ಆ್ಯಪ್ನಗರ

20,000 ಕೋಟಿ ರೂ. ವಹಿವಾಟು ಗುರಿ: ಪತಂಜಲಿ ದಾಪುಗಾಲು

ಪತಂಜಲಿ ಆಯುರ್ವೇದ ಸಮೂಹವು ಮಹತ್ತ್ವಾಕಾಂಕ್ಷೆಯ 20,000 ಕೋಟಿ ರೂ. ವಹಿವಾಟು ಗುರಿ ಸಾಧಿಸಲು ಶತ ಪ್ರಯತ್ನ ಮಾಡುತ್ತಿದೆ ಎಂದು ಯೋಗ ಗುರು ಬಾಬಾ ರಾಮ್‌ದೇವ್‌ ಹೇಳಿದ್ದಾರೆ.

Vijaya Karnataka 20 May 2018, 9:51 am
ಹೊಸದಿಲ್ಲಿ: ಪತಂಜಲಿ ಆಯುರ್ವೇದ ಸಮೂಹವು ಮಹತ್ತ್ವಾಕಾಂಕ್ಷೆಯ 20,000 ಕೋಟಿ ರೂ. ವಹಿವಾಟು ಗುರಿ ಸಾಧಿಸಲು ಶತ ಪ್ರಯತ್ನ ಮಾಡುತ್ತಿದೆ ಎಂದು ಯೋಗ ಗುರು ಬಾಬಾ ರಾಮ್‌ದೇವ್‌ ಹೇಳಿದ್ದಾರೆ.
Vijaya Karnataka Web Ramdev Baba


ಪತಂಜಲಿ ಈಗಾಗಲೇ ವಾರ್ಷಿಕ 10,000 ಕೋಟಿ ರೂ. ವಹಿವಾಟಿನ ಗುರಿ ಮೀರಿ ಮುನ್ನಡೆಯುತ್ತಿದೆ. ಕೇವಲ 6 ವರ್ಷಗಳ ಹಿಂದೆ ಕಂಪನಿ ವಾರ್ಷಿಕ 500 ಕೋಟಿ ರೂ. ವಹಿವಾಟು ನಡೆಸುತ್ತಿತ್ತು. ಮುಂದಿನ ಹಂತದಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲಿದೆ ಎಂದು ಬಾಬಾ ರಾಮ್‌ದೇವ್‌ ತಿಳಿಸಿದ್ದಾರೆ.

ಮುಂದಿನ 3-5 ವರ್ಷಗಳಲ್ಲಿ ಪತಂಜಲಿ ಸಮೂಹ ಭಾರತೀಯ ಗ್ರಾಹಕ (ಎಫ್‌ಎಂಸಿಜಿ) ಮಾರುಕಟ್ಟೆಯಲ್ಲಿ ಶೇ.25-50 ಪಾಲನ್ನು ತನ್ನದಾಗಿಸಲಿದೆ. ವಾರ್ಷಿಕ 20ರಿಂದ 25 ಸಾವಿರ ಕೋಟಿ ವಹಿವಾಟು ದಾಖಲಿಸಲಿದೆ ಎಂದು ರಾಮ್‌ದೇವ್‌ ಹೇಳಿದ್ದಾರೆ. ಪತಂಜಲಿ 2016-17ರಲ್ಲಿ 10,000 ಕೋಟಿ ರೂ. ವಹಿವಾಟು ನಡೆಸಿತ್ತು. 2017-18ರಲ್ಲಿ ಕೂಡ ಅಷ್ಟೇ ವಹಿವಾಟು ನಡೆಸಿದೆ. ದಶಕದ ಹಿಂದೆ ಸಣ್ಣ ಫಾರ್ಮಸಿಯಾಗಿದ್ದ ಪತಂಜಲಿ ಈಗ ಎಫ್‌ಎಂಸಿಜಿ ವಲಯದ ದಿಗ್ಗಜ ಕಂಪನಿಗಳಲ್ಲೊಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ