ಆ್ಯಪ್ನಗರ

ರಾಜೀನಾಮೆ ನೀಡಿದ ಅಥವಾ ವಜಾಗೊಳಿಸಿದ ಉದ್ಯೋಗಿಗಳ ಪಿಎಫ್ ಬಡ್ಡಿಗೆ ಕಟ್ಟಬೇಕು ತೆರಿಗೆ!

ಉದ್ಯೋಗ ತೊರೆದರೆ ಅಥವಾ ನಿವೃತ್ತಿಯಾದ ಬಳಿಕ ಭವಿಷ್ಯ ನಿಧಿಗೆ ಬಡ್ಡಿ ಸೇರಲಿದ್ದು, ಈ ಮೊತ್ತಕ್ಕೆ ನೀವು ತೆರಿಗೆ ಕಟ್ಟಬೇಕೆಂಬುವುದು ಗೊತ್ತಾ?

Vijaya Karnataka Web 16 Nov 2017, 1:22 pm
ಮುಂಬಯಿ: ಭವಿಷ್ಯ ನಿಧಿ ಖಾತೆಯಲ್ಲಿ ಹಣವಿಟ್ಟುಕೊಂಡು, ಬರುವ ತುಸು ಬಡ್ಡಿ ತೆಗೆದುಕೊಳ್ಳುವುದಲ್ಲದೇ, ತೆರಿಗೆಯಿಂದ ವಿನಾಯಿತಿ ಪಡೆಯಬಹುದು ಎಂಬುವುದು ಸಾಮಾನ್ಯರ ನಂಬಿಕೆ. ಆದರೆ, ಈ ನಿಯಮ ಎಲ್ಲ ಕಡೆಯೂ ಅನ್ವಯವಾಗುವುದಿಲ್ಲ. ಬದಲಾಗಿ, ಬಡ್ಡಿ ದರಕ್ಕೆ ತೆರಿಗೆ ಕಟ್ಟಬೇಕು ಎಂಬುವುದು ಗೊತ್ತಾ?
Vijaya Karnataka Web quit or axed as employee pay tax on epf interest
ರಾಜೀನಾಮೆ ನೀಡಿದ ಅಥವಾ ವಜಾಗೊಳಿಸಿದ ಉದ್ಯೋಗಿಗಳ ಪಿಎಫ್ ಬಡ್ಡಿಗೆ ಕಟ್ಟಬೇಕು ತೆರಿಗೆ!


ಉದ್ಯೋಗ ತೊರೆದರೆ ಅಥವಾ ನಿವೃತ್ತಿಯಾದ ಬಳಿಕ ಭವಿಷ್ಯ ನಿಧಿಗೆ ಬಡ್ಡಿ ಸೇರಲಿದ್ದು, ಈ ಮೊತ್ತಕ್ಕೆ ಕಾನೂನಿನ ಪ್ರಕಾರ ತೆರಿಗೆ ಕಟ್ಟಬೇಕು.

ತೆರಿಗೆ ಕಾನೂನಿನಲ್ಲಿ ಈ ನೀತಿ ಇದ್ದು, ಇದನ್ನೇ ಇತ್ತೀಚೆಗೆ ನಿವೃತ್ತ ಉದ್ಯೋಗಿಯೊಬ್ಬರ ಅರ್ಜಿಯ ವಿಚಾರಣೆ ವೇಳೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ (ITAT)ದ ಬೆಂಗಳೂರು ಪೀಠವೂ ಎತ್ತಿ ಹಿಡಿದಿದೆ.

'ಉದ್ಯೋಗಿಗಳು ತಾವು ತೆಗೆದುಕೊಳ್ಳುವ ಭವಿಷ್ಯ ನಿಧಿಗೆ ತೆರಿಗೆ ಕಟ್ಟಬೇಕಾಗಿಲ್ಲ. ಆದರೆ, ಕೆಲಸದಿಂದ ವಜಾಗೊಂಡ, ರಾಜೀನಾಮೆ ಅಥವಾ ನಿವೃತ್ತಿಗೊಂಡ ಉದ್ಯೋಗಿಗಳು ತಮ್ಮ ಇಪಿಎಫ್ ಖಾತೆಯನ್ನು ಮುಂದುವರಿಸಿ, ಬಡ್ಡಿ ಪಡೆಯುತ್ತಾರೆ. ಆದರೆ, ಖಾತೆಯಲ್ಲಿರುವ ಮೊತ್ತಕ್ಕೆ ಸೇರಿಕೊಳ್ಳುವ ಬಡ್ಡಿಗೆ ತೆರಿಗೆ ಕಟ್ಟಬೇಕೆಂಬುವುದು ಮಾತ್ರ ಯಾರಿಗೂ ಗೊತ್ತಿರುವುದಿಲ್ಲ,' ಎನ್ನುತ್ತಾರೆ ಹೂಡಿಕೆ ಕನ್ಸಲ್ಟೆಂಟ್ ಅಮರ್ಪಾಲ್ ಚಡ್ಡಾ.

ನಿವೃತ್ತರಿಗೆ ನಿಯಮ ಬೇರೆ:

ನಿವೃತ್ತರಾದ ಮೂರು ವರ್ಷಗಳ ನಂತರ ಉದ್ಯೋಗಿಗಳು, ತಮ್ಮ ಪಿಎಫ್ ಹಣವನ್ನು ಹಿಂಪಡೆಯಲು ಅಥವಾ ವರ್ಗಾಯಿಸಲು ಅರ್ಜಿ ಸಲ್ಲಿಸದೇ ಹೋದಲ್ಲಿ, ಆ ಖಾತೆಯನ್ನು ನಿಷ್ಕ್ರಿಯವೆಂದು ಪರಿಗಣಿಸಲಾಗುವುದು. ಈ ಮೊತ್ತಕ್ಕೆ ಯಾವುದೇ ಬಡ್ಡಿ ಸೇರುವುದಿಲ್ಲ. ಜತೆಗೆ ತೆರಿಗೆ ಕಟ್ಟುವ ಅಗತ್ಯವೂ ಇರಲ್ಲ.

ಈ ನಿಯಮ ಕೇವಲ ಕೆಲಸಕ್ಕೆ ರಾಜೀನಾಮೆ ನೀಡಿದ ಅಥವಾ ವಜಾಗೊಂಡ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗುತ್ತದೆ.

ಉದ್ಯೋಗಿಯೊಬ್ಬನನ್ನು ಕೆಲಸದಿಂದ ವಜಾಗೊಳಿಸಿದರೆ ಅಥವಾ ಕೆಲಸಕ್ಕೆ ರಾಜೀನಾಮೆ ನೀಡಿದರೆ, ಆತನ ಫಿಎಫ್ ಹಣ ತೆಗೆದುಕೊಳ್ಳಲು ಅರ್ಜಿ ಸಲ್ಲಿಸುವವರೆಗೂ ಅಥವಾ ಮತ್ತೊಂದು ಕಂಪನಿಗೆ ಈ ಮೊತ್ತವನ್ನು ವರ್ಗಾಯಿಸಿಕೊಳ್ಳುವವರೆಗೂ, ಖಾತೆ ಸಕ್ರಿಯವಾಗಿದ್ದು, ಅದಕ್ಕೆ ಬಡ್ಡಿ ಸೇರಿಕೊಳ್ಳುತ್ತದೆ. ಆದರೆ, ಆ ಬಡ್ಡಿಗೆ ತೆರಿಗೆ ಕಟ್ಟಬೇಕು.

ಭವಿಷ್ಯ ನಿಧಿ ಹಣಕ್ಕೆ ನೀಡುವ ಬಡ್ಡಿ ದರವನ್ನು ಪ್ರತೀ ವರ್ಷವೂ ಪರಿಶೀಲಿಸಲಿದ್ದು, ಕಳೆದ ವಿತ್ತೀಯ ವರ್ಷದಲ್ಲಿ ಪಿಎಫ್‌ಗೆ ಶೇ.8.56ರಷ್ಟು ಬಡ್ಡಿಯನ್ನು ಘೋಷಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ