ಆ್ಯಪ್ನಗರ

ಚುನಾವಣೆ ಮೇಲೆ ಬಾಹ್ಯಶಕ್ತಿಗಳ ಪ್ರಭಾವ ಬೀರದಂತೆ ನೋಡಿಕೊಳ್ಳಿ: ಟ್ವಿಟರ್‌, ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗೆ ಸೂಚನೆ

ಟ್ವಿಟರ್‌ನ ಸಾರ್ವಜನಿಕ ನೀತಿಯ ಜಾಗತಿಕ ಉಪಾಧ್ಯಕ್ಷ ಕೋಲಿನ್ ಕ್ರೋವೆಲ್ ಮತ್ತು ಇತರ ಅಧಿಕಾರಿಗಳ ಜತೆ ಮೂರೂವರೆ ಗಂಟೆಗಳ ಸುದೀರ್ಘ ಚರ್ಚೆ ನಡೆಸಿದ ಬಳಿಕ ಮಾಹಿತಿ ತಂತ್ರಜ್ಞಾನದ ಮೇಲಿನ ಸಂಸದೀಯ ಸ್ಥಾಯಿ ಸಮಿತಿ ಮುಖ್ಯಸ್ಥ ಅನುರಾಗ್ ಠಾಕೂರ್ ಈ ವಿಷಯ ತಿಳಿಸಿದರು.

Vijaya Karnataka Web 25 Feb 2019, 5:14 pm
ಹೊಸದಿಲ್ಲಿ: ಸಾರ್ವತ್ರಿಕ ಚುನಾವಣೆಗೆ ಮುನ್ನ ಭಾರತ ಚುನಾವಣಾ ಆಯೋಗದ ಜತೆ ಹೆಚ್ಚು ಹೆಚ್ಚು ಸಂಪರ್ಕದಲ್ಲಿದ್ದುಕೊಂಡು ತಕ್ಷಣದ ಸಮಸ್ಯೆಗಳ ಇತ್ಯರ್ಥಕ್ಕೆ ಗಮನ ಹರಿಸುವಂತೆ ಟ್ವಿಟರ್‌ಗೆ ಸಂಸದೀಯ ಸ್ಥಾಯಿ ಸಮಿತಿ ಸೂಚಿಸಿದೆ. ಅಲ್ಲದೆ ಇತರ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್‌ ಮತ್ತು ಇನ್‌ಸ್ಟಾಗ್ರಾಂನ ಹಿರಿಯ ಅಧಿಕಾರಿಗಳಿಗೆ ಮಾರ್ಚ್‌ 6ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
Vijaya Karnataka Web Twitter


ಮಾಹಿತಿ ತಂತ್ರಜ್ಞಾನದ ಮೇಲಿನ ಸಂಸದೀಯ ಸ್ಥಾಯಿ ಸಮಿತಿ ಮುಖ್ಯಸ್ಥ ಅನುರಾಗ್ ಠಾಕೂರ್ ಈ ವಿಷಯ ತಿಳಿಸಿದರು.

ಟ್ವಿಟರ್‌ನ ಸಾರ್ವಜನಿಕ ನೀತಿಯ ಜಾಗತಿಕ ಉಪಾಧ್ಯಕ್ಷ ಕೋಲಿನ್ ಕ್ರೋವೆಲ್ ಮತ್ತು ಇತರ ಅಧಿಕಾರಿಗಳ ಜತೆ ಮೂರೂವರೆ ಗಂಟೆಗಳ ಸುದೀರ್ಘ ಚರ್ಚೆ ನಡೆಸಿದ ಬಳಿಕ ಠಾಕೂರ್ ಈ ವಿಷಯ ತಿಳಿಸಿದರು.

ತಕ್ಷಣದ ನೆಲೆಯಲ್ಲಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಚುನಾವಣೆ ಆಯೋಗದ ಜತೆ ಹೆಚ್ಚು ಹೆಚ್ಚು ನಿಕಟವಾಗಿ ಕೆಲಸ ಮಾಡುವಂತೆ ಟ್ವಿಟರ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ನುಡಿದರು.

ಲೋಕಸಭಾ ಚುನಾವಣೆಗಳ ಮೇಲೆ ಯಾವುದೇ ಅಂತಾರಾಷ್ಟ್ರೀಯ ಪ್ರಭಾವ ಇರಕೂಡದು ಎಂದು ಟ್ವಿಟರ್‌ ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಲಾಗಿದೆ.

ಯಾವುದೇ ವಿದೇಶಿ ಶಕ್ತಿಗಳಿಂದ ಮುಂಬರುವ ಚುನಾವಣೆಗಳ ಮೇಲೆ ಪ್ರಭಾವ ಬೀರದಂತೆ ಹಾಗೂ ಕಡೆಗಣಿಸದಂತೆ ಖಾತ್ರಿಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳು ಭಾರೀ ಪ್ರಭಾವ ಬೀರಿವೆ ಎಂದು ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಮೈಕ್ರೋ ಬ್ಲಾಗಿಂಗ್ ತಾಣವಾದ ಟ್ವಿಟರ್‌ಗೆ ವಿಶೇಷ ಎಚ್ಚರಿಕೆ ನೀಡಲಾಗಿದೆ.

ಬಹುತೇಕ ಎಲ್ಲ ಪ್ರಶ್ನೆಗಳಿಗೆ ಟ್ವಿಟರ್ ಅಧಿಕಾರಿಗಳು ಉತ್ತರಿಸಿದ್ದಾರೆ. ಉಳಿದ ಪ್ರಶ್ನೆಗಳಿಗೆ 10 ದಿನಗಳಲ್ಲಿ ಲಿಖಿತ ಉತ್ತರ ಸಲ್ಲಿಸಲಿದ್ದಾರೆ ಎಂದು ಠಾಕೂರ್ ವಿವರಿಸಿದರು.

ಟ್ವಿಟರ್‌ ಸಿಇಓ ಜಾಕ್ ಡೋರ್ಸಿ ತಮಗೆ ಬರೆದ ಪತ್ರವನ್ನು ಸಭೆಯ ವೇಳೆ ಠಾಕೂರ್‌ ಓದಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ