ಆ್ಯಪ್ನಗರ

ಹುಬ್ಬಳ್ಳಿಗೆ ಬಂತು ಪಾಲಿಫೈಬರ್‌ ಸಿಲಿಂಡರ್‌

ಪ್ಲಾಸ್ಟಿಕ್‌ ಪಾಲಿಮರ್‌ನಿಂದ ತಯಾರಾದ ಈ ನೂತನ ಸಿಲಿಂಡರ್‌ ತೂಕದಲ್ಲಿ ಅತ್ಯಂತ ಹಗುರವಾಗಿದೆ. ಗ್ರಾಹಕರಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಣೆ ಮಾಡಲು ಸರಳವಾಗಿದೆ. ಅವಘಡ ಸಂಭವಿಸಿದರೂ ಸಿಲಿಂಡರ್‌ ಸ್ಫೋಟಗೊಳ್ಳದ ಕಾರಣ ಪ್ರಾಣ ಹಾನಿ ಹಾಗೂ ಆಸ್ತಿ ಪಾಸ್ತಿ ನಷ್ಟ ತಡೆಯಬಹುದಾಗಿದೆ.

Vijaya Karnataka 26 Oct 2018, 8:07 am
ವಿಜಯಕುಮಾರ ಪೂಜಾರಿ
Vijaya Karnataka Web poly fiber cylinders


ಹುಬ್ಬಳ್ಳಿ: ಅನೇಕ ಬಾರಿ ಮನೆಯ ಅಡುಗೆ ಸಿಲಿಂಡರ್‌ ಸ್ಫೋಟಗೊಂಡು ಪ್ರಾಣ ಹಾಗೂ ಆಸ್ತಿಪಾಸ್ತಿ ಹಾನಿಯಾದ ಘಟನೆ ಮತ್ತು ವರದಿಗಳನ್ನು ನಾವು ನೀವೆಲ್ಲ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇನ್ನು ಮುಂದೆ ಅಂಥ ಅನಾಹುತಕ್ಕೆ ಬ್ರೇಕ್‌ ಬೀಳಲಿದೆ. ಅಡುಗೆ ಸಿಲಿಂಡರ್‌ ಸ್ಫೋಟದಂತಹ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ 'ಸ್ಮಾರ್ಟ್‌ ಆ್ಯಂಡ್‌ ಸೇಫ್‌' ಎಂಬ ಹೆಸರಿನ ಎಲ್‌ಪಿಜಿ ಪಾಲಿಫೈಬರ್‌ ಸಿಲಿಂಡರ್‌ ಹುಬ್ಬಳ್ಳಿಯ ಮಾರುಕಟ್ಟೆಗೆ ಬಂದಿದೆ.

ಅನಿಲ ಸೋರಿಕೆ ಹಾಗೂ ಬೆಂಕಿ ಅವಘಡದಂತಹ ದುರ್ಘಟನೆ ಸಂಭವಿಸಿದರೂ ಈ ಸಿಲಿಂಡರ್‌ ಸ್ಫೋಟಗೊಳ್ಳುವುದಿಲ್ಲ. ಬೆಂಕಿ ಹೊತ್ತಿದರೆ ಸಿಲಿಂಡರ್‌ ಉರಿದುಹೋಗಿ ಸಂಭವನೀಯ ಭಾರಿ ಅನಾಹುತ ತಪ್ಪಿಸುವುದು ಇದರ ವೈಶಿಷ್ಟ್ಯವಾಗಿದೆ. ಅಡುಗೆ ತಯಾರಿಸಲು ಹಾಗೂ ವಾಹನಕ್ಕೆ ಇಂಧನದಂತೆ ಬಳಸಲು ಸೇರಿದಂತೆ ವಿವಿಧ ನಮೂನೆಯಲ್ಲಿ ಈ ಪಾಲಿಫೈಬರ್‌ ಸಿಲಿಂಡರ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ವಿಶೇಷತೆಗಳು ಏನು?

ಪ್ಲಾಸ್ಟಿಕ್‌ ಪಾಲಿಮರ್‌ನಿಂದ ತಯಾರಾದ ಈ ನೂತನ ಸಿಲಿಂಡರ್‌ ತೂಕದಲ್ಲಿ ಅತ್ಯಂತ ಹಗುರವಾಗಿದೆ. ಗ್ರಾಹಕರಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಣೆ ಮಾಡಲು ಸರಳವಾಗಿದೆ. ಅವಘಡ ಸಂಭವಿಸಿದರೂ ಸಿಲಿಂಡರ್‌ ಸ್ಫೋಟಗೊಳ್ಳದ ಕಾರಣ ಪ್ರಾಣ ಹಾನಿ ಹಾಗೂ ಆಸ್ತಿ ಪಾಸ್ತಿ ನಷ್ಟ ತಡೆಯಬಹುದಾಗಿದೆ.
ಪಾಲಿಫೈಬರ್‌ ಸಿಲಿಂಡರ್‌ ಖಾಸಗಿಯಾಗಿ ಬಳಕೆ ಆಗುತ್ತಿರುವ ಬಗ್ಗೆ ಮಾಹಿತಿ ಇದೆ. ಅದು ಇನ್ನೂ ಸಾರ್ವಜನಿಕ ವಲಯಕ್ಕೆ ಪರಿಚಯವಾಗಿಲ್ಲ. ಸದ್ಯದ ಮಾಹಿತಿ ಪ್ರಕಾರ ಫೈಬರ್‌ ಸಿಲಿಂಡರ್‌ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
-ಬಿಪಿನ್‌, ಸಹಾಯಕ ಮಾರಾಟ ಅಧಿಕಾರಿ, ಭಾರತ್‌ ಪೆಟ್ರೋಲಿಯಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ