ಆ್ಯಪ್ನಗರ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 4,532 ಕೋಟಿ ರೂ. ನಷ್ಟ

ಈ ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಆದಾಯವು 14,035 ಕೋಟಿ ರೂ.ಗೆ ಇಳಿದಿದೆ. ವರ್ಷದ ಹಿಂದೇ ಇದೇ ಅವಧಿಯಲ್ಲಿ ಆದಾಯ 14,205 ಕೋಟಿ ರೂ. ಇತ್ತು. ಬಿಎಸ್‌ಇ ಫೈಲಿಂಗ್‌ನಲ್ಲಿ ಈ ಅಂಶ ಸ್ಪಷ್ಟವಾಗಿದೆ.

Vijaya Karnataka 3 Nov 2018, 7:24 am
ಹೊಸದಿಲ್ಲಿ: ನೀರವ್‌ ಮೋದಿ ಮತ್ತಿತರರ ವಂಚನೆ ಹಗರಣದಿಂದ ತತ್ತರಿಸಿದ್ದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್‌ಬಿ), ಸೆಪ್ಟೆಂಬರ್‌ಗೆ ಅಂತ್ಯವಾದ ಎರಡನೇ ತ್ರೈಮಾಸಿಕದಲ್ಲಿ 4,532 ಕೋಟಿ ರೂ. ನಷ್ಟ ಅನುಭವಿಸಿದೆ. ವಸೂಲಾಗದ ಸಾಲಗಳ(ಎನ್‌ಪಿಎ) ಏರಿಕೆಯಿಂದಾಗಿ ಹೆಚ್ಚಿನ ನಷ್ಟ ದಾಖಲಾಗಿದೆ.
Vijaya Karnataka Web PNB


ಕಳೆದ 2016-17ರ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಸರಕಾರಿ ಸ್ವಾಮ್ಯದ ಈ ಬ್ಯಾಂಕ್‌, 561 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ಆದರೆ, ಈಗ ನಷ್ಟದಲ್ಲಿ ವಹಿವಾಟು ಮುಂದುವರೆಸಿದೆ. ಈ ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಆದಾಯವು 14,035 ಕೋಟಿ ರೂ.ಗೆ ಇಳಿದಿದೆ. ವರ್ಷದ ಹಿಂದೇ ಇದೇ ಅವಧಿಯಲ್ಲಿ ಆದಾಯ 14,205 ಕೋಟಿ ರೂ. ಇತ್ತು. ಬಿಎಸ್‌ಇ ಫೈಲಿಂಗ್‌ನಲ್ಲಿ ಈ ಅಂಶ ಸ್ಪಷ್ಟವಾಗಿದೆ.

ಬ್ಯಾಂಕ್‌ನ ಎನ್‌ಪಿಎ ಶೇ.17.16ರಷ್ಟು ಏರಿಕೆಯಾಗಿದ್ದು 81,250 ಕೋಟಿ ರೂ. ಮುಟ್ಟಿದೆ. ವರ್ಷದ ಹಿಂದೆ 57,630 ಕೋಟಿ ರೂ. ಇತ್ತು. ಈ ಪರಿಣಾಮ ಎನ್‌ಪಿಎ ನಿಭಾಯಿಸಲು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 7,733 ಕೋಟಿ ರೂ. ತೆಗೆದಿಡಲಾಗಿದೆ. ಕಳೆದ ತ್ರೈಮಾಸಿಕದಲ್ಲಿ 2,693 ಕೋಟಿ ರೂ. ತೆಗೆದಿಡಲಾಗಿತ್ತು. ಎನ್‌ಪಿಎ ನಿಭಾಯಿಸಲು ತೆಗೆದಿಡಲಾಗುತ್ತಿರುವ ಮೊತ್ತ ಹೆಚ್ಚುತ್ತಿರುವುದರಿಂದ ಬ್ಯಾಂಕ್‌ನ ಲಾಭಕ್ಕೆ ಹೊಡೆತ ಬಿದ್ದಿದೆ.

ಪಿಎನ್‌ಬಿ ನಷ್ಟದ ವರದಿ ಪ್ರಕಟವಾದ ಬಳಿಕ ಬ್ಯಾಂಕ್‌ನ ಷೇರುಗಳು ಶೇ.1.01ರಷ್ಟು ಕುಸಿದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ