ಆ್ಯಪ್ನಗರ

Railways Recruitment 2019: ರೈಲ್ವೆ ಮೆಗಾ ಆಫರ್‌, 2.3 ಲಕ್ಷ ಹೊಸ ಉದ್ಯೋಗ ಸೃಷ್ಟಿ!

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಿಹಿ ಸುದ್ದಿ! ಈ ನೇಮಕಾತಿಯಿಂದ ರೈಲ್ವೆಯ ದಕ್ಷತೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಭಾರತೀಯ ರೈಲ್ವೆ ವಿಸ್ತರಣೆಯಾಗುವುದರ ಜತೆಗೆ ದೇಶದ ಯುವಜನತೆಗೆ ಉದ್ಯೋಗಗಳನ್ನೂ ಕೊಡಲಿದೆ. ಆರ್ಥಿಕ ಬೆಳವಣಿಗೆಗೆ ಇದು ಪುಷ್ಟಿ ನೀಡಲಿದೆ.

Vijaya Karnataka Web 25 Jan 2019, 11:52 am
ಹೊಸದಿಲ್ಲಿ : ರೈಲ್ವೆ ಇಲಾಖೆಯು ಮುಂದಿನ 2 ವರ್ಷಗಳಲ್ಲಿ ಬರೋಬ್ಬರಿ 2.3 ಲಕ್ಷ ಹೊಸ ಹುದ್ದೆಗಳಿಗೆ ಉದ್ಯೋಗಿಗಳನ್ನು ನೇಮಿಸಲಿದೆ. ಇದರಲ್ಲಿ ಶೇ.10ರಷ್ಟು ಹುದ್ದೆಗಳು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯುಎಸ್‌) ಮೀಸಲಾಗಿದೆ ಎಂದು ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ತಿಳಿಸಿದ್ದಾರೆ.
Vijaya Karnataka Web railway track


ರೈಲ್ವೆಯಲ್ಲಿ 1.5 ಲಕ್ಷ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಮಾರ್ಚ್‌-ಏಪ್ರಿಲ್‌ ವೇಳೆಗೆ ಮುಕ್ತಾಯವಾಗಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ ಯಾದವ್‌ ತಿಳಿಸಿದ್ದಾರೆ.

ಇದರೊಂದಿಗೆ ಒಟ್ಟು 4 ಲಕ್ಷ ಉದ್ಯೋಗಿಗಳು ರೈಲ್ವೆಯಲ್ಲಿ ಮುಂದಿನ 2 ವರ್ಷಗಳಲ್ಲಿ ಸೃಷ್ಟಿಯಾಗಲಿದೆ ಎಂದು ಗೋಯಲ್‌ ತಿಳಿಸಿದ್ದಾರೆ.

'ರೈಲ್ವೆ ಇಲಾಖೆಯು ಸುಮಾರು 12 ಲಕ್ಷ ಉದ್ಯೋಗಿಗಳನ್ನು ಒಳಗೊಂಡಿದೆ. ವರ್ಷಕ್ಕೆ ಸರಾಸರಿ 40,000-50,000 ಉದ್ಯೋಗಿಗಳು ನಿವೃತ್ತರಾಗುತ್ತಿದ್ದಾರೆ. ಇದೀಗ ಮುಂಗಡವಾಗಿಯೇ ಸಾಕಷ್ಟು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಿಲಾಗಿದೆ. ಇದರಿಂದ ಹುದ್ದೆಗಳು ಖಾಲಿಯಾಗುವ ಸಾಧ್ಯತೆ ಇರುವುದಿಲ್ಲ. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನತೆಗೆ ಶೇ.10ರ ಮೀಸಲು ಕಲ್ಪಿಸಲಿರುವ ಮೊದಲ ಕೇಂದ್ರ ಸರಕಾರಿ ಸಂಸ್ಥೆ ರೈಲ್ವೆ ಆಗಲಿದೆ' ಎಂದು ಯಾದವ್‌ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 1.31 ಲಕ್ಷ ಹುದ್ದೆಗಳನ್ನು ಭರ್ತಿಗೊಳಿಸುವ ಪ್ರಕ್ರಿಯೆ ಫೆಬ್ರವರಿ-ಮಾರ್ಚ್‌ ಅವಧಿಯಲ್ಲಿ ನಡೆಯಲಿದೆ. ನಂತರ 2020ರ ತನಕ ನೇಮಕಾತಿಗಳು ಮುಂದುವರಿಯಲಿವೆ. ಇದೇ ಸಂದರ್ಭ ನಿವೃತ್ತರಾಗಲಿರುವ 99,000 ಸಿಬ್ಬಂದಿಯ ಹುದ್ದೆಗಳಿಗೂ ನೇಮಕ ನಡೆಯಲಿದೆ. ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಪ್ರಕ್ರಿಯೆಗಳನ್ನು ನಿರ್ವಹಿಸಲಿದೆ.

2.82 ಲಕ್ಷ ಹುದ್ದೆಗಳು ಖಾಲಿ: ರೈಲ್ವೆಯಲ್ಲಿ ಮಂಜೂರಾಗಿರುವ ಸಿಬ್ಬಂದಿ ಬಲ 15,06,598 ಆಗಿದೆ. ಇದರಲ್ಲಿ 12,23,622 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 2,82,976 ಹುದ್ದೆಗಳು ಖಾಲಿ ಇವೆ. 2019-29 ಮತ್ತು 2020-21ರಲ್ಲಿ ಅನುಕ್ರಮವಾಗಿ 53,000 ಮತ್ತು 46,000 ಸಿಬ್ಬಂದಿ ನಿವೃತ್ತರಾಗಲಿದ್ದಾರೆ. ಹೆಚ್ಚುವರಿ 90,000 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಅರ್ಹತೆ: ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್‌, ಯಾವುದೇ ವಿಷಯದಲ್ಲಿ ಪದವಿ ಪಡೆದವರಿಗೂ ಉದ್ಯೋಗಾವಕಾಶ ಸಿಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ