ಆ್ಯಪ್ನಗರ

ಸರಕಾರದ ಆಟ ಟಿ20 ರೀತಿಯದಾದರೆ, ನಮ್ಮದು ಟೆಸ್ಟ್‌ ಮ್ಯಾಚ್‌

ಆರ್‌ಬಿಐ ಸ್ವಾಯತ್ತತೆ ಗೌರವಿಸದೇ ಹೋದರೆ ಆರ್ಥಿಕತೆಗೆ ತೊಡಕು: ವಿರಳ್‌ ಆಚಾರ್ಯ

Vijaya Karnataka Web 28 Oct 2018, 5:00 am
ಮುಂಬಯಿ: ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ(ಆರ್‌ಬಿಐ) ಸ್ವಾಯತ್ತತೆಯ ಅಗತ್ಯವನ್ನು ಮತ್ತೆ ಒತ್ತಿ ಹೇಳಿರುವ ಡೆಪ್ಯುಟಿ ಗವರ್ನರ್‌ ವಿರಳ್‌ ವಿ ಆಚಾರ್ಯ, ''ಬ್ಯಾಂಕ್‌ನ ಸಾರ್ವಭೌಮತ್ವವನ್ನು ಸರಕಾರ ಗೌರವಿಸದೇ ಹೋದರೆ, ಹಣಕಾಸು ಮಾರುಕಟ್ಟೆ ಕುಸಿಯಲಿದೆ,'' ಎಂದು ಎಚ್ಚರಿಸಿದ್ದಾರೆ.
Vijaya Karnataka Web rbi deputy governor slams govt again
ಸರಕಾರದ ಆಟ ಟಿ20 ರೀತಿಯದಾದರೆ, ನಮ್ಮದು ಟೆಸ್ಟ್‌ ಮ್ಯಾಚ್‌


ಈ ಸಂಗತಿಯನ್ನು ಕ್ರಿಕೆಟ್‌ ಪರಿಭಾಷೆಯಲ್ಲಿ ವಿವರಿಸಿದ ಅವರು, ''ಸರಕಾರ ತೆಗೆದುಕೊಳ್ಳುವ ತೀರ್ಮಾನಗಳು ಟಿ20 ಮ್ಯಾಚ್‌ನಂತೆ ಅಲ್ಪಾವಧಿಯನ್ನು ಹೊಂದಿರುತ್ತವೆ. ಆದರೆ, ಆರ್‌ಬಿಐ ಕಾರ್ಯನಿರ್ವಹಣೆಯು ಟೆಸ್ಟ್‌ ಮ್ಯಾಚ್‌ನಂತೆ ಇರುತ್ತದೆ. ಪ್ರತಿ ಮ್ಯಾಚ್‌ ಅನ್ನು ಗೆಲ್ಲಲು ಪ್ರಯತ್ನಿಸುತ್ತದೆ. ಅಲ್ಲದೇ, ಮುಂದಿನ ಅವಧಿಯಲ್ಲಿಯೂ ಗೆಲುವನ್ನು ಸಾಧಿಸಲು ಆಟವನ್ನು ಉಳಿಸಿಕೊಳ್ಳುತ್ತದೆ,'' ಎಂದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ''1935ರ ಆರ್‌ಬಿಐ ಕಾಯ್ದೆ ಹಾಗೂ 1949ರ ಬ್ಯಾಂಕಿಂಗ್‌ ರೆಗ್ಯುಲೇಶನ್‌ ಕಾಯ್ದೆಗಳನ್ವಯ ಆರ್‌ಬಿಐಗೆ ಅನೇಕ ಪ್ರಮುಖ ಅಧಿಕಾರಗಳಿವೆ. ಆದರೆ, ಅವುಗಳನ್ನು ಪರಿಣಾಮಕಾರಿಯಾಗಿ ಚಲಾಯಿಸಲು ಸ್ವಾಯತ್ತತೆ ಅಗತ್ಯವಿದೆ,'' ಎಂದು ಹೇಳಿದ್ದಾರೆ.

''ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ನಿಭಾಯಿಸಲು ಆರ್‌ಬಿಐಗೆ ಈಗಿರುವ ಅಧಿಕಾರ ಸಾಲದು. ಹೀಗಾಗಿ, ತಪ್ಪೆಸಗುವ ಇಂಥ ಬ್ಯಾಂಕ್‌ಗಳ ವಿರುದ್ಧ ಕ್ರಮ ಜರುಗಿಸಲು ಆರ್‌ಬಿಐಗೆ ಅಧಿಕಾರದ ಮಿತಿ ಎದುರಾಗಿದೆ,'' ಎಂದು ಆಚಾರ್ಯ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ