ಆ್ಯಪ್ನಗರ

350 ರೂ. ಮುಖಬೆಲೆಯ ವಿಶೇಷ ನಾಣ್ಯ ಹೊರತಂದ ಆರ್‌ಬಿಐ

ಸಿಖ್ ಧರ್ಮದ 10ನೇ ಗುರುವಾಗಿರುವ ಗುರು ಗೋಬಿಂದ್ ಸಿಂಗ್ ಅವರ 350ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 350 ರೂ. ಮುಖಬೆಲೆಯ ವಿಶೇಷ ನಾಣ್ಯವನ್ನು ಹೊರತಂದಿದೆ.

THE ECONOMIC TIMES 27 Mar 2018, 3:40 pm
ಹೊಸದಿಲ್ಲಿ: ಸಿಖ್ ಧರ್ಮದ 10ನೇ ಗುರುವಾಗಿರುವ ಗುರು ಗೋಬಿಂದ್ ಸಿಂಗ್ ಅವರ 350ನೇ ಜನ್ಮ ವಾರ್ಷಿಕೋತ್ಸವದ ಗೌರವ ಸೂಚಕವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 350 ರೂ. ಮುಖಬೆಲೆಯ ವಿಶೇಷ ನಾಣ್ಯವನ್ನು ಹೊರತಂದಿದೆ.
Vijaya Karnataka Web rbi-01


ಇಲ್ಲಿ ಗಮನಾರ್ಹ ಸಂಗತಿಯೆಂದರೆ ನೂತನ 350 ರೂ.ಗಳ ನಾಣ್ಯವು ಸೀಮಿತ ಸಂಖ್ಯೆಯಲ್ಲಿ ಮಾತ್ರ ಚಲಾವಣೆಯಾಗಲಿದೆ.

ನಾಣ್ಯದ ಸುತ್ತಳತೆ 44 ಮಿಲ್ಲಿಮೀಟರ್ ಆಗಿದ್ದು, ಶೇಕಡಾ 50ರಷ್ಟು ಬೆಳ್ಳಿ, ಶೇ. 40ರಷ್ಟು ತಾಮ್ರ, ಶೇ. 05ರಷ್ಟು ನಿಕಲ್ ಹಾಗೂ ಶೇ.05ರಷ್ಟು ಸತು ಮಿಶ್ರಣವಾಗಿರಲಿದೆ.

34.65 ಗ್ರಾಂನಿಂದ 35.35 ಗ್ರಾಂ ಭಾರದ 350 ರೂ. ನಾಣ್ಯದ ಮುಂಭಾಗವು 'ಅಶೋಕ ಸ್ತಂಭ'ದಿಂದ ಕಂಗೊಳಿಸಲಿದೆ. ಇದರ ಕೆಳಗಡೆಯಾಗಿ 'ಸತ್ಯಮೇವ ಜಯತೇ' ಉಲ್ಲೇಖಿಸಿರುತ್ತದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ನಾಣ್ಯದ ಮಗದೊಂದು ಬದಿಯಲ್ಲಿ 'ತಕ್ತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹೀಬ್' ಚಿತ್ರವು ಇರಲಿದೆ. ಇದರ ಮೇಲ್ಗಡೆ ಶ್ರೀ ಗುರು ಗೋಬಿಂದ್ ಸಿಂಗ್ ಜೀ ಅವರ 350ನೇ ಪ್ರಕಾಶ್ ಉತ್ಸವವನ್ನು ದೇವನಾಗರಿ ಲಿಪಿಯಲ್ಲಿ ಹಾಗೂ ಕೆಳಗಡೆ ಆಂಗ್ಲ ಭಾಷೆಯಲ್ಲಿ ಉಲ್ಲೇಖಿಸಿಲಾಗುತ್ತದೆ.

ಸಿಖ್ ಧರ್ಮದ 10ನೇ ಗುರು ಗೋಬಿಂಗ್ ಸಿಂಗ್ ಅವರು 1666ನೇ ಇಸವಿಯಲ್ಲಿ ಜನಿಸಿದ್ದರು. ಅವರು ವೀರಯೋಧ, ಕವಿ ಹಾಗೂ ತತ್ವ ಜ್ಞಾನಿ ಮಾತ್ರವಲ್ಲದೆ ಸಿಖ್ ಧರ್ಮದ ನಾಯಕರಾಗಿದ್ದರು. ಅವರು ಮಾನವತ್ವಕ್ಕೆ ಪರಿಪೂರ್ಣ ಉದಾಹರಣೆಯಾಗಿದ್ದಾರೆ.

ಅಂದ ಹಾಗೆ 350 ರೂ. ಮುಖಬೆಲೆಯ ನಾಣ್ಯವನ್ನು ಎಷ್ಟು ಸಂಖ್ಯೆಯಲ್ಲಿ ಆರ್‌ಬಿಐ ಮುದ್ರಿಸಲಿದೆ ಎಂಬುದು ತಿಳಿದು ಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ