ಆ್ಯಪ್ನಗರ

ಆರಂಭಗೊಂಡ ಬೆನ್ನಲ್ಲೇ ಸ್ಥಗಿತಗೊಳ್ಳಲಿದೆ ಭಾರತದ ಅತ್ಯಂತ ಚಿಕ್ಕ ರೈಲು ಪ್ರಯಾಣ!

ಕಳೆದ ವಾರವಷ್ಟೇ ಆರಂಭವಾಗಿದ್ದ ಭಾರತದ ಅತ್ಯಂತ ಚಿಕ್ಕ ರೈಲು ಪ್ರಯಾಣ ಶೀಘ್ರದಲ್ಲೇ ಸ್ಥಗಿತಗೊಳ್ಳುವ ಲಕ್ಷಣ ಕಾಣಿಸುತ್ತಿದೆ. ಸದ್ಯ, ಕೇವಲ 9 ಕಿ.ಮೀ ದೂರವನ್ನು 50 ನಿಮಿಷಗಳಲ್ಲಿ ಈ ಡೆಮು ರೈಲು ಕ್ರಮಿಸುತ್ತಿದೆ.

Indiatimes 3 Oct 2018, 2:26 pm
ಕೊಚ್ಚಿ: ಕಳೆದ ವಾರವಷ್ಟೇ ಆರಂಭವಾಗಿದ್ದ ಭಾರತದ ಅತ್ಯಂತ ಚಿಕ್ಕ ರೈಲು ಪ್ರಯಾಣ ಶೀಘ್ರದಲ್ಲೇ ಸ್ಥಗಿತಗೊಳ್ಳುವ ಲಕ್ಷಣ ಕಾಣಿಸುತ್ತಿದೆ. ಕಾರ್ಯಾಚರಣೆ ನಡೆಸಲು ನಿರೀಕ್ಷಿತ ಪ್ರಯಾಣಿಕರಿಲ್ಲದ ಕಾರಣ ಭಾರತೀಯ ರೈಲ್ವೆ ಡೆಮು ರೈಲಿನ ಸೇವೆ ಸ್ಥಗಿತಗೊಳಿಸಲಿದೆ ಎಂದು ತಿಳಿದುಬಂದಿದೆ.
Vijaya Karnataka Web passenger_train


ಕೊಚ್ಚಿಯ ಹಲವು ರೈಲ್ವೆ ನಿಲ್ದಾಣಗಳ ನಡುವೆ ಈ ರೈಲು ದಿನಕ್ಕೆ 2 ಬಾರಿ ಸಂಚರಿಸುತ್ತಿದೆ. ಇನ್ನು, ಕೇವಲ 9 ಕಿ.ಮೀ ದೂರವನ್ನು 50 ನಿಮಿಷಗಳಲ್ಲಿ ಈ ಡೆಮು ರೈಲು ಕ್ರಮಿಸುತ್ತಿದೆ.

ರೈಲು ಖಾಲಿ ಖಾಲಿ!


ಈ ಬಗ್ಗೆ ತಿರುವನಂತಪುರಂನ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದು, ''ಕೊಚ್ಚಿನ್ ಹಾರ್ಬರ್ ಟರ್ಮಿನಸ್ ( ಸಿಎಚ್‌ಟಿ ) ಹಾಗೂ ಎರ್ನಾಕುಲಂ ಜಂಕ್ಷನ್ ನಡುವೆ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿತ್ತು. ಅದರೆ, ಈಗ ಈ ಸೇವೆಯನ್ನು ಮರು ಪರಿಶೀಲನೆ ನಡೆಸುತ್ತಿದ್ದು, ರದ್ದುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತಿದ್ದೇವೆ. ಪ್ರತಿದಿನ ಕೇವಲ 15ಕ್ಕಿಂತ ಕಡಿಮೆ ಟಿಕೆಟ್‌ಗಳು ಮಾರಾಟವಾಗುತ್ತಿದೆ. ಹೀಗಾಗಿ, ಇದನ್ನು ಬಳಸುವವರು ಇಲ್ಲವಾದಲ್ಲಿ ನಿಲ್ಲಿಸುವುದೇ ಮೇಲು. ಒಂದು ವಾರದಿಂದ ಈ ಸೇವೆ ಆರಂಭಗೊಂಡಿದ್ದು, ಒಂದು ದಿನ ಕೇವಲ ಇಬ್ಬರು ಪ್ರಯಾಣಿಕರಿದ್ದರೆ, ಮತ್ತೊಂದು ದಿನ ನಾಲ್ವರು ಮಾತ್ರ ಇದ್ದರು. ಹೀಗಾಗಿ ಜೋಕ್ ರೀತಿ ಆಗಿದೆ'' ಎಂದು ತಿಳಿಸಿದ್ದಾರೆ.

ಆದರೆ, ಪ್ರಯಾಣಿಕರು ಮಾತ್ರ ಭಾರತದ ಅತ್ಯಂತ ಚಿಕ್ಕ ರೈಲು ಪ್ರಯಾಣ ನಿಲ್ಲಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೈಲ್ವೆ ಸೇವೆಯನ್ನು ನಿಲ್ಲಿಸುವದರ ಬದಲಾಗಿ ಭಾರತೀಯ ರೈಲ್ವೆ ಅದನ್ನು ತ್ರಿಶೂರ್‌ ಅಥವಾ ಕೊಟ್ಟಾಯಂವರೆಗೆ ವಿಸ್ತರಿಸಬೇಕು. ಇದರಿಂದ ಕಚೇರಿಗೆ ಹೋಗುವವರಿಗೆ ಲಾಭವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ