ಆ್ಯಪ್ನಗರ

ರಜನೀಶ್‌ ಕುಮಾರ್‌ ಎಸ್‌ಬಿಐ ಅಧ್ಯಕ್ಷ

ಅರುಂಧತಿ ಭಟ್ಟಾಚಾರ್ಯ ಅಧಿಕಾರಾವಧಿ ಅಕ್ಟೋಬರ್‌ 6ಕ್ಕೆ ಕೊನೆಗೊಳ್ಳಲಿದೆ.

TNN 4 Oct 2017, 5:05 pm
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) ನೂತನ ಅಧ್ಯಕ್ಷರಾಗಿ ರಜನೀಶ್‌ ಕುಮಾರ್‌ ನೇಮಕಗೊಂಡಿದ್ದಾರೆ.
Vijaya Karnataka Web rajnish kumar is the next sbi chairman
ರಜನೀಶ್‌ ಕುಮಾರ್‌ ಎಸ್‌ಬಿಐ ಅಧ್ಯಕ್ಷ


ದೇಶದ ಪ್ರಮುಖ ಬ್ಯಾಂಕ್‌ ಆದ ಎಸ್‌ಬಿಐಗೆ ನೂತನ ಅಧ್ಯಕ್ಷರನ್ನು ನೇಮಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಸಿಬ್ಬಂದಿ ನೇಮಕಾತಿ ಕುರಿತ ಸಂಪುಟ ಸಮಿತಿ ರಜನೀಶ್‌ ನೇಮಕವನ್ನು ಅಂತಿಮಗೊಳಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಹಾಲಿ ಅಧ್ಯಕ್ಷರಾದ ಅರುಂಧತಿ ಭಟ್ಟಾಚಾರ್ಯ ಅವರ ಅಧಿಕಾರಾವಧಿ ಅಕ್ಟೋಬರ್‌ 6ರಂದು ಕೊನೆಗೊಳ್ಳಲಿದೆ. ಅಕ್ಟೋಬರ್‌ 7 ರಂದು ರಜನೀಶ್‌ ಕುಮಾರ್‌ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಎಸ್‌ಬಿಐ ಅಧ್ಯಕ್ಷರಾಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಕೀರ್ತಿ ಅರುಂಧತಿ ಅವರದ್ದಾಗಿದೆ.

1980ರಲ್ಲಿ ಎಸ್‌ಬಿಐಗೆ ಸೇರ್ಪಡೆಗೊಂಡಿದ್ದ ರಜನೀಶ್‌ ಕುಮಾರ್‌ ಸುದೀರ್ಘ ಅವಧಿಯವರೆಗೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ಈ ಹಿಂದಿನಿಂದಲೂ ಎಸ್‌ಬಿಐ ಒಂದು ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದೆ. ಎಸ್‌ಬಿಐ ಸಿಬ್ಬಂದಿಯನ್ನೇ ಅತ್ಯುನ್ನತ ಹುದ್ದೆಗೆ ನೇಮಿಸಲಾಗಿದೆ. ಈ ಬಾರಿಯೂ ಅದು ಮುಂದುವರಿದಿದೆ.

Rajnish Kumar is the next SBI chairman

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ