ಆ್ಯಪ್ನಗರ

ಎಸ್‌ಬಿಐನಿಂದ ಕಾರ್ಡ್‌ ವಂಚನೆ ತಡೆಯಲು ಎಟಿಎಂ ವಿತ್‌ಡ್ರಾಗೆ ಒಟಿಪಿ ವ್ಯವಸ್ಥೆ

​​10,000 ರೂ. ಮತ್ತು ಅದಕ್ಕೂ ಅಧಿಕ ಮೊತ್ತವನ್ನು ಎಟಿಎಂನಲ್ಲಿ ಹಿಂಪಡೆಯುವಾಗ ಮಾತ್ರ, ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ಎಟಿಎಂನಲ್ಲಿ ನಮೂದಿಸಬೇಕಾಗುತ್ತದೆ. ಇದರಿಂದಾಗಿ, ಗ್ರಾಹಕರ ಕಾರ್ಡ್‌ ಅನ್ನು ಇನ್ನೊಬ್ಬರು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

Vijaya Karnataka 27 Dec 2019, 8:32 pm

ಹೊಸದಿಲ್ಲಿ: ಒಂದು ಸಲ ಬಳಸುವಂಥ ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ಆಧಾರಿತ ಎಟಿಎಂ ಕ್ಯಾಶ್‌ ವಿತ್‌ಡ್ರಾ ಸೇವೆಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಜನವರಿ 1ರಿಂದ ಆರಂಭಿಸಲಿದೆ. ದೇಶದ ಬೃಹತ್‌ ಬ್ಯಾಂಕ್‌ ಆದ ಎಸ್‌ಬಿಐ, ಎಟಿಎಂ ಕಾರ್ಡ್‌ ವಂಚನೆ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಜಾರಿಗೊಳಿಸುತ್ತಿದೆ.
Vijaya Karnataka Web SBI ATM


10,000 ರೂ. ಮತ್ತು ಅದಕ್ಕೂ ಅಧಿಕ ಮೊತ್ತವನ್ನು ಎಟಿಎಂನಲ್ಲಿ ಹಿಂಪಡೆಯುವಾಗ ಮಾತ್ರ, ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ಎಟಿಎಂನಲ್ಲಿ ನಮೂದಿಸಬೇಕಾಗುತ್ತದೆ. ಇದರಿಂದಾಗಿ, ಗ್ರಾಹಕರ ಕಾರ್ಡ್‌ ಅನ್ನು ಇನ್ನೊಬ್ಬರು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ರಾತ್ರಿ 8 ರಿಂದ ಬೆಳಗ್ಗೆ 8 ಗಂಟೆಯೊಳಗೆ ಎಟಿಎಂನಿಂದ ಹಣ ತೆಗೆಯುವಾಗ ಒಟಿಪಿ ನಮೂದಿಸಬೇಕಾಗುತ್ತದೆ. ಉಳಿದ ಅವಧಿಯಲ್ಲಿ ಇದು ಇರುವುದಿಲ್ಲ. ಎಸ್‌ಬಿಐನ ಎಲ್ಲಾ ಎಟಿಎಂಗಳಲ್ಲೂ ಜ. 1ರಿಂದ ಹೊಸ ಒಟಿಪಿ ಸೇವೆ ಜಾರಿಗೆ ಬರಲಿದೆ ಎಂದು ಬ್ಯಾಂಕ್‌ ಟ್ವೀಟ್‌ ಮಾಡಿದೆ.

ಬ್ಯಾಂಕ್‌ ಖಾತೆ ತೆರೆಯಲು ಧರ್ಮ ನಮೂದಿಸಬೇಕಾದ ಅಗತ್ಯವಿಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ

ಏನಿದು?

ಇದು ಮಾಮೂಲಿ ಎಟಿಎಂ ವ್ಯವಹಾರವೇ ಆಗಿದೆ. ಆದರೆ, ಒಟಿಪಿಯ ಹೆಚ್ಚುವರಿ ಭದ್ರತೆಯನ್ನು ಈಗ ಒದಗಿಸಲಾಗಿದೆ.

ಗ್ರಾಹಕರು 10,000ಕ್ಕೂ ಹೆಚ್ಚಿನ ಮೊತ್ತವನ್ನು ಕಾರ್ಡ್‌ ಮೂಲಕ ಎಟಿಎಂನಲ್ಲಿ ಪಡೆಯುವ ಸಂದರ್ಭದಲ್ಲಿ ಮಾಮೂಲಿನಂತೆಯೇ ಪಿನ್‌ ನಮೂದಿಸಿ ವಿವರಗಳನ್ನು ನೀಡಬೇಕು. ಆಗ ಒಟಿಪಿ ಸೃಷ್ಟಿಯಾಗಿ, ಅದು ಗ್ರಾಹಕರ ಮೊಬೈಲ್‌ಗೆ ಬರುತ್ತದೆ. ಅದನ್ನು ನಮೂದಿಸಿದರೆ ಮಾತ್ರ ಹಣ ಹೊರಬರುತ್ತದೆ. ಎಸ್‌ಬಿಐ ಎಟಿಎಂಗಳಲ್ಲಿ ಇತರೆ ಬ್ಯಾಂಕಿನ ಗ್ರಾಹಕರು ಹಣ ವಿತ್‌ಡ್ರಾ ಮಾಡಿಕೊಂಡಾಗ ಒಟಿಪಿ ಬರುವುದಿಲ್ಲ. ಎಸ್‌ಬಿಐ ಗ್ರಾಹಕರಿಗಷ್ಟೇ ಇದು ಅನ್ವಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ