ಆ್ಯಪ್ನಗರ

ಚೊಚ್ಚಲ ಬೋಯಿಂಗ್ ವಿಮಾನ ಸ್ವೀಕರಿಸಿದ ಆಕಾಶ ಏರ್‌, ರೆಕ್ಕೆ ಬಡಿಯಲು ಸಜ್ಜಾದ ಹೊಸ ವಿಮಾನ ಸಂಸ್ಥೆ

ರಾಕೇಶ್ ಝುಂಝುನ್‌ವಾಲಾ ಒಡೆತನದ ಆಕಾಶ ಏರ್ ತನ್ನ ಮೊದಲ ವಿಮಾನ ‘ಬೋಯಿಂಗ್ 737 ಮ್ಯಾಕ್ಸ್‌’ನ ವಿತರಣೆಯನ್ನು ಅಮೆರಿಕದ ಸಿಯಾಟಲ್‌ನಲ್ಲಿ ಸ್ವೀಕರಿಸಿದೆ. ಈ ಹೊಸ ವಿಮಾನಯಾನ ಸಂಸ್ಥೆ ಜುಲೈನಲ್ಲಿ ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಲು ಯೋಜಿಸಿದೆ.

THE ECONOMIC TIMES 16 Jun 2022, 4:57 pm
ಷೇರು ಹೂಡಿಕೆದಾರ ರಾಕೇಶ್ ಝುಂಝುನ್‌ವಾಲಾ ಒಡೆತನದ ಆಕಾಶ ಏರ್ ತನ್ನ ಮೊದಲ ವಿಮಾನ ‘ಬೋಯಿಂಗ್ 737 ಮ್ಯಾಕ್ಸ್‌’ನ ವಿತರಣೆಯನ್ನು ಸಿಯಾಟಲ್‌ನಲ್ಲಿ ಸ್ವೀಕರಿಸಿದೆ. ಕಂಪನಿಯು ಒಟ್ಟು 72 ವಿಮಾನಗಳಿಗೆ ಆರ್ಡರ್ ನೀಡಿದ್ದು, ಮಾರ್ಚ್ 2023ರ ವೇಳೆಗೆ 18 ವಿಮಾನಗಳನ್ನು ಪಡೆಯುವ ಗುರಿಯನ್ನು ಹೊಂದಿರುವುದಾಗಿ ಆಕಾಶ ಏರ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Vijaya Karnataka Web Akasa Air


"ಹೆಚ್ಚಿನ ಇಂಧನ ದಕ್ಷತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚದ 737 ಮ್ಯಾಕ್ಸ್‌ ವಿಮಾನವನ್ನು ಹಾರಿಸುವುದರಿಂದ, ಆ ಉಳಿತಾಯವನ್ನು ತನ್ನ ಪ್ರಯಾಣಿಕರಿಗೆ ವರ್ಗಾಯಿಸಿ ಭಾರತೀಯ ಮಾರುಕಟ್ಟೆಯಲ್ಲಿ ಲಾಭದಾಯಕ ಸೇವೆ ಸಲ್ಲಿಸಲು ಆಕಾಶ ಏರ್‌ಗೆ ಅವಕಾಶ ಸಿಗುತ್ತದೆ,” ಎಂದು ಬೋಯಿಂಗ್ ಕಮರ್ಷಿಯಲ್ ಏರ್‌ಪ್ಲೇನ್ಸ್‌ನ ಅಧ್ಯಕ್ಷ ಮತ್ತು ಸಿಇಒ ಸ್ಟಾನ್ ಡೀಲ್ ಹೇಳಿದ್ದಾರೆ.

ಜೆಟ್ ಏರ್‌ವೇಸ್‌ನ ಮಾಜಿ ಮುಖ್ಯಸ್ಥ ವಿನಯ್ ದುಬೆ ಈ ವಿಮಾನಯಾನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ಈಗಾಗಲೇ 154 ಪೈಲಟ್‌ಗಳು, 115 ಕ್ಯಾಬಿನ್ ಅಟೆಂಡೆಂಟ್‌ಗಳು ಮತ್ತು 14 ಇಂಜಿನಿಯರ್‌ಗಳನ್ನು ಸಂಸ್ಥೆಗೆ ಸೇರಿಸಿಕೊಂಡಿದ್ದಾರೆ. ಇಂಡಿಗೋ ಮಾಜಿ ಅಧ್ಯಕ್ಷ ಆದಿತ್ಯ ಘೋಷ್ ಸಹ ಸಂಸ್ಥಾಪಕರಾಗಿರುವ ಈ ಹೊಸ ವಿಮಾನಯಾನ ಸಂಸ್ಥೆ ಜುಲೈನಲ್ಲಿ ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಲು ಯೋಜಿಸಿದೆ.

ಹೊಸ ವಿಮಾನದ ಚಿತ್ರ ಹಂಚಿಕೊಂಡ ಆಕಾಶ ಏರ್‌, ಜುಲೈನಿಂದ ಝುಂಝುನ್‌ವಾಲಾ ಕಂಪನಿಯ ಯಾನ ಶುರು
ಆಕಾಶ ಏರ್‌ ಕಡೆಯಿಂದ ಒಂದಿಷ್ಟು ಪ್ರಕ್ರಿಯೆಗಳು ಬಾಕಿ ಉಳಿದಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಲೈಸನ್ಸ್‌ಗೂ ಮೊದಲಿನ ಕೆಲವು ಪ್ರಕ್ರಿಯೆಗಳಿಗೆ ಶೀಘ್ರದಲ್ಲೇ ಆಕಾಶ ಏರ್‌ನ್ನು ಕರೆಸಿಕೊಳ್ಳಲಿದೆ.

ಒಮ್ಮೆ ಆಕಾಶ ಏರ್‌ಗೆ ಪರವಾನಗಿ ಸಿಗುತ್ತಿದ್ದಂತೆ ಇದು ಭಾರತದ 7ನೇ ವಿಮಾನಯಾನ ಸಂಸ್ಥೆ ಎನಿಸಿಕೊಳ್ಳಲಿದೆ. ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ, ಸ್ಪೈಸ್‌ಜೆಟ್, ಗೋ ಏರ್‌ಲೈನ್ಸ್ ಮತ್ತು ಜೆಟ್ ಏರ್‌ವೇಸ್‌ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶೀಯ ಸಂಸ್ಥೆಗಳಾಗಿವೆ. ಟಾಟಾ ಒಡೆತನದಲ್ಲಿರುವ ಏರ್ ಏಷ್ಯಾ ಇಂಡಿಯಾವನ್ನು ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ಖರೀದಿಸಲಿದ್ದು, ಅದರ ಅಂಗಸಂಸ್ಥೆಯಾಗಲಿದೆ.

ಎಸ್‌ಎನ್‌ವಿ ಏವಿಯೇಷನ್ ಎಂದು ನೋಂದಾಯಿಸಲಾಗಿರುವ ಆಕಾಶ ಏರ್‌, ಆರಂಭಿಕ ನಿಯಂತ್ರಕ ಅನುಮೋದನೆ, ಅಕ್ಟೋಬರ್ 11 ರಂದು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಸ್ವೀಕರಿಸಿದೆ ಮತ್ತು ಇದೀಗ ಎಒಪಿಗೆ ಅರ್ಜಿ ಸಲ್ಲಿಸಿದೆ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ