ಹೊಸದಿಲ್ಲಿ: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ-ಆಪರೇಟಿವ್ (ಪಿಎಂಸಿ ಬ್ಯಾಂಕ್) ಅನ್ನು ಸೆಂಟ್ರುಮ್ ಫೈನಾನ್ಷಿಯಲ್ ಸರ್ವೀಸ್ಗೆ ಮಾರಾಟ ಮಾಡುವ ಪ್ರಸ್ತಾಪಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಾತ್ವಿಕ ಅನುಮೋದನೆ ನೀಡಿದೆ. ಆರ್ಬಿಐನ ಮಾರ್ಗದರ್ಶಿಯ ಪ್ರಕಾರ ಸೆಂಟ್ರುಮ್ ಫೈನಾನ್ಷಿಯಲ್ ಸರ್ವೀಸ್ ಕಿರು ಹಣಕಾಸು ಬ್ಯಾಂಕ್ ಅನ್ನು ರಚಿಸಲಿದೆ. ಪಿಎಂಸಿ ಬ್ಯಾಂಕ್ ಸ್ವಾಧೀನಕ್ಕೆ 'ಭಾರತ್ ಪೇ ಮತ್ತು ಸೆಂಟ್ರುಮ್ ಗ್ರೂಪ್' ಸೇರಿದಂತೆ 4 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು.
2019ರ ಸೆಪ್ಟೆಂಬರ್ನಲ್ಲಿ ಆರ್ಬಿಐ, ಅವ್ಯವಹಾರಗಳ ಆರೋಪದ ಹಿನ್ನೆಲೆಯಲ್ಲಿ ಪಿಎಂಸಿ ಬ್ಯಾಂಕ್ ಅನ್ನು ಸೂಪರ್ಸೀಡ್ ಮಾಡಿತ್ತು. ಬ್ಯಾಂಕ್ ಒಟ್ಟು 10,727 ಕೋಟಿ ರೂ. ಠೇವಣಿ, 4,472 ಕೋಟಿ ರೂ. ಮುಂಗಡ, 3,518 ಕೋಟಿ ರೂ. ವಸೂಲಾಗದ ಸಾಲವನ್ನು (ಎನ್ಪಿಎ) ಹೊಂದಿದೆ. 292 ಕೋಟಿ ರೂ.ಗಳ ಷೇರು ಬಂಡವಾಳ ಹೊಂದಿದೆ.
ಮುಂಬಯಿ ಮೂಲದ ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ 1984ರಲ್ಲಿ ಸ್ಥಾಪನೆಯಾಗಿದ್ದು, ಮಹಾರಾಷ್ಟ್ರ, ಕರ್ನಾಟಕ, ಗೋವಾ, ದಿಲ್ಲಿ, ಗುಜರಾತ್, ಮಧ್ಯ ಪ್ರದೇಶದಲ್ಲಿ ಶಾಖೆಗಳನ್ನು ಹೊಂದಿದೆ.