 2017ರಲ್ಲಿ ಶೇ.25ರಷ್ಟು ವಯಸ್ಕರು ಮಾತ್ರ ಇಂಟರ್‌ನೆಟ್‌ ಬಳಸಿದ್ದಾರೆ. ಇದು ಜಗತ್ತಿನಲ್ಲಿಯೇ ಕಡಿಮೆ ಮಟ್ಟಗಳಲ್ಲೊಂದು ಎಂದು ಪ್ಯೂ ರಿಸರ್ಚ್‌ ಸೆಂಟರ್‌ ತಿಳಿಸಿದೆ.

Vijaya Karnataka 22 Jun 2018, 10:48 am
ಹೊಸದಿಲ್ಲಿ: ಡಿಜಿಟಲ್‌ ಇಂಡಿಯಾದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದರೂ, ದೇಶದಲ್ಲಿ 2017ರಲ್ಲಿ ಶೇ.25ರಷ್ಟು ವಯಸ್ಕರು ಮಾತ್ರ ಇಂಟರ್‌ನೆಟ್‌ ಬಳಸಿದ್ದಾರೆ. ಇದು ಜಗತ್ತಿನಲ್ಲಿಯೇ ಕಡಿಮೆ ಮಟ್ಟಗಳಲ್ಲೊಂದು ಎಂದು ಪ್ಯೂ ರಿಸರ್ಚ್‌ ಸೆಂಟರ್‌ ತಿಳಿಸಿದೆ.
Vijaya Karnataka Web internet


ಅಭಿವೃದ್ಧಿ ಹೊಂದಿದ ಹಾಗೂ ಹೊಂದುತ್ತಿರುವ ದೇಶಗಳ ಮಧ್ಯೆ ಇಂಟರ್‌ನೆಟ್‌ ಬಳಕೆಗೆ ಸಂಬಂಧಿಸಿ ಅಂತರ ಕಡಿಮೆಯಾಗುತ್ತಾ ಬಂದಿದೆ. ಹೀಗಿದ್ದರೂ ಹಲವು ದೇಶಗಳಲ್ಲಿ ಈಗಲೂ ನೆಟ್‌ ಬಳಸದಿರುವ ಭಾರಿ ಸಂಖ್ಯೆಯ ನಾಗರಿಕರು ಇದ್ದಾರೆ. ಅಂಥ ದೇಶಗಳಲ್ಲಿ ಭಾರತ ಕೂಡ ಒಂದು ಎಂದು ಸಮೀಕ್ಷೆ ತಿಳಿಸಿದೆ.

ಭಾರತದಲ್ಲಿ 18-36 ವಯಸ್ಸಿನ ಶೇ.35 ಮಂದಿ ಮಾತ್ರ ಇಂಟರ್‌ನೆಟ್‌ ಬಳಸುತ್ತಿದ್ದಾರೆ. 37 ವರ್ಷ ದಾಟಿದ ವಯಸ್ಕರಲ್ಲಿ ಕೇವಲ 13 ಪರ್ಸೆಂಟ್‌ ಮಾತ್ರ ನೆಟ್‌ ಬಳಸುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ