ಆ್ಯಪ್ನಗರ

ಬಡವರಿಗೆ 72,000 ರೂ. ವಿತರಣೆ ಸುಲಭವಲ್ಲ: ರಾಜನ್‌

ಬಡವರಿಗೆ 72,000 ರೂ. ನೀಡುವ ಯೋಜನೆಗೆ ಹೆಚ್ಚುವರಿ 7 ಲಕ್ಷ ಕೋಟಿ ರೂ. ಬೇಕಾಗಲಿದೆ. ಆರ್ಥಿಕ ಪರಿಸ್ಥಿತಿ ಸದ್ಯಕ್ಕೆ ಪೂರಕವಾಗಿಲ್ಲ.

Vijaya Karnataka Web 26 Mar 2019, 8:21 pm
ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರು ತಮ್ಮ ಪಕ್ಷ ಗೆದ್ದರೆ ಬಡವರಿಗೆ ವಾರ್ಷಿಕ 72,000 ರೂ. ವಿತರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದು ಸುಲಭವಲ್ಲ ಎಂದು ಆರ್‌ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿದ್ದಾರೆ.
Vijaya Karnataka Web Rajan


ಮುಂದಿನ ಸರಕಾರಕ್ಕೆ ಆರ್ಥಿಕ ದೃಷ್ಟಿಯಿಂದ ಇಂಥ ಯೋಜನೆ ಸಾಧ್ಯವೇ ಎಂದು ಪ್ರಶ್ನಿಸಿದರೆ, ಸಾಧ್ಯವಿಲ್ಲ ಎಂಬುದೇ ನನ್ನ ಉತ್ತರ ಎಂದು ರಾಜನ್‌ ಹೇಳಿದ್ದಾರೆ.

ಬಡವರಿಗೆ 72,000 ರೂ. ನೀಡುವ ಯೋಜನೆಗೆ ಹೆಚ್ಚುವರಿ 7 ಲಕ್ಷ ಕೋಟಿ ರೂ. ಬೇಕಾಗಲಿದೆ. ಆರ್ಥಿಕ ಪರಿಸ್ಥಿತಿ ಸದ್ಯಕ್ಕೆ ಪೂರಕವಾಗಿಲ್ಲ ಎಂದು ಅವರು ಹೇಳಿದರು. ಭಾರತಕ್ಕೆ ಈಗ ಬೇಕಾಗಿರುವುದು ಪ್ರಬಲ ಆರ್ಥಿಕ ಸುಧಾರಣೆಯ ಕ್ರಮಗಳು. ಹಾಗೂ ಆ ಮೂಲಕ ಆರ್ಥಿಕ ಬೆಳವಣಿಗೆ ಮುಖ್ಯ ಎಂದಿದ್ದಾರೆ.

ಭಾರತದ ಆರ್ಥಿಕ ಪ್ರಗತಿ ಶೇ.7ರ ದರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದರ ಬಗ್ಗೆ ತಮಗೆ ಅನುಮಾನ ಇದೆ ಎಂದೂ ಆರ್‌ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ತಿಳಿಸಿದ್ದಾರೆ. ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲವಾದ್ದರಿಂದ ಶೇ.7ರ ದರದಲ್ಲಿ ಜಿಡಿಪಿ ಬೆಳವಣಿಗೆಯಾಗುತ್ತಿರುವುದರ ಬಗ್ಗೆ ಸಂದೇಹ ಇದೆ ಎಂದು ಅವರು ಹೇಳಿದ್ದಾರೆ.

ಹಿಂದೊಮ್ಮೆ ತಮ್ಮ ಬಳಿ ಮಾತನಾಡುವ ಸಂದರ್ಭ ಕೇಂದ್ರ ಸಚಿವರೊಬ್ಬರೇ ಜಿಡಿಪಿ ಶೇ.7ರ ಮಟ್ಟದಲ್ಲಿ ಬೆಳೆಯುತ್ತಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ರಾಜನ್‌ ಹೇಳಿದ್ದಾರೆ. ಆದರೆ ಸಚಿವರ ಹೆಸರು ಬಹಿರಂಗಪಡಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ