ಆ್ಯಪ್ನಗರ

ಪೆಟ್ರೋಲ್‌ ಬಂಕ್‌ಗಳು ಭಾನುವಾರ ರಜೆ?

ಕಮಿಷನ್‌ ಹೆಚ್ಚಳ ಬೇಡಿಕೆಯನ್ನು ಈಡೇರಿಸದಿದ್ದರೆ ಮೇ 10ರಿಂದ ದೇಶಾದ್ಯಂತ ಪ್ರತಿ ಭಾನುವಾರಗಳಂದು ಪೆಟ್ರೋಲ್‌ ಬಂಕ್‌ಗಳನ್ನು ಮುಚ್ಚುವುದಾಗಿ ಡೀಲರ್‌ಗಳು ಸರಕಾರಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 11 Apr 2017, 10:10 pm
ಹೊಸದಿಲ್ಲಿ: ಕಮಿಷನ್‌ ಹೆಚ್ಚಳ ಬೇಡಿಕೆಯನ್ನು ಈಡೇರಿಸದಿದ್ದರೆ ಮೇ 10ರಿಂದ ದೇಶಾದ್ಯಂತ ಪ್ರತಿ ಭಾನುವಾರಗಳಂದು ಪೆಟ್ರೋಲ್‌ ಬಂಕ್‌ಗಳನ್ನು ಮುಚ್ಚುವುದಾಗಿ ಡೀಲರ್‌ಗಳು ಸರಕಾರಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web petrol pumps may remain shut on sundays
ಪೆಟ್ರೋಲ್‌ ಬಂಕ್‌ಗಳು ಭಾನುವಾರ ರಜೆ?


ಮೇ 10ರಂದು ‘ನೋ ಪರ್ಚೇಸ್‌ ಡೇ’ ಆಚರಿಸುವ ಮೂಲಕ ತೈಲ ಕಂಪನಿಗಳಿಂದ ಪೆಟ್ರೋಲ್‌ ಖರೀದಿಸದಿರಲು ನಿರ್ಧರಿಸಿದ್ದಾರೆ. ಅಲ್ಲದೆ, ಮೇ 10ರ ಬಳಿಕ ಕೇವಲ 8 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸುವುದಾಗಿ ಡೀಲರ್‌ಗಳು ಎಚ್ಚರಿಸಿದ್ದಾರೆ. ‘‘ಕಳೆದ ಜನವರಿಯಲ್ಲಿ ಡೀಲರ್‌ ಕಮಿಷನ್‌ ಹೆಚ್ಚಳ ಭರವಸೆ ನೀಡಿದ ಬಳಿಕ ಮುಷ್ಕರ ವಾಪಸ್‌ ಪಡೆದಿದ್ದೆವು. ಆದರೆ ನಾಲ್ಕು ತಿಂಗಳು ಕಳೆದರೂ ತೈಲ ಕಂಪನಿಗಳು ಈ ಕುರಿತು ಕ್ರಮ ಕೈಗೊಳ್ಳದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ,’’ ಎಂದು ಪೆಟ್ರೋಲ್‌ ಡೀಲರುಗಳ ಸಂಘ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ