ಆ್ಯಪ್ನಗರ

ಪಿಎಂಸಿ ಬ್ಯಾಂಕ್‌ ವಿಥ್‌ ಡ್ರಾ ಮಿತಿ 10 ಸಾವಿರ ರೂ.ಗೆ ಏರಿಕೆ ಮಾಡಿದ ಆರ್‌ಬಿಐ

ಇದರಿಂದಾಗಿ ಬ್ಯಾಂಕ್‌ನಲ್ಲಿನ ಶೇ.60ರಷ್ಟು ಗ್ರಾಹಕರಿಗೆ ತಮ್ಮ ಅಕೌಂಟ್‌ನಲ್ಲಿರುವ ಎಲ್ಲಹಣವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಆರ್‌ಬಿಐ ತಿಳಿಸಿದೆ.

Vijaya Karnataka Web 26 Sep 2019, 7:35 pm
ಮುಂಬಯಿ: ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ಲಿ. (ಪಿಎಂಸಿ) ಮೇಲೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆದಿದೆ.
Vijaya Karnataka Web ಆರ್‌ಬಿಐ
ಆರ್‌ಬಿಐ


ಪಿಎಂಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರು 1 ಸಾವಿರ ರೂ.ಗಿಂತ ಹೆಚ್ಚು ಮೊತ್ತ ತೆಗೆಯುವಂತಿಲ್ಲ ಎಂದು ಎರಡು ದಿನಗಳ ಹಿಂದಷ್ಟೇ ಆರ್‌ಬಿಐ ನಿರ್ಬಂಧ ವಿಧಿಸಿತ್ತು. ಈಗ ನಿರ್ಬಂಧ ಹಿಂಪಡೆದು ಈ ಮಿತಿಯನ್ನು 10 ಸಾವಿರ ರೂ.ವರೆಗೆ ಹೆಚ್ಚಿಸಿದೆ.

ಅಂದರೆ ಗ್ರಾಹಕರು ತಮ್ಮ ಖಾತೆಯಿಂದ 10 ಸಾವಿರ ರೂ.ವರೆಗೂ ವಿಥ್ ಡ್ರಾ ಮಾಡಬಹುದು.

ಆದರೆ ಇದಕ್ಕೆ ಗ್ರಾಹಕರಿಗೆ ತೀವ್ರ ಆಕ್ರೋಶವಾಯಿತು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಚರ್ಚೆ ನಡೆಯಿತು. ಆರ್‌ಬಿಐ ಹಾಗೂ ಕೇಂದ್ರ ಸರಕಾರದ ವಿರುದ್ಧ ಸಾರ್ವಜನಿಕರು ತೀವ್ರ ಕಿಡಿಕಾರಿದ್ದರು.

ಪಂಜಾಬ್ ಹಾಗೂ ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ಕಡಿವಾಣ ಹಾಕಿದೆ. ಮುಂದಿನ 6 ತಿಂಗಳ ಕಾಲ ಯಾವುದೇ ದೊಡ್ಡ ಮೊತ್ತದ ಹಣಕಾಸು ವಹಿವಾಟು ನಡೆಸದಂತೆ ನಿರ್ಬಂಧ ಹೇರಿತ್ತು.

35 ವರ್ಷ ಹಳೆಯ ಬ್ಯಾಂಕ್‌ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ್‌, ಆಂಧ್ರಪ್ರದೇಶ, ಮಧ್ಯಪ್ರದೇಶದಲ್ಲಿ 137 ಶಾಖೆಗಳನ್ನು ಹೊಂದಿದೆ. ದೇಶದ ಟಾಪ್‌ 10 ಸಹಕಾರ ಬ್ಯಾಂಕ್‌ಗಳಲ್ಲಿಇದೂ ಒಂದು.

ಆರ್‌ಬಿಐ ಕ್ರಮ ಜರುಗಿಸಿರುವ ಬೆನ್ನಲ್ಲೇ ಸೆ.28ರಂದು ಮುಂಬಯಿನಲ್ಲಿನಡೆಯಬೇಕಿದ್ದ ಬ್ಯಾಂಕ್‌ ನ ವಾರ್ಷಿಕ ಸಭೆಯನ್ನು ರದ್ದುಪಡಿಸಲಾಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಜಾಯ್‌ ಥಾಮಸ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ